ಯುಪಿಐ ಆ್ಯಪ್‌ಗಳು ಭಾರತದಲ್ಲಿ ಡಿಜಿಟಲ್ ವಹಿವಾಟುಗಳನ್ನು ಕ್ರಾಂತಿಗೊಳಿಸಿವೆ. ಈ ಲೇಖನವು ಯುಪಿಐ ಆ್ಯಪ್ ಡೌನ್ಲೋಡ್ ಮಾಡುವಾಗ ಪರಿಗಣಿಸಬೇಕಾದ ಪ್ರಮುಖ ವೈಶಿಷ್ಟ್ಯಗಳನ್ನು ಚರ್ಚಿಸುತ್ತದೆ, ಸುರಕ್ಷತೆ, ಬಳಕೆದಾರ ಅನುಭವ ಮತ್ತು ವಿಶ್ವಾಸಾರ್ಹ ವಹಿವಾಟುಗಳನ್ನು ಖಾತ್ರಿಪಡಿಸುತ್ತದೆ.
ಭಾರತದಲ್ಲಿ ಡಿಜಿಟಲ್ ಇಂಡಿಯಾ ಹೊಸ ಕ್ರಾಂತಿಯನ್ನೇ ಮಾಡಿದೆ. ಪ್ರಮುಖವಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಭಾರತೀಯರ ನಗದು ವಹಿವಾಟುಗಳನ್ನು ಡಿಜಿಟಲ್ ಟ್ರಾನ್ಸಾಕ್ಷನ್ಗೆ ಮಾರ್ಪಡಿಸಿದೆ. ಯುಪಿಐನಿಂದ ಇದೀಗ ಬಳಕೆದಾರರು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಿಲ್ಲ, ನಗದು ಹಣ ಇಟ್ಟುಕೊಳ್ಳಬೇಕಿಲ್ಲ, ಸ್ಮಾರ್ಟ್ಫೋನ್ ನೆರವಿನಿಂದ ಹಣ ವರ್ಗಾವಣೆ, ಬಿಲ್ ಪಾವತಿ, ಯಾವುದೇ ಖರೀದಿಗಳನ್ನು ಸುಲಭವಾಗಿ ಮಾಡಲು ಸಾಧ್ಯವಿದೆ.
ಯುಪಿಐ ಆ್ಯಪ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಭ್ಯವಿರುವ ಹಲವು ಯುಪಿಐ ಆ್ಯಪ್ಗಳ ಪೈಕಿ ಉತ್ತಮ ಫೀಚರ್, ಸುರಕ್ಷತೆ ನೀಡುವ ಒಂದು ಆ್ಯಪ್ ಆಯ್ಕೆ ಮಾಡುವುದು ಸವಾಲಾಗಿದೆ. ಆದರೆ ಈ ಲೇಖನ ನೀವು ಯುಪಿಐ ಆ್ಯಪ್ ಡೌನ್ಲೋಡ್ ಮಾಡುವಾಗ ಗಮನಿಸಬೇಕಾದ ಅತ್ಯುತ್ತಮ ಹಾಗೂ ಸುರಕ್ಷತಾ ಫೀಚರ್ ಕುರಿತು ಬೆಳೆಕು ಚೆಲ್ಲಲಿದೆ. ಪ್ರಮುಖವಾಗಿ ಬಳಕೆದಾರರಿಗೆ ಸುರಕ್ಷತೆ, ತಡೆರಹಿತ ಹಾಗೂ ಪರಿಣಾಕಾರಿ ವಹಿವಾಟು ನಡೆಸಲು ನೆರವಾಗಲಿದೆ.
