UPI Lite: ಸಣ್ಣ ವಹಿವಾಟುಗಳಿಗೆ ಸರಳ ಪರಿಹಾರ

By Santosh Naik  |  First Published Nov 3, 2024, 6:00 PM IST

ದೈನಂದಿನ ವಹಿವಾಟುಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಲು UPI Lite ವ್ಯಾಲೆಟ್ ಸಹಾಯಕವಾಗಿದೆ. ಕಡಿಮೆ ಮೊತ್ತದ ವಹಿವಾಟುಗಳಿಗೆ ವೇಗ, ದಕ್ಷತೆ ಮತ್ತು ಆಫ್‌ಲೈನ್ ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ.


ಭಾರತದಲ್ಲಿ ಸಣ್ಣ ಪ್ರಮಾಣದ ವಹಿವಾಟುಗಳನ್ನು ಸುಲಭವಾಗಿ ಹಾಗೂ ಯಾವುದೇ ಅಡೆ ತಡೆ ಇಲ್ಲದೆ ಮಾಡಲು ಯುಪಿಐ ಲೈಟ್ ವ್ಯಾಲೆಟ್ ಸಮರ್ಥ ಸಾಧನವಾಗಿದೆ. ನಗದು ರಹಿತ ಡಿಜಿಟಲ್ ಪಾವತಿ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದಂತೆ ದೈನಂದಿನ ವಹಿವಾಟು ವೇಗವಾಗಿ ಹಾಗೂ ಸುಲಭವಾಗಿ ಮಾಡಲು ಬಯಸುವವರಿಗೆ ಯುಪಿಐ ಲೈಟ್ ವ್ಯಾಲೆಟ್ ಹಲವು ಪ್ರಯೋಜನ ನೀಡುತ್ತದೆ. 

ಗೂಗಲ್ ಪೇ, ಫೋನ್ ಪೇ ಹಾಗೂ ಬಜಾಜ್ ಪೇ( Bajaj Pay) ನಂತಹ ಡಿಜಿಟಲ್ ವಹಿವಾಟು ಪ್ಲಾಟ್ಫಾರ್ಮ್ ಬಳಕೆ ಭಾರತದಲ್ಲಿ ಹೆಚ್ಚಾಗಿದೆ. ಇದೇ ವೇಳೆ ಕಡಿಮೆ ಮೊತ್ತದ ಅಂದರೆ ಸಣ್ಣ ಪಾವತಿಗಳನ್ನು ಮಾಡುವವರಿಗೆ ಯುಪಿಐ ಲೈಟ್ ವ್ಯಾಲೆಟ್ ಸರಳ ಹಾಗೂ ತಡೆರಹಿತ ಅನುಭವ ಒದಗಿಸುತ್ತದೆ. ಜೊತೆಗೆ ಗರಿಷ್ಠ ಭದ್ರತೆ ಮೂಲಕ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಯುಪಿಐ ಲೈಟ್ ವ್ಯಾಲೆಟ್ ಡಿಜಿಟಲ್ ಟ್ರಾನ್ಸಾಕ್ಷನ್ನಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಲೇಖನ ದೈನಂದಿನ ವಹಿವಾಟುಗಳಿಗೆ ಯುಪಿಐ ಲೈಟ್ ವ್ಯಾಲೆಟ್ ಬಳಕೆ ಪ್ರಯೋಜನ ಕುರಿತ ವಿವರಣೆ ನೀಡುತ್ತದೆ.  

