ಹನ್ನೊಂದು ತಿಂಗಳೊಳಗೆ ಬಾಡಿಗೆ ಮನೆ ಖಾಲಿ ಮಾಡ್ಬಹುದಾ?

Published : Feb 20, 2024, 05:29 PM IST
ಹನ್ನೊಂದು ತಿಂಗಳೊಳಗೆ ಬಾಡಿಗೆ ಮನೆ ಖಾಲಿ ಮಾಡ್ಬಹುದಾ?

ಸಾರಾಂಶ

ಬಾಡಿಗೆ ಮನೆಗೆ ಹೋಗುವವರು ಹಾಗೂ ಮನೆಯನ್ನು ಬಾಡಿಗೆಗೆ ಕೊಡುವವರು ಸದಾ ಎಚ್ಚರಿಕೆ ಹೆಜ್ಜೆ ಇಡಬೇಕು. ಅನೇಕ ಬಾರಿ ಇಬ್ಬರ ಮಧ್ಯೆ ನಡೆಯುವ ಸಮಸ್ಯೆ ದೊಡ್ಡದಾಗುತ್ತದೆ. ಯಾವುದೇ ರಗಳೆ ಆಗ್ಬಾರದು ಅಂದ್ರೆ ಕರಾರು ಪತ್ರ ಸ್ಪಷ್ಟವಾಗಿರಬೇಕು.   

ರಾಷ್ಟ್ರ ರಾಜಧಾನಿ ದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲ ಸಣ್ಣ ತಾಲೂಕಾ ಕೇಂದ್ರಗಳಲ್ಲೂ ಈಗ ಮನೆ ಬಾಡಿಗೆಗೆ ಜನ ಬರ್ತಾರೆ. ಹಳ್ಳಿಗಳಲ್ಲಿ ಶಾಲೆ, ಪಂಚಾಯತಿ ಕೆಲಸಕ್ಕೆ ನೇಮಕವಾಗುವ ಉದ್ಯೋಗಿಗಳು ಅಲ್ಲಿಯೇ ಮನೆಯನ್ನು ಬಾಡಿಗೆಗೆ ಹುಡುಕುತ್ತಾರೆ. ಮನೆ ನಿರ್ಮಾಣ ಮಾಡಿ ಅದನ್ನು ಬಾಡಿಗೆಗೆ ನೀಡುವ ಮೂಲಕ ಹಣ ಸಂಪಾದನೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇದೊಂದು ಉತ್ತಮ ವ್ಯವಹಾರವೂ ಹೌದು. ಮೆಟ್ರೋ ಸಿಟಿಗಳಲ್ಲಿ ಮನೆ ಖಾಲಿ ಇದೆ ಎನ್ನುವವರು ಬಹಳ ಅಪರೂಪ. ಒಂದಲ್ಲ ಒಂದು ಬಾಡಿಗೆದಾರರು ಮನೆಗೆ ಬರ್ತಿರುತ್ತಾರೆ. ಆದ್ರೆ ಬಾಡಿಗೆದಾರರು ಮತ್ತು ಮನೆ ಮಾಲೀಕರ ಮಧ್ಯೆ ಅನೇಕ ವಿಷ್ಯಕ್ಕೆ ಗಲಾಟೆ ನಡೆಯುತ್ತಿರುತ್ತದೆ.