undefined
1 ಸುಲಭವಾಗಿ ಬಳಕೆ ಮಾಡಬಲ್ಲ ಹಾಗೂ ಬಳಕೆದಾರರ ಇಂಟರ್ಫೇಸ್
ಸ್ಮಾರ್ಟ್ಫೋನ್ನಲ್ಲಿರುವ ಯಾವುದೇ ಆ್ಯಪ್ಗಳಾಗಿದ್ದರೂ ಬಳಕೆ ಸುಲಭವಾಗಿರಬೇಕು. ಬಳಕೆದಾರರ ಅನುಕೂಲ ಹಾಗೂ ಬೇಡಿಕೆಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಯೂಸರ್ ಇಂಟರ್ಫೆಸ್ (UI) ಪ್ರತಿ ಆ್ಯಪ್ನಲ್ಲಿ ಇರಬೇಕಾದ ಪ್ರಮುಖ ವಿಚಾರ. ಬಳಕೆದಾರನಿಗೆ ತಂತ್ರಜ್ಞಾನದ ಕುರಿತು ಅರಿವಿಲ್ಲದಿದ್ದರೂ ಯಾವುದೇ ಸಮಸ್ಯೆಗಳಿಲ್ಲದ ಆ್ಯಪ್ಲಿಕೇಶನ್ ಬಳಕೆ ಮಾಡುವಂತಿರಬೇಕು.ಬಳಕೆದಾರನ ಅನುಕೂಲ ಹಾಗೂ ಸುಲಭ ಬಳಕೆಗೆ ತಕ್ಕಂತೆ ಆ್ಯಪ್ ವಿನ್ಯಾಸ ಮಾಡಿರಬೇಕು. ಇದರಿಂದ ಬಳಕೆದಾರರ ಸುಲಭವಾಗಿ ಹಣ ವರ್ಗಾವಣೆ, ಬಿಲ್ ಪಾವತಿ, ಟ್ರಾನ್ಸಾಕ್ಷನ್ ಹಿಸ್ಟರಿ ಸೇರಿದಂತೆ ಇತರ ಫೀಚರ್ ಅಡೆತಡೆಗಳಿಲ್ಲದೆ, ಕೆಲವೇ ಕ್ಲಿಕ್ ಮೂಲಕ ಬಳಕೆ ಮಾಡುವಂತಿರಬೇಕು.
ಪ್ರಮುಖವಾಗಿ ತ್ವರಿತ ವಹಿವಾಟು ನಡೆಸಲು ಸರಳ ಹಾಗೂ ವ್ಯವಸ್ಥಿತ ವಿನ್ಯಾಸ ಆ್ಯಪ್ ಬಳಕೆದಾರನ ಅನುಭವದಲ್ಲಿ ಮಹತ್ವದ ಬದಲಾವಣೆ ತರಲಿದೆ. ಉದಾಹರಣೆಗೆ ಅತ್ಯಂತ ಜನಪ್ರಿಯ ಆ್ಯಪ್ಲಿಕೇಶನ್ ಬಜಾಜ್ ಫಿನ್ಸರ್ವ್ ಆ್ಯಪ್ ಗೊಂದಲಗಳಿಲ್ಲದ ಸರಳ ವಿನ್ಯಾಸ ಹೊಂದಿದೆ. ಇದರಿಂದ ಬಳಕೆದಾರ ಪ್ರಮುಖ ಫೀಚರ್ ಯಾವುದೇ ಅಡೆತಡೆ ಇಲ್ಲದೆ ಬಳಸಲು ಸಾಧ್ಯವಿದೆ. ಬ್ಯಾಲೆನ್ಸ್ ಪರಿಶೀಲನೆ, ಬಿಲ್ ಪಾವತಿಗಳನ್ನುಸುಲಭಾಗಿ ಮಾಡಲು ಸಾಧ್ಯವಿದೆ.ಇದು ಬಳಕೆದಾರನ ಒಟ್ಟಾರೆ ಅನುಭವ ಉತ್ತಮಗೊಳಿಸುವ ಜೊತೆಗೆ ಬಳಕೆಯನ್ನು ಸುಗಮ ಹಾಗೂ ನೇರವಾಗಿಸುತ್ತದೆ.
2 ಭದ್ರತಾ ಫೀಚರ್ಸ್
ಡಿಜಿಟಲ್ ವಹಿವಾಟಿನಲ್ಲಿ ಭದ್ರತೆ ಅತ್ಯಂತ ಪ್ರಮುಖ. ಯುಪಿಐ ಆ್ಯಪ್ ಬಳಕೆದಾರನ ಹಣಕಾಸಿನ, ಬ್ಯಾಂಕ್ ಖಾತೆ ಜೊತೆ ಜೋಡಣೆಯಾಗಿರುತ್ತದೆ. ಹೀಗಾಗಿ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ನೀವು ಆಯ್ಕೆ ಮಾಡಿರುವ ಆ್ಯಪ್ಲಿಕೇಶನ್ ವಂಚನೆ, ಅನಧಿಕೃತ ಟ್ರಾನ್ಸಾಕ್ಷನ್ಗಳಿಂದ ರಕ್ಷಿಸಲು ಗರಿಷ್ಠ ಮಟ್ಟದ ಭದ್ರತಾ ಫೀಚರ್ ನೀಡುತ್ತಿದೆ ಅನ್ನೋದು ಖಚಿತಪಡಿಸಿಕೊಳ್ಳುವುದು ಅತೀ ಮುಖ್ಯ.