Tap to resize

Latest Videos

undefined

1 ಸಣ್ಣ ಪ್ರಮಾಣದ ವಹಿವಾಟುಗಳಿಗೆ ಉತ್ತಮ
ಯುಪಿಐ ಲೈಟ್ ವ್ಯಾಲೆಟ್ ಕಡಿಮೆ ಮೌಲ್ಯದ ಟ್ರಾನ್ಸಾಕ್ಷನ್ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ದೈನಂದಿಕ ಬಳಕೆಯಲ್ಲಿ ನಗದು ವ್ಯವಾಹರ ಸಮಸ್ಯೆ ತಪ್ಪಿಸಲು ಯುಪಿಐ ಲೈಟ್ ವ್ಯಾಲೆಟ್ ಉತ್ತಮ ಆಯ್ಕೆಯಾಗಿದೆ. ಅಂದರೆ 200 ರೂಪಾಯಿ ಒಳಗಿನ ವ್ಯವಾಹರಕ್ಕೆ ಯುಪಿಐ ಲೈಟ್ ವ್ಯಾಲೆಟ್ ಅತ್ಯುತ್ತಮ ಡಿಜಿಟಲ್ ಟ್ರಾನ್ಸಾಕ್ಷನ್ ಸಾಧನವಾಗಿದೆ. ಒಂದು ಕಪ್ ಚಹಾ, ಸ್ಥಳೀಯ ಮಟ್ಟದಲ್ಲಿ ಸಾರಿಗೆ ಬಳಕೆಗೆ, ದಿನಸಿ ಪಾವತಿ ಸೇರಿದಂತೆ ಸಣ್ಣ ಸಣ್ಣ ರೂಪಾಯಿಗಳ ಪಾವತಿಗೆ ಯುಪಿಐ ಲೈಟ್ ವ್ಯಾಲೆಟ್ ಬಳಕೆದಾರ ನಗದು ಹಿಡಿದು ಹೋಗುವ ಸಮಸ್ಯೆಯನ್ನು ತಪ್ಪಿಸುತ್ತದೆ. ಹೀಗಾಗಿ ದೈನಂದಿನ ಬದುಕಿನಲ್ಲಿ ಸಣ್ಣ ಮೊತ್ತದ ವಹಿವಾಟು ನಡೆಸುವವರಿಗೆ ಯುಪಿಐ ಲೈಟ್ ವ್ಯಾಲೆಟ್ ಉಪಯುಕ್ತವಾಗಿದೆ.   ಈ ಯುಪಿಐ ಲೈಟ್ ವ್ಯಾಲೆಟ್ ಪಾವತಿ ತ್ವರಿತವಾಗಿ ಹಾಗೂ ಕಳಪೆ ನೆಟ್ವರ್ಕ್ನಲ್ಲೂ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಇದು ಯುಪಿಐ ಪಾವತಿ ಸೇರಿದಂತೆ ಇತರ ಪಾವತಿಗಳಿಗಿಂತ ಅತೀ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. 

ಎಲ್ಲರು ಬಳಸುವ ಯುಪಿಐ ಪಾವತಿ ಅಥವಾ ವಹಿವಾಟಿಗೆ ಇಂಟರ್ನೆಟ್ ಅತ್ಯವಶ್ಯಕ. ವಹಿವಾಟು ವೇಳೆ ಪಿನ್ ದಾಖಲಿಸುವುದು ಅನಿವಾರ್ಯ. ಆದರೆ ಸಾಂಪ್ರದಾಯಿಕ ಯುಪಿಐ ಮಾದರಿಗಿಂತ ಯುಪಿಐ ಲೈಟ್ ವ್ಯಾಲೆಟ್ ಭಿನ್ನವಾಗಿದೆ. ಇಲ್ಲಿ ಪ್ರತಿ ವಹಿವಾಟಿಗೆ ಇಂಟರ್ನೆಟ್, ಪಿನ್ ಅಗತ್ಯವಿಲ್ಲ. ತ್ವರಿತವಾಗಿ ಕಡಿಮೆ ಮೊತ್ತದ ಪಾವತಿಯನ್ನು ಸುಲಭವಾಗಿ ಮಾಡಲು ಯುಪಿಐ ಲೈಟ್ ವ್ಯಾಲೆಟ್ನಲ್ಲಿ ಸಾಧ್ಯವಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಪದೇ ಪದೇ ಖರೀದಿ ಮಾಡುವ ಅಥವಾ ಅನಿವಾರ್ಯವಾಗಿ ಖರೀದಿ ಮಾಡಬೇಕಾದ ಪರಿಸ್ಥಿತಿಗಳಲ್ಲಿ ಯುಪಿಐ ಲೈಟ್ ವ್ಯಾಲೆಟ್ ಪ್ರಯೋಜನಕಾರಿಯಾಗಿದೆ. ಬಜಾಜ್ ಪೇ(Bajaj Pay) ರೀತಿಯ ವ್ಯಾಲೆಟ್ ನಿಮ್ಮ ಯುಪಿಐ ಲೈಟ್ ವ್ಯಾಲೆಟ್ ಬ್ಯಾಲೆನ್ಸ್ನ್ನು ಅತಿ ಸುಲಭವಾಗಿ ಟಾಪ್ ಅಪ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಸಣ್ಣ ಪಾವತಿ, ಖರೀದಿ ವೇಳೆ ನೀವು ದುಡ್ಡಿಲ್ಲ, ಚಿಲ್ಲರೆ ಇಲ್ಲ ಅನ್ನೋ ಸಮಸ್ಯೆಗೆ ಸಿಲುಕುವುದು ತಪ್ಪಲಿದೆ. 

