ಕೊಹ್ಲಿ, ರೋಹಿತ್ ಶರ್ಮಾ ಕೋಟಿ ಕೋಟಿ ಗಳಿಸಿದ್ದು ಕ್ರಿಕೆಟ್‌ನಿಂದಲ್ಲ, ಅಣ್ಣತಂಗಿಯ ಈ ಕಂಪೆನಿ ಡೀಲ್‌ನಿಂದ!

By Vinutha Perla  |  First Published Sep 12, 2023, 10:29 AM IST

ಕ್ರಿಕೆಟರ್ಸ್ ಕೇವಲ ಆಟದಿಂದ ಮಾತ್ರವಲ್ಲ ಅದನ್ನು ಹೊರತುಪಡಿಸಿ ಉದ್ಯಮ, ಆಡ್‌ಗಳ ಮೂಲಕವೂ ಕೋಟಿ ಕೋಟಿ ಸಂಪಾದಿಸುತ್ತಾರೆ. ಅದರಲ್ಲೂ ಅಣ್ಣ-ತಂಗಿ ನಡೆಸ್ತಿರೋ ಈ ಕಂಪೆನಿಯೊಂದ ಕೊಹ್ಲಿ, ರೋಹಿತ್ ಶರ್ಮಾ ಅವರಂಥಾ ಆಟಗಾರರು ಕೋಟಿ ಕೋಟಿ ಸಂಪಾದಿಸೋಕೆ ನೆರವಾಗ್ತಿದೆ ಅನ್ನೋದು ನಿಮ್ಗೊತ್ತಾ?


ಕ್ರಿಕೆಟರ್ಸ್ ಕೇವಲ ಆಟದಿಂದ ಮಾತ್ರವಲ್ಲ ಅದನ್ನು ಹೊರತುಪಡಿಸಿ ಉದ್ಯಮ, ಆಡ್‌ಗಳ ಮೂಲಕವೂ ಕೋಟಿ ಕೋಟಿ ಸಂಪಾದಿಸುತ್ತಾರೆ. ಈ ರೀತಿಯ ಹಲವು ಕಂಪೆನಿಗಳ ಸಹಾಯದಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು ನೂರಾರು ಕೋಟಿಗಳ ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಬ್ರ್ಯಾಂಡ್ ಡೀಲ್‌ಗಳು ಮತ್ತು ಎಂಡಾರ್ಸ್‌ಮೆಂಟ್‌ಗಳ ಮೂಲಕ ಹೆಚ್ಚು ಆಸ್ತಿಯನ್ನು ಗಳಿಸಲು ಸಾಧ್ಯವಾಗ್ತಿದೆ. ಆದರೆ ಇದಲ್ಲದೆಯೂ ಸಹೋದರ-ಸಹೋದರಿಯರಿಬ್ಬರು ಸೇರಿಸಿ ಆರಂಭಿಸಿದ ಬೃಹತ್ ಕ್ರೀಡಾ ಕಂಪೆನಿಯೊಂದು ಕ್ರಿಕೆಟರ್ಸ್‌ಗೆ ದೊಡ್ಡ ದೊಡ್ಡ ಡೀಲ್‌ಗಳನ್ನು ಪಡೆಯಲು ನೆರವಾಗ್ತಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

ಹೌದು, ಬ್ರದರ್ಸ್‌, ಸಿಸ್ಟರ್ಸ್‌ ಬಂಟಿ ಸಜ್ದೇಹ್ ಮತ್ತು ರಿತಿಕಾ ಸಜ್ದೇಹ್ ಇಬ್ಬರು ಯಶಸ್ವಿ ಕ್ರೀಡಾ ನಿರ್ವಹಣಾ ವೃತ್ತಿಪರರು. ತಮ್ಮ ಕಂಪನಿ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಮೂಲಕ ಇಬ್ಬರು ಮಾಜಿ ಭಾರತೀಯ ತಂಡದ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಒಪ್ಪಂದಗಳನ್ನು ನಿರ್ವಹಿಸಿದ್ದಾರೆ.

Latest Videos

undefined

ಈ MNC ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ ದಾದಾ ಮಗಳು ಸನಾ ಗಂಗೂಲಿ..! ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ?

ಬಂಟಿ ಸಜ್ದೇಹ್ ಮತ್ತು ರಿತಿಕಾ ಸಜ್ದೇಹ್ ಆರಂಭಿಸಿದ ಕಂಪೆನಿ
ಕಾರ್ನರ್‌ಸ್ಟೋನ್ ಉದ್ಯಮಿ ಬಂಟಿ ಸಜ್ದೇಹ್ ನೇತೃತ್ವದ ಕ್ರೀಡಾ ಮತ್ತು ಪ್ರತಿಭೆ ನಿರ್ವಹಣಾ ಕಂಪನಿಯಾಗಿದೆ. ಬಂಟಿ ತನ್ನ ಸಹೋದರಿಯೊಂದಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆರಂಭಿಕ ಹಂತಗಳಲ್ಲಿ ಒಪ್ಪಂದಗಳಿಗೆ (Deal) ಸಹಿ ಹಾಕುವ ಮೂಲಕ ಈ ವ್ಯವಹಾರವನ್ನು (Business) ಪ್ರಾರಂಭಿಸಿದರು, ನಂತರ ಅದನ್ನು ಚಿತ್ರರಂಗಕ್ಕೆ ವಿಸ್ತರಿಸಿದರು ಎಂದು ತಿಳಿದುಬಂದಿದೆ. 