ಮನೆ (Home) ಸೇರುವ ವೇಳೆ ಚೆನ್ನಾಗಿಯೇ ನಡೆದುಕೊಳ್ಳುವ ಇಬ್ಬರೂ ನಂತ್ರ ಕಿರಿಕ್ ಶುರು ಮಾಡ್ತಾರೆ. ಮನೆ ವಸ್ತುಗಳ ಹಾಳಾದ್ರೆ ಯಾರು ರಿಪೇರಿ ಮಾಡಿಸಬೇಕು ಎನ್ನುವುದ್ರಿಂದ ಗಲಾಟೆ ಶುರುವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ನೀರಿನ ಬಳಕೆ, ಸ್ವಚ್ಛತೆ ಸೇರಿದಂತೆ ಅನೇಕ ವಿಷ್ಯಕ್ಕೆ ಮನಸ್ತಾಪ ಬರುವುದಿದೆ. ಮನೆ ಒಪ್ಪಂದಕ್ಕೆ ಸಹಿ ಹಾಕಿ ಈಗಷ್ಟೆ ಹಾಲು ಉಕ್ಕಿಸಿ ಮನೆಗೆ ಬಂದ ಬಾಡಿಗೆ (Rent) ದಾರರನ್ನು ಎರಡು ಮೂರು ತಿಂಗಳಲ್ಲೇ ಹೊರಗೆ ಹಾಕಿದ್ರೆ ಅದು ಎಷ್ಟು ಸರಿ ಎನ್ನುವ ಪ್ರಶ್ನೆ ಬರುತ್ತದೆ. ನಮ್ಮ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು.

ಎಸ್‌ ಗುರುಮೂರ್ತಿ ಅಂಕಣ: 'ಶ್ವೇತಪತ್ರ VS ಕಪ್ಪು ತಿಲಕ'

ಭಾರತ (India) ದಲ್ಲಿ ಮನೆ ಮಾಲೀಕ ಹಾಗೂ ಬಾಡಿಗೆದಾರನಿಗೆ ಸಂಬಂಧಿಸಿದಂತೆ ಹೆಚ್ಚಿನ ನಿಯಮಗಳು ಮತ್ತು ನಿಬಂಧನೆಗಳಿಲ್ಲ. ಒಪ್ಪಂದದ ಕಾನೂನಿನಲ್ಲಿಯೂ ಸಹ, ಮನೆ ಮಾಲೀಕ ಮತ್ತು ಬಾಡಿಗೆದಾರರ ಬಗ್ಗೆ ಮೂಲಭೂತ ವಿಷಯಗಳಿವೆ, ಆದರೆ ಈ ಇಬ್ಬರ ನಡುವೆ ಏಳುವ ನೂರಾರು ಸಮಸ್ಯೆಗೆ ಪರಿಹಾರ ಇಲ್ಲ. ಭಾರತದಲ್ಲಿ ಭೂಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಒಪ್ಪಂದವು ಪರಸ್ಪರ ತಿಳುವಳಿಕೆಯನ್ನು ಆಧರಿಸಿದೆ. ಆದ್ರೆ ಈಗೀಗ ಕೆಲ ನಗರಗಳಲ್ಲಿ ಬಾಡಿಗೆ ಒಪ್ಪಂದವನ್ನು ಸಿದ್ಧಪಡಿಸಲಾಗುತ್ತದೆ. ಅದ್ರಲ್ಲಿ ಕೆಲ ನಿಯಮಗಳನ್ನು ಬರೆಯಲಾಗುತ್ತದೆ. ಅದನ್ನು ಮನೆ ಮಾಲೀಕ ಹಾಗೂ ಬಾಡಿಗೆದಾರ ಇಬ್ಬರೂ ಪಾಲಿಸಬೇಕು. ಒಪ್ಪಂದ 11 ತಿಂಗಳವರೆಗೆ ಇರುತ್ತದೆ. ಅದಕ್ಕಿಂತ ಮೊದಲು ಮನೆ ಬಾಡಿಗೆ ಹೆಚ್ಚಳ ಅಥವಾ ಮನೆಯಿಂದ ಬಾಡಿಗೆದಾರನನ್ನು ಹೊರಗೆ ಹಾಕುವಂತಿಲ್ಲ. ಒಂದ್ವೇಳೆ ಹೊರಗೆ ಹಾಕಿದ್ರೆ ಮನೆ ಮಾಲೀಕನ ವಿರುದ್ಧ ದೂರು ನೀಡಬಹುದು. ಆದ್ರೆ ಅನೇಕ ಒಪ್ಪಂದದಲ್ಲಿ ಆರು ತಿಂಗಳ ಲಾಕಿಂಗ್ ಪಿರಿಯಡ್ ಇರುತ್ತದೆ. ಅದ್ರ ನಂತ್ರ ಮನೆ ಮಾಲೀಕನಿಗೆ, ಬಾಡಿಗೆದಾರನನ್ನು ಹೊರಹಾಕುವ ಅಧಿಕಾರವಿರುತ್ತದೆ. ಏನೇ ಆದ್ರೂ ಎರಡು ತಿಂಗಳ ಮೊದಲೇ ಈ ಬಗ್ಗೆ ನೊಟೀಸ್ ನೀಡಬೇಕು. ಬಾಡಿಗೆದಾರ ಕೂಡ ಮನೆ ಖಾಲಿ ಮಾಡುವ ಎರಡು ತಿಂಗಳ ಮೊದಲೇ ಮಾಲೀಕನಿಗೆ ತಿಳಿಸಿರಬೇಕು. 