ಯುಪಿಐ ಆ್ಯಪ್ ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಶನ್(MFA) ನೀಡುತ್ತಿದೆಯಾ ಅನ್ನೋದು ಗಮನಿಸಬೇಕು. ಇದು ಬಳಕೆದಾರನಿಗೆ ಪಾಸ್ವರ್ಡ್,ಪಿನ್ಗಿಂತಲೂ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. MFA ಸುರಕ್ಷತೆಯಲ್ಲಿ ಫಿಂಗರ್ಪ್ರಿಂಟ್, ಫೇಸ್ ರೆಕಗ್ನೀಶನ್, ಒಟಿಪಿ, ಬಯೋಮೆಟ್ರಿಕ್ನಂತ ಸುರಕ್ಷತಾ ಅಥೆಂಟಿಕೇಶನ್ ಒಳಗೊಂಡಿರುತ್ತದೆ. ಜೊತೆಗೆ ಬ್ಯಾಂಕ್ ಖಾತೆ, ಹಣಕಾಸಿ ವಹಿವಾಟು ಹ್ಯಾಕರ್ಸ್, ಸೈಬರ್ ಕ್ರೈಂ ಬೆದರಿಕೆಗಳಿಂದ ಸುರಕ್ಷಿತವಾಗಿದೆ ಅನ್ನೋದು ಖಚಿತಪಡಿಸಿಕೊಳ್ಳಲು ಡೇಟಾ ಎನ್ಕ್ರಿಪ್ಶನ್ ಅತೀ ಅಗತ್ಯವಾಗಿದೆ.
ಭಾರತದ ಜನಪ್ರಿಯ ಯುಪಿಐ ಆ್ಯಪ್ಲಿಕೇಶನ್ಗಳಾದ ಪೇಟಿಎಂ ಫೋನ್ಪೆ, ಬಜಾಜ್ ಪೆ(Bajaj Pay) ಸುಧಾರಿತ ಎನ್ಕ್ರಿಪ್ಶನ್ ತಂತ್ರಜ್ಞಾನ ಹಾಗೂ ಗರಿಷ್ಠ ಸುರಕ್ಷತೆ ಫೀಚರ್ಗಳಾದ ಪಿನ್ ಸೇರಿದಂತೆ ಇತರ ವ್ಯವಸ್ಥೆಗಳ ಭದ್ರತೆ ನೀಡುತ್ತದೆ. ಈ ಡೇಟಾ ಎನ್ಕ್ರಿಪ್ಶನ್ ಬಳಕೆದಾರನ ವೈಯುಕ್ತಿಕ ಡೇಟಾಗಳನ್ನು ಭದ್ರವಾಗಿಡಲಿದೆ. ಈ ಸುರಕ್ಷತಾ ಫೀಚರ್ ಬಳಕೆದಾರನಿಗೆ ರಿಯಲ್ ಟೈಮ್ ವಂಚನೆ ಪತ್ತೆ ಹಚ್ಚಲು ನೆರವು ನೀಡುತ್ತದೆ. ಇದರಿಂದ ಆರ್ಥಿಕ ನಷ್ಟವನ್ನು ತಪ್ಪಿಸುತ್ತದೆ. ಜೊತೆಗೆ ಅನುಮಾನಸ್ಪದ ಚಟುವಟಿಕೆ ಪತ್ತೆ ಹಚ್ಚಲು ಹಾಗೂ ತಕ್ಷಣವೆ ಬಳಕೆದಾರನ ಎಚ್ಚರಿಸಲು ಸಹಾಯ ಮಾಡುತ್ತದೆ.