2 ವೇಗ ಹಾಗೂ ದಕ್ಷತೆ
ಯುಪಿಐ ಲೈಟ್ ವ್ಯಾಲೆಟ್ ಪ್ರಮುಖ ಹಾಗೂ ಮುಂಚೂಣಿಯ ಪ್ರಯೋಜನವೆಂದರೆ ಅದರ ವೇಗ. ಯುಪಿಐ ಲೈಟ್ ವ್ಯಾಲೆಟ್ನಲ್ಲಿ ಸಣ್ಣ ಮೊತ್ತದ ಪಾವತಿ ಮಾಡಲಾಗುತ್ತದೆ. ಹೀಗಾಗಿ ಇದರ ವೇಗ, ವಹಿವಾಟುಗಳನ್ನು ತ್ವರಿತಗತಿಯಲ್ಲಿ ಹಾಗೂ ತಡೆರಹಿತವಾಗಿ ಪೂರ್ಣಗೊಳ್ಳುವಂತೆ ಮಾಡಲಿದೆ. ಇದರಿಂದ ನೀವು ಯಾವುದೇ ವ್ಯಾಪಾರಿಗಳಲ್ಲಿ ಖರೀದಿಸಿ ಪಾವತಿ ಹಾಗೂ ಹಣ ಸ್ವೀಕರಿಸುವ ಸಮಯದಲ್ಲಿ ವ್ಯತ್ಯಾಸವಿಲ್ಲ. ಹೀಗಾಗಿ ನೀವು ಕಾಯಬೇಕಾದ ಪರಿಸ್ಥಿತಿಯೂ ಎದುರಾಗುವುದಿಲ್ಲ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕೆಲವೇ ಕೆಲವು ಟ್ಯಾಪ್ ಮೂಲಕ ಸರಳವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಯುಪಿಐ ಲೈಟ್ ವ್ಯಾಲೆಟ್ ವಹಿವಾಟಿನಲ್ಲಿ ಪ್ರತಿ ವಹಿವಾಟಿಗೆ ಪಿನ್ ದಾಖಲಿಸುವ ಅಥವಾ ಒಟಿಪಿಗಾಗಿ ಕಾದು ನಮೂದಿಸುವ ಅಗತ್ಯವಿಲ್ಲ. ಇದಕ್ಕಾಗಿ ಕಾಯುವ ಅಗತ್ಯವಿಲ್ಲದ ಕಾರಣ ಸಾಂಪ್ರದಾಯಿಕ ಯುಪಿಐ ಪಾವತಿ ವಿಧಾನಕ್ಕಿಂತ ಲೈಟ್ ವ್ಯಾಲೆಟ್ ಹೆಚ್ಚು ತ್ವರಿತ ಹಾಗೂ ಪರಿಣಾಮಕಾರಿಯಾಗಿದೆ.  

ಉದಾಹರಣೆಗೆ ನೀವು ಬಸ್ ಟಿಕೆಟ್ ಖರೀದಿಸುತ್ತಿದ್ದರೆ, ಬೀದಿ ಬದಿ ಆಹಾರ ಖರೀದಿಸಿ ಪಾವತಿ ಮಾಡುತ್ತಿದ್ದರೆ ಸಾಂಪ್ರದಾಯಿಕ ಅಥವಾ ಸಾಮಾನ್ಯ ಯುಪಿಐ ಟ್ರಾನ್ಸಾಕ್ಷನ್ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಬಜಾಜ್ ಪೇ ಅಥವಾ ಫೋನ್ ಪೇ ಸೇರಿದಂತೆ ಜನಪ್ರಿಯ ಯುಪಿಐ ಲೈಟ್ ವ್ಯಾಲೆಟ್ ವಹಿವಾಟು ಸೆಕೆಂಡ್ಗಳ ಅಂತರದಲ್ಲಿ ನಡೆಯಲಿದೆ. ಹೀಗಾಗಿ ಅಡೆತಡೆ ಇಲ್ಲದೆ ಬಳಕೆದಾರರು ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಪ್ರಯಾಣದ ವೇಳೆ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಚಿಲ್ಲರೆ ಸಮಸ್ಯೆ ಎದುರಿಸುವುದಿಲ್ಲ.  ವಿಶೇಷ ಅಂದರೆ ಹೆಚ್ಚಿನ ಮೌಲ್ಯದ ಟ್ರಾನ್ಸಾಕ್ಷನ್ಗಳಲ್ಲಿ ಯುಪಿಐ ನಲ್ಲಿ ಇರುವ ಎಲ್ಲಾ ಸುರಕ್ಷತಾ ಫೀಚರ್ ಕಡಿಮೆ ಮೌಲ್ಯದ ವಹಿವಾಟಿಗೆ ಬಳಸುವ ಯುಪಿಐ ಲೈಟ್ ವ್ಯಾಲೆಟ್ನಲ್ಲೂ ಲಭ್ಯವಿದೆ. ಪಿನ್, ಒಟಿಪಿ ಸೇರಿದಂತೆ ಹೆಚ್ಚಿನ ಹಂತಗಳ ಸುರಕ್ಷತಾ ವಿಧಾನ ಅಲ್ಲದಿದ್ದರೂ ಸುರಕ್ಷತೆಯಲ್ಲಿ ಹಾಗೂ ವೇಗದಲ್ಲಿ ಸರಿಸಾಟಿಯಿಲ್ಲ.