ಅಬ್ಬಬ್ಬಾ, ಶಾರೂಖ್ ಪಕ್ಕದ ಮನೆಯ ಈ ವ್ಯಕ್ತಿಯ ಆಸ್ತಿ ಬರೋಬ್ಬರಿ 1 ಲಕ್ಷ ಕೋಟಿ ರೂ! ಇವರಿಗಿದ್ದಾರೆ 23 ಮಕ್ಕಳು!

ಬಾಡಿಗೆ ಕರಾರು ಪತ್ರದಲ್ಲಿ ಮುಂಗಡ ಬಾಡಿಗೆಯಿಂದ ಹಿಡಿದು ಭದ್ರತಾ ಠೇವಣಿ, ನಿರ್ವಹಣಾ ಶುಲ್ಕಗಳು, ಸೆಕ್ಯುರಿಟಿ ರಿಟರ್ನ್, ದರ ಹೆಚ್ಚಳ, ಸವೆತದ ರಿಪೇರಿವರೆಗೆ ಎಲ್ಲವನ್ನೂ ಬರೆಯಲಾಗಿರುತ್ತದೆ. ನೀವು ಮನೆ ಬಾಡಿಗೆ ಪಡೆದ ನಂತ್ರ ಈ ನಿಯಮಗಳನ್ನು ಸರಿಯಾಗಿ ಓದಿರಬೇಕು. ಮನೆ ಮಾಲೀಕ ಹಾಗೂ ಬಾಡಿಗೆದಾರನ ಮಧ್ಯೆ ಬರುವ ಯಾವುದೇ  ಸಿವಿಲ್ ಪ್ರಕರಣದಲ್ಲಿ   ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಬೇರೆ ಯಾವುದೇ ಸಮಸ್ಯೆ ಇದ್ದಲ್ಲಿ ಹಿಡುವಳಿದಾರನು ಪೊಲೀಸ್ ಮತ್ತು ಕಾನೂನಿನ ಸಹಾಯವನ್ನು ತೆಗೆದುಕೊಳ್ಳಬಹುದು.

ಇದು ಇಬ್ಬರ ಮಧ್ಯೆ ನಡೆಯುವ ಒಪ್ಪಂದ. ಇಲ್ಲಿ ಬಾಡಿಗೆ, ಭದ್ರತಾ ಮೊತ್ತ, ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲವನ್ನೂ ಇಬ್ಬರ ಪರಸ್ಪರ ಒಪ್ಪಿಗೆಯೊಂದಿಗೆ ಮಾಡಲಾಗುತ್ತದೆ. ಲ್ಯಾಣ ಸಂಘ ಅಥವಾ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಮಧ್ಯ ಪ್ರವೇಶ ಮಾಡುವುದಿಲ್ಲ. ವಿವಾದ ಉಲ್ಬಣಗೊಂಡ ಸಮಯದಲ್ಲಿ ನಿವಾಸಿಗಳ ಕಲ್ಯಾಣ ಸಂಘವನ್ನು ಸಂಪರ್ಕಿಸಿದರೆ ಅದು ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