3 ಇತರ ಆ್ಯಪ್ ಜೊತೆ ಹೊಂದಿಕೊಳ್ಳುವಿಕೆ ಹಾಗೂ ತಡೆರಹಿತ ಸೇವೆ
ಯುಪಿಐ ಆ್ಯಪ್ ಕೇವಲ ಹಣ ವರ್ಗಾವಣೆ, ಬಿಲ್ ಪಾವತಿಗೆ ಮಾತ್ರ ಸೀಮಿತವಾಗಿರಬಾರದು. ಬಳಕೆದಾರನಿಗೆ ಇತರ ಅನುಕೂಲತೆಗಳಿಗೂ ಬಳಕೆಯಾಗಬೇಕು. ಮೊಬೈಲ್ ಫೋನ್ ರೀಚಾರ್ಜ್, ಟಿಕೆಟ್ ಬುಕಿಂಗ್, ಟಿವಿ ರೀಚಾರ್ಜ್ ಸೇರಿದಂತೆ ಹೆಚ್ಚಿನ ಸೇವೆ ನೀಡಬೇಕು. ಸದ್ಯ ಯುಪಿಐ ಆ್ಯಪ್ಗಳು ನೀರಿನ ಬಿಲ್ಲು ಪಾವತಿ, ಗ್ಯಾಸ್ ಬಿಲ್, ವಿಮೆ ಕಂತು, ಶಾಪಿಂಗ್ ಸೇರಿದಂತೆ ಹಲವು ಸೇವೆಗಳನ್ನು ಒಂದೇ ಆ್ಯಪ್ ನೀಡುತ್ತಿದೆ.
ಬಜಾಜ್ ಪೇ(Bajaj Pay) ಹಾಗೂ ಗೂಗಲ್ ಪೇ ನಂತಹ ಆ್ಯಪ್ ಬಳಕೆದಾರರಿಗೆ ಭಾರತ್ ಬಿಲ್ ಪಾವತಿ ವ್ಯವಸ್ಥೆ(BBPS)ಮೂಲಕ ಯೂಟಿಲಿಟಿ ಬಿಲ್ ಪಾವತಿಗೆ ಅನುಮತಿಸುತ್ತದೆ.ಒಂದೇ ಆ್ಯಪ್ ಮೂಲಕ ನಿಮ್ಮ ಎಲ್ಲಾ ಬಿಲ್ ಪಾವತಿ ಪ್ರತಿ ತಿಂಗಳು ಮರುಕಳಿಸುವ ಪಾವತಿಯನ್ನು ಮಾಡಲು ಸಾಧ್ಯವಿದೆ. ಇದರ ಜೊತೆಗೆ ಯುಪಿಐ ಆ್ಯಪ್ಗಳನ್ನು ಇ ಕಾಮರ್ಸ್ ಪ್ಲಾಟ್ಫಾರ್ಮ್ ಹಾಗೂ ಇತರ ಪಾವತಿ ಗೇಟ್ವೇ ಜೊತೆ ಲಿಂಕ್ ಮಾಡಲು ಸಾಧ್ಯವಿದೆ. ಇದು ಬಳಕೆದಾರ ಪ್ರತಿ ಬಾರಿ ಪಾವತಿಗೆ ಯುಪಿಐ ಐಡಿ ಸೇರಿದಂತೆ ಇತರ ವಿವರಗಳನ್ನು ನಮೂದಿಸಿ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
4 ಹಲವು ಬ್ಯಾಂಕ್ ಖಾತೆ ಬೆಂಬಲ
ನೀವು ಆಯ್ಕೆ ಮಾಡಿದ ಯುಪಿಐ ಆ್ಯಪ್ ಒಂದು ಬ್ಯಾಂಕ್ ಖಾತೆ ಮಾತ್ರವಲ್ಲ, ಹಲವು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ಸಾಮರ್ಥ್ಯ ಹೊಂದಿರಬೇಕು. ಪ್ರಮುಖವಾಗಿ ಬಳಕೆದಾರರ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದು, ಹಣಕಾಸು ವ್ಯವಹಾರ ನಿರ್ವಹಿಸುತ್ತಿದ್ದರೆ, ಈ ಎಲ್ಲಾ ಖಾತೆಗಳನ್ನು ಒಂದೇ ಯುಪಿಐ ಆ್ಯಪ್ನಲ್ಲಿ ಲಿಂಕ್ ಮಾಡುವಂತಿರಬೇಕು. ಇದು ಭಿನ್ನ ವಹಿವಾಟುಗಳಿಗೆ ಖಾತೆ ಬದಲಾಯಿಸಿ ಪಾವತಿ ಅಥವಾ ವಹಿವಾಟು ನಡೆಸಲು ಅನುಕೂಲವಾಗಲಿದೆ.