3 ಆಫ್ಲೈನ್ನಲ್ಲೂ ಕಾರ್ಯನಿರ್ವಹಣೆ
ಯುಪಿಐ ಲೈಟ್ ವ್ಯಾಲೆಟ್ ಪ್ರಮುಖ ಫೀಚರ್ ಇದು. ನೆಟ್ವರ್ಕ್ ಸಮಸ್ಯೆ, ಕಳಪೆ ನೆಟ್ವರ್ಟ್, ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದ ಪ್ರದೇಶದಲ್ಲೂ ಯುಪಿಐ ಲೈಟ್ ವ್ಯಾಲೆಟ್ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಲೈಟ್ ವ್ಯಾಲೆಟ್ ಬಳಕೆದಾರರಿಗೆ ಪಾವತಿ ಅಥವಾ ವಹಿವಾಟು ನಡೆಸಲು ಅನುಮತಿಸುತ್ತದೆ.  ಪ್ರದೇಶದಿಂದ ಪ್ರದೇಶಕ್ಕೆ ಕೈಕೊಡುವ ನೆಟ್ವರ್ಕ್ ಸಮಸ್ಯೆಯ ನಡುವೆಯೂ, ಗ್ರಾಮೀಣ ಪ್ರದೇಶಗಳಲ್ಲಿನ ವಹಿವಾಟು, ಪ್ರಯಾಣದ ವೇಳೆ ಸೇರಿದಂತೆ ಕ್ಲಿಷ್ಟ ಪರಿಸ್ಥಿತಿಗಳಲ್ಲೂ ಯುಪಿಐ ಲೈಟ್ ವ್ಯಾಲೆಟ್ ವಹಿವಾಟಿಗೆ ಯಾವುದೇ ಅಡ್ಡಿ ಆತಂಕವಿಲ್ಲ. ಹೀಗಾಗಿ ನೆಟ್ವರ್ಕ್ ವ್ಯಾಪ್ತಿ ತಲೆಕೆಡಿಸಿಕೊಳ್ಳದೇ ಬಳಕೆದಾರರು ಪಾವತಿ ಮಾಡಬಹುದು.   

ಇಂಟರ್ನೆಟ್ ಸಮಪರ್ಕವಾಗಿ ಇಲ್ಲದ ಪ್ರದೇಶದಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಂದಿಗೆ, ಪ್ರಯಾಣದ ವೇಳೆ ಆಫ್ಲೈನ್ ವಹಿವಾಟು ಹೆಚ್ಚು ಉಪಯುಕ್ತವಾಗಿದೆ. ಯುಪಿಐ ಲೈಟ್ ವ್ಯಾಲೆಟ್ ಪೂರ್ವ ಲೋಡ್ ಮಾಡಲಾದ ಸಿಸ್ಟಮ್ನಿಂದ ಬಳಕೆದಾರರು ಟ್ಯಾಪ್ ಮೂಲಕ ಅಥವಾ ಇತರ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುತ್ತದೆ. ಯಪಿಐ ಲೈಟ್ ವ್ಯಾಲೆಟ್ ಕಾರ್ಯ ಸಂಯೋಜಿಸುವ ಬಜಾಜ್ ಪೇ ನಂತಹ ವ್ಯಾಲೆಟ್ ಬಳಕೆದಾರರನ್ನು ಆಫ್ಲೈನ್ನಲ್ಲಿಯೂ ನಗದು ರಹಿತ ವಹಿವಾಟು ಆನಂದಿಸಲು ಅನುವು ಮಾಡಿಕೊಡುತ್ತದೆ. 