ಒಡಹುಟ್ಟಿದ ಬಂಟಿ ಮತ್ತು ರಿತಿಕಾ ಸಜ್ದೇಹ್ ಅವರು ವಿರಾಟ್ ಕೊಹ್ಲಿಗೆ ಕೋಟಿಗಟ್ಟಲೆ ಮೌಲ್ಯದ ಅನೇಕ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ಮಾಡಲು ಸಹಾಯ ಮಾಡಿದರು, ಉದಾಹರಣೆಗೆ ಅಡಿಡಾಸ್ ಮತ್ತು ಇತರ ಪ್ರಮುಖ ಬ್ರ್ಯಾಂಡ್‌ಗಳೊಂದಿಗಿನ ಅವರ ಬ್ರ್ಯಾಂಡ್ ಒಪ್ಪಂದ ಈ ಕಂಪೆನಿಯಿಂದಲೇ ದೊರಕಿದೆ.. ಬಂಟಿ ಸಜ್ದೇಹ್ ಕೂಡ ಕೊಹ್ಲಿಯೊಂದಿಗೆ ನಿಕಟ ಸ್ನೇಹಿತ (Friend)ರಾಗಿದ್ದಾರೆ ಮತ್ತು ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಲಂಡನ್‌ ಕಾಲೇಜಿನಿಂದ ಅರ್ಥಶಾಸ್ತ್ರದ ಪದವಿ ಪಡೆದ ಪುತ್ರಿ, ಹೆಮ್ಮೆಯಿಂದ ಬೀಗಿದ ಟೀಮ್‌ ಇಂಡಿಯಾ ಮಾಜಿ ನಾಯಕ!

2008ರಲ್ಲಿ ಕಂಪೆನಿ ಆರಂಭಿಸಿದ ಅಣ್ಣ-ತಂಗಿ
ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಅನ್ನು 2008ರಲ್ಲಿ ಬಂಟಿ ಸಜ್ದೇಹ್ ಅವರು ಪ್ರಾರಂಭಿಸಿದರು ಮತ್ತು ವಿರಾಟ್ ಕೊಹ್ಲಿಯ ಸ್ಪೋರ್ಟ್ಸ್ ಅಪ್ಯಾರಲ್ ಕಂಪನಿ ಪೂಮಾದಿಂದ 100 ಕೋಟಿ ರೂಪಾಯಿಗಳ ಅನುಮೋದನೆ ಕಂಪನಿಯ ಮೊದಲ ವ್ಯವಹಾರಗಳಲ್ಲಿ ಒಂದಾಗಿದೆ. ರಿತಿಕಾ ಸಜ್ದೇಹ್ ಮತ್ತು ಬಂಟಿ ಸಜ್ದೇ ಅವರ ಏಜೆನ್ಸಿ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್‌ನ ಇತರ ಕೆಲವು ಗ್ರಾಹಕರು ಪ್ರಸಿದ್ಧ ಕ್ರೀಡಾಪಟುಗಳು ಮತ್ತು ಬಾಲಿವುಡ್ ನಟರಾದ ಪಿವಿ ಸಿಂಧು, ಸಾನಿಯಾ ಮಿರ್ಜಾ, ಕುಲದೀಪ್ ಯಾದವ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ವಿಜಯ್ ದೇವರಕೊಂಡ ಮೊದಲಾದವರು.

ಟೋಫ್ಲರ್ ಪ್ರಕಾರ, ಬಂಟಿ ಸಜ್ದೇಹ್ ಮತ್ತು ರಿತಿಕಾ ಸಜ್ದೇಹ್ ಅವರ ಕಂಪನಿ ಕಾರ್ನರ್‌ಸ್ಟೋನ್ 150 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಂಪೆನಿಯು ಪ್ರಸ್ತುತ ಹಲವಾರು ದೊಡ್ಡ ವ್ಯಕ್ತಿಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಿಂದ ನಿರಂತರ ಆದಾಯವನ್ನು ಗಳಿಸುತ್ತಿದ್ದಾರೆ.

ಸಜ್ದೇಹ್‌ಗಳು ನಿಜವಾಗಿ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಿಗೆ ಸಂಬಂಧಿಸಿದ್ದಾರೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಈ ಹಿಂದೆ ವಿರಾಟ್ ಕೊಹ್ಲಿಯ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರು ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ, ಬಂಟಿ ಸಜ್ದೇಹ್ ಅವರ ಸೋದರ ಮಾವ ಆಗಿದ್ದಾರೆ.

click me!