ಬಹು ಬ್ಯಾಂಕ್ ಸಪೋರ್ಟ್ ಫೀಚರ್ ಕೆಲ ಬಳಕೆದಾರರಿಗೆ ಅತ್ಯಗತ್ಯವಾಗಿದೆ. ವಿವಿಧ ಉದ್ದೇಶಗಳಿಗೆ ನಿರ್ದಿಷ್ಟ ಖಾತೆಗಳನ್ನು ಬಳಸುವ ಬಳಕೆದಾರನಿಗೆ ಈ ಫೀಚರ್ ನೆರವಾಗಲಿದೆ. ಹೀಗಾಗಿ ಯುಪಿಐ ಆ್ಯಪ್ ಡೌನ್ಲೌಡ್ ಮಾಡುವಾಗ ಈ ಫೀಚರ್ ಕುರಿತು ಗಮನಹರಿಸಲು ಮರೆಯದಿರಿ.
5 ವಿಶ್ವಾಸಾರ್ಹ ಹಾಗೂ ವೇಗದ ವಹಿವಾಟು
ಯುಪಿಐ ಜನಪ್ರಿಯತೆ ಹಾಗೂ ಬಳಕೆ ಪ್ರಮಾಣ ತ್ವರಿತಗತಿಯಲ್ಲಿ ಹೆಚ್ಚಾಗಲು ಪ್ರಮುಖ ಕಾರಣ ಯುಪಿಐ ವೇಗ ಹಾಗೂ ವಿಶ್ವಾಸಾರ್ಹತೆ. ಉತ್ತಮ ಯುಪಿಐ ಆ್ಯಪ್ ಯಾವುದೇ ವಿಳಂಬವಿಲ್ಲದೆ ಹಣ ವರ್ಗಾವಣೆ ಸೇರಿದಂತೆ ವಹಿವಾಟು ನಡೆಸಲು ಅನುವುಮಾಡಿಕೊಡುತ್ತದೆ. ಸ್ನೇಹಿತರಿಗೆ ಹಣ ವರ್ಗಾವಣೆ, ಆನ್ಲೈನ್ ಖರೀದಿ, ಬಿಲ್ ಪಾವತಿ ಸೇರಿದಂತೆ ವಹಿವಾಟು ಯಾವುದೇ ಆದರೂ ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ. ಈ ವಿಶ್ವಾಸಾರ್ಹತೆ ಅತ್ಯಗತ್ಯ. ಒಂದು ವೇಳೆ ವಿಳಂಬ, ವಿಫಲ ವಹಿವಾಟು ಬಳಕೆದಾರರ ಸಮಯ ವ್ಯರ್ಥ ಮಾಡುವುದಲ್ಲದೆ ಅನಗತ್ಯ ಗೊಂದಲಕ್ಕೆ ಕಾರಣವಾಗಿ ಬಳಕೆದಾರನಿಗೆ ನಿರಾಸೆಯಂಟುಮಾಡುತ್ತದೆ.
ಯುಪಿಐ ಆ್ಯಪ್ ಡೌನ್ಲೋಡ್ ಮಾಡುವ ವೇಳೆ ವೇಗದ ವಹಿವಾಟು, ಅಲಭ್ಯತೆ ಸೇರಿದಂತೆ ಇತರ ತಾಂತ್ರಿಕ ಸಮಸ್ಯೆಗಳಿಂದ ಮುಕ್ತವಾಗಿರುವ ಯುಪಿಐ ಆ್ಯಪ್ಲಿಕೇಶನ್ ಖಾತ್ರಿಪಡಿಸಿಕೊಳ್ಳಬೇಕು. ಬಜಾಜ್ ಪೇ(Bajaj Pay) ನಂತಹ ಆ್ಯಪ್ಲಿಕೇಶನ್ ತ್ವರಿತ ವಹಿವಾಟು ನಡೆಸುವಂತ ಆಪ್ಟಿಮೈಸ್ ಮಾಡಲಾಗಿದೆ. ಗರಿಷ್ಠ ವಹಿವಾಟು ನಡೆಯುವ ಸಮಯ, ಹಬ್ಬದ ಸಮಯ ಸೇರಿದಂತೆ ಅತೀ ಹೆಚ್ಚಿನ ಮಂದಿ ವಹಿವಾಟು ನಡೆಸುತ್ತಿರುವಾಗಲು ತಡೆರಹಿತ ಹಾಗೂ ತ್ವರಿತ ಪಾವತಿ ನಡೆಯುವಂತೆ ನೋಡಿಕೊಳ್ಳುತ್ತದೆ.