ಸಣ್ಣ ಪಾವತಿಗೆ ಗರಿಷ್ಠ ಭದ್ರತೆ
ಡಿಜಿಟಲ್ ಟ್ರಾನ್ಸಾಕ್ಷನ್ಗಳಲ್ಲಿ ಸುರಕ್ಷತೆ ಅತೀ ದೊಡ್ಡ ಕಾಳಜಿ. ಕಾರಣ ಪ್ರತಿ ವಹಿವಾಟು ಸುರಕ್ಷಿತವಾಗಿರಬೇಕು, ಜೊತೆಗೆ ಲಿಂಕ್ ಮಾಡಿರುವ ಖಾತೆ ಹಾಗೂ ಖಾತೆಯಲ್ಲಿನ ಹಣವೂ ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ಯುಪಿಐ ಲೈಟ್ ವ್ಯಾಲೆಟ್ ಅನುಕೂಲತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಸಮತೋಲನ ಸಾಧಿಸುತ್ತದೆ. ವ್ಯಾಲೆಟ್ಗೆ ನಿಗದಿತ ಮೊತ್ತ ಮೊದಲೇ ಲೋಡ್ ಮಾಡುವ ಕಾರಣ ಬಳಕೆದಾರರು ತಮ್ಮ ವಹಿವಾಟಿನಲ್ಲಿ ಬ್ಯಾಲೆನ್ಸ್ ಮೊತ್ತ ಇರುವ ಕಾರಣ ಯಾವುದೇ ಅಪಾಯ ಎದುರಿಸುವುದಿಲ್ಲ. ಯುಪಿಐ ಲೈಟ್ ವ್ಯಾಲೆಟ್ ಸಣ್ಣ ವಹಿವಾಟಾದ ಕಾರಣ ಟು ಫ್ಯಾಕ್ಟರ್ ಅಥೆಂಟಿಕೇಶನ್( ಎರಡು ಅಂಶದ ದೃಢೀಕರಣ) ಅಗತ್ಯವಿರುವುದಿಲ್ಲ. (ಉದಾಹಪಣೆಗೆ  PIN, ಒಟಿಪಿ ನಮೂದಿಸುವ ಅಗತ್ಯವಿಲ್ಲ) ಇದರಿಂದ ವಹಿವಾಟು ಪಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ. ಆದರೆ ನಿರ್ದಿಷ್ಟ ಹಣದ ವಹಿವಾಟಿಗೆ ಇದು ಸೀಮಿತವಾಗಿರುತ್ತದೆ.  

ಯುಪಿಐ ಲೈಟ್ ವ್ಯಾಲೆಟ್ ಬಳಕೆದಾರರಿಗೆ ಗರಿಷ್ಠ ಸುರಕ್ಷತೆ ನೀಡುತ್ತದೆ.  ವಂಚನೆ ಅಥವಾ ದುರುಪಯೋಗದ ವಿರುದ್ಧ ಬಳಕೆದಾರರಿಗೆ ರಕ್ಷಣೆ ಒದಗಿಸುತ್ತದೆ. ವಹಿವಾಟಿನ ಗರಿಷ್ಠ ಮೊತ್ತ (ಸಾಮಾನ್ಯವಾಗಿ 200 ರೂಪಾಯಿ)ಮಿತಿಗೊಳಿಸಿರುವ ಕಾರಣ ಅಪಾಯದ ಪ್ರಮಾಣ ಕಡಿಮೆ. ಒಂದು ವೇಳೆ ಯುಪಿಐ ವ್ಯಾಲೆಟ್ ಸುರಕ್ಷತಾ ಅಫಾಯ ಎದುರಿಸಿದರೂ ಗರಿಷ್ಠ 200 ರೂಪಾಯಿ ನಷ್ಟ ಸಂಭವಿಸಲಿದೆ. ಹೀಗಾಗಿ ಇದು ದೊಡ್ಡ ಹಣಕಾಸಿನ ಅಪಾಯ ಕಡಿಮೆಗೊಳಿಸುತ್ತದೆ. ಇನ್ನು ಬಳಕೆದಾರರಿಗೆ ತಮಗೆ ಅಗತ್ಯವಿರುವಷ್ಟು ಮಾತ್ರ ಟಾಪ್ ಅಪ್ ಮಾಡಬಹುದು. ಹೀಗಾಗಿ ತಮ್ಮ ಬ್ಯಾಂಕ್ ಖಾತೆಗಳ ಹಣ ಸುರಕ್ಷಿತವಾಗಿರುತ್ತದೆ.
 