6 ಆಫ್ಲೈನ್ ಪಾವತಿ ಆಯ್ಕೆ
ಹಳ್ಳಿ, ನೆಟ್ವರ್ಕ್ ಸಮಸ್ಯೆಗಳಿರುವ ಪ್ರದೇಶದಲ್ಲಿ ಬಳಕೆದಾರರು ಮೊಬೈಲ್ ಡೇಟಾ, ವೈಫೈ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಪ್ರದೇಶಗಳಲ್ಲಿ ಯುಪಿಐ ವಹಿವಾಟು ನಡಸಲು ಸಾಧ್ಯವಾಗುವಂತ ಫೀಚರ್ ಇದೆಯಾ ಅನ್ನೋದು ಖಚಿತಪಡಿಸಿಕೊಳ್ಳಬೇಕು.ಇದಕ್ಕಾಗಿ ಆಫ್ಲೈನ್ ಪಾವತಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಬೇಕು. ಕೆಲ ಯುಪಿಐ ಆ್ಯಪ್ USSD ಕೋಡ್ ಅಥವಾ ಮೊದಲೇ ಲೋಡ್ ಮಾಡಲಾದ ಯುಪಿಐ ವ್ಯಾಲೆಟ್ ಬಳಸಿಕೊಂಡು ಪಾವತಿ ಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಈ ವ್ಯವಸ್ಥೆಯಲ್ಲಿ ಸಣ್ಣ ವಹಿವಾಟು ನಡೆಸಲು ಇಂಟರ್ನೆಟ್ ಅಗತ್ಯವಿರುವುದಿಲ್ಲ.
ಈ ಫೀಚರ್ ಬಳಕೆದಾರನ ನೆಟ್ವರ್ಕ್, ಡೇಟಾ ಸೀಮಿತ ಅಥವಾ ಸರಿಯಾಗಿಲ್ಲದಿದ್ದರೂ ಸಣ್ಣ ಖರೀದಿ, ಸಾರಿಗೆ, ಸಣ್ಣ ಪಾವತಿಗಳನ್ನು ಅಡೆತಡೆ ಇಲ್ಲದೆ ಮಾಡಲು ಸಾಧ್ಯವಾಗುತ್ತದೆ.
7 ರಿವಾರ್ಡ್ಸ್, ಕ್ಯಾಶ್ಬ್ಯಾಕ್ ಹಾಗೂ ಕೊಡುಗೆ
ಯುಪಿಐ ಆ್ಯಪ್ ಬಳಕೆದಾರನಿಗೆ ಪ್ರತಿ ವಹಿವಾಟಿನ ಬಳಿಕ ರಿವಾರ್ಡ್ಸ್, ಕ್ಯಾಶ್ಬ್ಯಾಕ್ ಸೇರಿದಂತೆ ಹಲವು ಕೊಡುಗೆಗಳನ್ನು ಆ್ಯಪ್ ನೀಡುತ್ತದೆ. ಈ ಮೂಲಕ ಯುಪಿಐ ಆ್ಯಪ್ ಮೂಲಕ ವಹಿವಾಟು ನಡೆಸಲು ಪ್ರೋತ್ಸಾಹ ನೀಡುತ್ತದೆ.