5 ಬ್ಯಾಂಕಿಂಗ್ ಸರ್ವರ್ ಲೋಡ್ ಸಮಸ್ಯೆಗೆ ಮುಕ್ತಿ
ಯುಪಿಐ ಲೈಟ್ ವ್ಯಾಲೆಟ್ ವಹಿವಾಟು ನೇರವಾಗಿ ಬ್ಯಾಂಕಿಂಗ್ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಅಥವಾ ಲೋಡ್ ಹೊರೆ ನೀಡುವುದಿಲ್ಲ. ಕಾರಣ ಬಳಕೆದಾರರು ತಮ್ಮ ವ್ಯಾಲೆಟ್ಗೆ ಮಾಡಿರುವ ಟಾಪ್ ಅಪ್ ಮೂಲಕ ವಹಿವಾಟು ನಡೆಸುತ್ತಾರೆ. ಹೀಗಾಗಿ ಬ್ಯಾಂಕ್ ಸರ್ವರ್ ಮೇಲಿನ ಅವಲಂಬನೆ ಕಡಿಮೆ. ಸಾಮಾನ್ಯ ಯುಪಿಐ ವಹಿವಾಟಿನಲ್ಲಿ ಪ್ರತಿ ವಹಿವಾಟು ಬ್ಯಾಂಕ್ ಸರ್ವರ್ ಜೊತೆ ಲಿಂಕ್ ಆಗಿರುತ್ತದೆ. ಆದರೆ ಯುಪಿಐ ಲೈಟ್ ವ್ಯಾಲೆಟ್ನಲ್ಲಿ ಪೂರ್ವ ಲೋಡ್ ಮಾಡಿದ ವ್ಯಾಲೆಟ್ನಿಂದ ವಹಿವಾಟು ನಡೆಯುತ್ತದೆ. ಹೀಗಾಗಿ ಲೈಟ್ ವ್ಯಾಲೆಟ್ ಪ್ರತಿ ವಹಿವಾಟು ಬ್ಯಾಂಕ್ ಸರ್ವರ್ ಮೇಲೆ ಯಾವುದೇ ಹೊರೆ ನೀಡುವುದಿಲ್ಲ. ಇದೇ ಕಾರಣದಿಂದ ಯಾವುದೇ ನೆಟ್ವರ್ಕ್ ಇಲ್ಲದಿದ್ದರೂ ಯುಪಿಐ ಲೈಟ್ ವ್ಯಾಲೆಟ್ ಕಾರ್ಯನಿರ್ವಹಿಸುತ್ತದೆ. ಅತೀ ಹೆಚ್ಚು ಬಳಕೆದಾರರು ಒಂದೇ ಬಾರಿ ವಹಿವಾಟು ನಡೆಸಿದರೂ ಬಳಕೆದಾರನಿಗಾಗಗಲಿ, ಅಥವಾ ಬ್ಯಾಂಕ್ ಸರ್ವರ್ಗೆ ಹೊರೆಯಾಗುವುದಿಲ್ಲ. ಇದರಿಂದ ಸುಲಭ ಹಾಗೂ ತ್ವರಿತ ವಹಿವಾಟು ನಡೆಸಲು ಸಹಾಯ ಮಾಡುತ್ತದೆ.
 
ಸರ್ವರ್ ಅವಲಬಿತವಾಗಿದ್ದರೆ ಪ್ರತಿ ವಹಿವಾಟು ನಿರ್ದಿಷ್ಠ ಸಮಯ ತೆಗೆದುಕೊಳ್ಳಲಿದೆ. ಸರ್ವರ್ ಲೋಡ್ ಸಮಸ್ಯೆಗಳಿಗೂ ಕಾರಣವಾಗಲಿದೆ. ಆದರೆ ಯುಪಿಐ ಲೈಟ್ ವ್ಯಾಲೆಟ್ನಲ್ಲಿ ಸರ್ವರ್ ಲೋಡ್ ವಿಳಂಬ, ವೈಫಲ್ಯ ಸಮಸ್ಯೆ ಎದುರಾಗುವುದಿಲ್ಲ. ಹೀಗಾಗಿ ಪ್ರತಿ ದಿನದ ವಹಿವಾಟುಗಳನ್ನು ವಿಳಂಬವಿಲ್ಲದೆ, ಅಡೆ ತಡೆಗಳಿಲ್ಲದೆ ನಡೆಸಲು ಸಾಧ್ಯವಿದೆ. ಹೀಗಾಗಿ ಯುಪಿಐ ಲೈಟ್ ವಿಶ್ವಾಸಾರ್ಹ ಆಯ್ಕೆಯಾಗಿ ಹೊರಹೊಮ್ಮಿದೆ. ಉದಾಹರಣೆಗೆ ಬಜಾಜ್ ಪೇ ಯುಪಿಐ ಲೈಟ್ ವ್ಯಾಲೆಟ್ ಬ್ಯಾಂಕ್ ಸರ್ವರ್ ಓವರ್ ಲೋಡ್ಗೆ ಒಳಪಡುವುದಿಲ್ಲ. ಹೀಗಾಗಿ ಬಳಕೆದಾರರ ಅನುಭವ ಸುಧಾರಿಸಲಿದೆ.