ಬಿಲ್ ಪಾವತಿ ಮೇಲೆ ಕ್ಯಾಶ್ಬ್ಯಾಕ್ ಕೊಡುಗೆ, ಖರೀದಿ ಮೇಲೆ ಡಿಸ್ಕೌಂಟ್, ಹಬ್ಬದ ಸೀಸನ್ಗಳಲ್ಲಿನ ಕೊಡುಗೆಗಳಿಂದ ಬಳಕೆದಾರ ಉತ್ತಮ ಬಹುಮಾನ, ಕ್ಯಾಶ್ಬ್ಯಾಕ್ ಆಫರ್ ಪಡೆಯಲು ಸಾಧ್ಯವಿದೆ. ಈ ಕೊಡುಗೆಗಳು ಯುಪಿಐ ಆ್ಯಪ್ಗಳನ್ನು ಮತ್ತಷ್ಟು ಆಕರ್ಷಕ ಹಾಗೂ ಆಕರ್ಷಣೆಯ ಕೇಂದ್ರವನ್ನಾಗಿ ಮಾಡುತ್ತದೆ. ಈ ರೀತಿಯ ಕ್ಯಾಶ್ಬ್ಯಾಕ್, ರಿವಾರ್ಡ್ಸ್ ಬಳಕೆದಾರ ಕಾಲಾನಂತರ ಹಣ ಉಳಿಸಲು ಅಥವಾ ಪಡೆದ ರಿವಾರ್ಡ್ಸ್ಳಿಂದ ಹಣ ಪಾವತಿಸಿದರೆ ಖರೀದಿಸಲು ಸಹಾಯ ಮಾಡುತ್ತದೆ.
8 ಬಳಕೆದಾರನಿಗೆ 24/7 ಗ್ರಾಹಕ ಬೆಂಬಲ
ತ್ವರಿತ ವಹಿವಾಟು, ಸುರಕ್ಷತೆ, ವೇಗ ಸೇರಿದಂತೆ ಹಲವು ಫೀಚರ್ ಜೊತೆಗೆ 24/7 ಗ್ರಾಹಕ ಬೆಂಬಲವೂ ಅತ್ಯಗತ್ಯ. ಯಾವುದೇ ಯುಪಿಐ ಆ್ಯಪ್ನಲ್ಲಿ ಬಳಕೆದಾರ ತನ್ನ ಸಮಸ್ಯೆಗಳನ್ನು ಪರಿಹರಿಸಲು, ಅಥವಾ ಗೊಂದಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಗ್ರಾಹಕ ಬೆಂಬಲದ ಅವಶ್ಯಕತೆ ಇದೆ. ವಿಫಲ ವಹಿವಾಟು, ತಪ್ಪಾಗಿ ಮಾಡಿದ ವಹಿವಾಟು, ತಾಂತ್ರಿಕ ಸಮಸ್ಯೆಯಿಂದ ವಿಫಲ ವಹಿವಾಟುಗಳನ್ನು ಸರಿಪಡಿಸಲು ವಿಶ್ವಾಸಾರ್ಹ ಗ್ರಾಹಕ ಬೆಂಬಲ ಅತ್ಯಗತ್ಯ. ಉತ್ತಮ ಯುಪಿಐ ಆ್ಯಪ್ ಚಾಟ್ಬಾಟ್, ಇಮೇಲ್ ಹಾಗೂ ಗ್ರಾಹಕರ ಸಂಪರ್ಕ ಸಂಖ್ಯೆ ಮೂಲಕ ದಿನದ 24 ಗಂಟೆ, ವಾರದ 7 ದಿನವೂ ಸೇವೆಯನ್ನು ಒದಗಿಸುತ್ತದೆ.
ತ್ವರಿತ ಗ್ರಾಹಕ ಬೆಂಬಲದಿಂದ ಬಳಕೆದಾರನ ಅನುಭವದಲ್ಲಿ ಮಹತ್ತರ ವ್ಯತ್ಯಾಸ ತರಲಿದೆ. ಗ್ರಾಹಕ ಸೇವೆ ವಿಷಯದಲ್ಲಿ ಅತ್ಯುತ್ತಮ ಆ್ಯಪ್ಲಿಕೇಶನ್ಗಳಲ್ಲಿ ಒಂದಾದ ಬಜಾಜ್ ಪೇ, ಬಳಕೆದಾರ ಗ್ರಾಹಕ ಬೆಂಬಲವನ್ನು ತ್ವರಿತವಾಗಿ ಪಡೆಯಲು ನೆರವಾಗುತ್ತದೆ. ಆ್ಯಪ್ ಮೂಲಕ ಬಳಕೆದಾರ ಸುಲಭವಾಗಿ ಗ್ರಾಹಕ ಸೇವೆ ಪಡೆಯಲು ಅನುಮತಿಸುತ್ತದೆ. ಬಳಕೆದಾರನ ಸಮಸ್ಯೆ, ಕಾಳಜಿಯನ್ನು ವ್ಯಕ್ತಪಡಿಸಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ತಕ್ಷಣದ ಸ್ಪಂದನೆ, ಸಮಸ್ಯೆಗಳಿಗೆ ಪರಿಹಾರ ವಿಸ್ವಾರ್ಹ ಯುಪಿಐ ಆ್ಯಪ್ಲಿಕೇಶನ್ನ ಪ್ರಮುಖ ಫೀಚರ್ ಆಗಿದೆ.