ಬಳಕೆದಾರ ಸ್ನೇಹಿ ಇಂಟರ್ಫೇಸ್ ಹಾಗೂ ಇಂಟಿಗ್ರೇಶನ್
ಯುಪಿಐ ಲೈಟ್ ವ್ಯಾಲೆಟ್ ಬಳಕೆದಾರರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಯುಪಿಐ ಲೈಟ್ ವ್ಯಾಲೆಟ್ ಬಳಕೆ ಮಾಡಲು ಹೆಚ್ಚಿನ ತಾಂತ್ರಿಕ ಜ್ಞಾನದ ಅಗತ್ಯವಿಲ್ಲ. ಯಾರು ಬೇಕಾದರೂ ಸುಲಭವಾಗಿ ಹಣ ಟಾಪ್ ಅಪ್, ಬ್ಯಾಲೆನ್ಸ್ ಪರಿಶೀಲನೆ, ಹಣ ಪಾವತಿ, ಹಿಸ್ಟರಿ ಪರಿಶೀಲನೆ ಸೇರಿದಂತೆ ವಹಿವಾಟುಗಳನ್ನು ಸುಲಭವಾಗಿ ಮಾಡಬಹುದು.ಕನಿಷ್ಠ ಹಂತದಲಲ್ಲಿ ವಹಿವಾಟು ಪೂರೈಸಲು ಸಾಧ್ಯವಿದೆ.  

ಬಜಾಜ್ ಪೇ ವ್ಯಾಲೆಟ್ ಬಳಕೆದಾರರಿಗೆ ಯುಪಿಐ ಲೈಟ್ ವ್ಯಾಲೆಟ್ ವಹಿವಾಟು ಕೆಲವೇ ಟ್ಯಾಪ್ ಮೂಲಕ ಆರಂಭಿಸಲು ಸಾಧ್ಯ. ಬಜಾಜ್ ಪೇ ಯುಪಿಐ ವ್ಯವಸ್ಥೆಯಲ್ಲಿ ಬಳಕೆದಾರರು ದೊಡ್ಡ ಪಾವತಿ ಜೊತೆಗೆ ಸಣ್ಣ ಪಾವತಿ ಲೈಟ್ ವಹಿವಾಟು ನಡೆಸಲು ಅನುಮತಿಸುತ್ತದೆ. ಇಷ್ಟೇ ಅಲ್ಲ ಯಾವುದೇ ಸಮಸ್ಯೆಗಳಿಲ್ಲದೆ, ಅಡೆತಡೆಗಳಿಲ್ಲದೆ ವಹಿವಾಟು ನಡೆಸಲು ಅನುಮತಿಸುತ್ತದೆ. ಹೀಗಾಗಿ ಎಲ್ಲಾ ರೀತಿಯ ಪಾವತಿ ಹಾಗೂ ವಹಿವಾಟುಗಳಿಗೆ ಪ್ರಮುಖ ವೇದಿಕೆಯಾಗಿದೆ.  

7 ಪ್ರಚಾರ ಹಾಗೂ ರಿವಾರ್ಡ್ಸ್
ಇತರ ಡಿಜಿಟಲ್ ಟ್ರಾನ್ಸಾಕ್ಷನ್ಗಳಲ್ಲಿರುವಂತೆ ಯುಪಿಐ ಲೈಟ್ ವ್ಯಾಲೆಟ್ನಲ್ಲೂ ಪ್ರಮೋಶನ್ ಹಾಗೂ ರಿವಾರ್ಡ್ಸ್ ಸೌಲಭ್ಯ ಲಭ್ಯವಿದೆ.ಕೆಲವು ಬಾರಿ ಬಳಕೆದಾರರಿಗೆ ಕ್ಯಾಶ್ಬ್ಯಾಕ್ ಅಥವಾ ಖರೀದಿ ಮೇಲೆ ರಿಯಾತಿ ಕೊಡುಗೆಗಳನ್ನು ನೀಡುತ್ತದೆ. ಈ ಮೂಲಕ ಬಳಕೆದಾರರನ್ನು ತಮ್ಮ ದೈನಂದಿನ ವಹಿವಾಟುಗಳನ್ನು ಯುಪಿಐ ಲೈಟ್ ಮೂಲಕ ನಡೆಸಲು ಪ್ರೋತ್ಸಾಹಿಸುತ್ತದೆ.  

ಬಜಾಜ್ ಪೇ ಯೊಂದಿಗೆ ಬಳಕೆದಾರರು ಪ್ರತಿ ವಹಿವಾಟುಗಳಿಗೆ ರಿವಾರ್ಡ್ಸ್ ಸೇರಿದಂತೆ ಕೆಲ ಕೊಡುಗೆಗಳನ್ನು ಆನಂದಿಸಲು ಸಾಧ್ಯವಿದೆ. ಈ ರೀತಿಯ ಕೊಡುಗೆಗಳು ಖರೀದಿಗಳಿಗೆ ಯುಪಿಐ ಲೈಟ್ ಬಳಕೆಯನ್ನು ಪ್ರೇರಿಪಿಸುತ್ತದೆ. ಇಷ್ಟೇ ಅಲ್ಲ ಇಂತಹ ಪ್ರಮೋಶನ್ ಹಾಗೂ ರಿವಾರ್ಡ್ಸ್ ಬಳಕೆದಾರರ ಹಣ ಉಳಿತಾಯಕ್ಕೂ ನೆರವಾಗುತ್ತದೆ. ಜೊತೆಗೆ ಪ್ರತಿ ದಿನದ ಖರೀದಿಗೆ ನಗದು ರಹಿತ ವಹಿವಾಟನ್ನು ಉತ್ತೇಜಿಸುತ್ತದೆ.  

ಸಾರಾಂಶ
ಸಣ್ಣ ಮೊತ್ತದ ವಹಿವಾಟುಗಳಲ್ಲಿ ಯುಪಿಐ ಲೈಟ್ ವ್ಯಾಲೆಟ್ ಹೊಸ ಕ್ರಾಂತಿ ಮಾಡಿದೆ. ಸಂಪೂರ್ಣ ಪ್ರಕ್ರಿಯೆಯನ್ನು ತ್ವರಿತವಾಗಿ ಹಾಗೂ ಸುರಕ್ಷಿತವಾಗಿ ಪೂರ್ಣಗೊಳಿಸುತ್ತದೆ. ಹೀಗಾಗಿ ದಿನಂದಿನ ಚಟುವಟಿಕೆಗಳಿಗೆ ಯುಪಿಐ ಲೈಟ್ ಸ್ಪಷ್ಟ ಪ್ರಯೋಜನಗಳನ್ನು ನೀಡುತ್ತದೆ. ವ್ಯವಸ್ಥಿತಿ ಪಾವತಿ, ವೇಗ, ಭದ್ರತೆ ಹಾಗೂ ಆಫ್ಲೈನ್ ಕಾರ್ಯನಿರ್ವಹವಣೆ ಬಳಕೆದಾರರಿಗೆ ಅಡೆತಡೆ ರಹಿತ ವಹಿವಾಟಿಗೆ ಕಾರಣವಾಗಲಿದೆ.  

ಈ ಫೀಚರ್ ಬಜಾಜ್ ಪೇ ರೀತಿಯ ಪ್ಲಾಟ್ಫಾರ್ಮ್ಗಳಲ್ಲಿ ಸಂಯೋಜಿಸುವ ಮೂಲಕ ಬಳಕೆದಾರರು ದೈನಂದಿನ ವಹಿವಾಟುಗಳನ್ನು ಸುರಕ್ಷಿತವಾಗಿ ಹಾಗೂ ಸುಲಭವಾಗಿ ಮಾಡಲು ಸಾಧ್ಯವಿದೆ. ಜೊತೆಗೆ ಬಳಕೆದಾರ ಸ್ನೇಹಿ ವ್ಯವಸ್ಥೆಯ ಅನುಭವ ಆನಂದಿಸಲು ಸಾಧ್ಯವಿದೆ. ಡಿಜಿಟಲ್ ಟ್ರನ್ಸಾಕ್ಷನ್ ವೇಗವಾಗಿ ಬೆಳೆಯುತ್ತಿರುವ ಹಾಗೂ ಅತ್ಯಾಧುನಿಕವಾಗಿ ಅಭಿೃದ್ಧಿಗೊಳ್ಳುತ್ತಿರುವ ಕಾರಣ, ಸಣ್ಣ ಹಾಗೂ ಪ್ರತಿನಿತ್ಯದ ವಹಿವಾಟು ಸುಲಭವಾಗಿ ನಿರ್ವಹಿಸಲು ಯುಪಿಐ ಲೈಟ್ ವ್ಯಾಲೆಟ್ ಉತ್ತಮ ಹಾಗೂ ಉಪಯುಕ್ತವಾಗಿದೆ.
 

click me!