9 ವಹಿವಾಟು ಹಿಸ್ಟರಿ ಹಾಗೂ ಒಳನೋಟ
ಉತ್ತಮವಾಗಿ ವಿನ್ಯಾಸಗೊಳಿಸಿರುವ ಯುಪಿಐ ಆ್ಯಪ್ಲಿಕೇಶನ್ ಬಳಕೆದಾರನ ವಹಿವಾಟು ಹಿಸ್ಟರಿ, ಖರ್ಚು ವೆಚ್ಚ, ಪಾವತಿಗಳ ಸಂಪೂರ್ಣ ಒಳನೋಟ ನೀಡುತ್ತದೆ. ಈ ಹಿಸ್ಟರಿ ಫೀಚರ್ನಿಂದ ಬಳಕೆದಾರ ಪಾವತಿ ಟ್ರ್ಯಾಕ್ ಮಾಡಲು, ಯಾವುದೇ ವಹಿವಾಟು ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರಿಂದ ಮಾಸಿಕ ವೆಚ್ಚ, ದಿನದ ಖರ್ಚು, ಖರೀದಿ ಕುರಿತು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ.
ಯುಪಿಐ ಆ್ಯಪ್ ಡೌನ್ಲೋಡ್ ಮಾಡುವಾಗ ಸುಲಭವಾಗಿ ಅರ್ಥಮಾಡಿಕೊಳ್ಳುವಂತ ಹಿಸ್ಟರಿ ವರದಿ, ವಹಿವಾಟುಗಳ ಸಾರಂಶ ನೀಡುವ ಆ್ಯಪ್ ಕುರಿತು ಗಮನಹರಿಸಿ. ಕೆಲ ಆ್ಯಪ್ಲಿಕೇಶನ್ ಬಳಕೆದಾರರಿಗೆ ತಮ್ಮ ವೆಚ್ಚಗಳನ್ನು ವರ್ಗೀಕರಿಸಲು , ತಿಂಗಳ ಆಯವ್ಯಯ ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವು ನೀಡುತ್ತದೆ.
10 ಕ್ಯೂಆರ್ ಕೋಡ್ ಹಾಗೂ ಸಂಪರ್ಕ ರಹಿತ ಪಾವತಿ
ಯುಪಿಐ ಆ್ಯಪ್ ಪ್ರಮುಖ ಫೀಚರ್ಗಳಲ್ಲಿ ಒಂದಾಗ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಅತ್ಯಗತ್ಯವಾಗಿದೆ. ವ್ಯಾಪಾರಿಯ ಕ್ಯೂಆರ್ ಕೋಡ್, ವ್ಯಕ್ತಿಯ ಕ್ಯೂಆರ್ ಕೋಡ್ ಮೂಲಕ ಯಾವುದೇ ಅಡೆ ತಡೆ ಇಲ್ಲದೆ, ಹೆಚ್ಚಿನ ವಿವರ ದಾಖಲಿಸದೆ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ತಕ್ಷಣ ಪಾವತಿ ಮಾಡಲು ಕ್ಯೂಆರ್ ಕೋಡ್ ನೆರವಾಗುತ್ತದೆ. ಸುಲಭ ಹಾಗೂ ಸರಳ ರೀತಿಯಲ್ಲಿ ಹಾಗೂ ತ್ವರಿತವಾಗಿ ಬಳಕೆ ಮಾಡುವಂತಿರಬೇಕು.
ಅಂಗಡಿ, ರೆಸ್ಟೋರೆಂಟ್, ಇತರ ಕಡೆಗಳಲ್ಲಿ ಕ್ಯೂಆರ್ ಕೋಡ್ ಬಳಕೆ ಅತ್ಯಗತ್ಯವಾಗಿರುತ್ತದೆ. ಹೀಗಾಗಿ ಕ್ಯೂಆರ್ ಕೋಡ್ ಫೀಚರ್ ಯುಪಿಐ ಆ್ಯಪ್ಲಿಕೇಶನ್ಗಳ ಪ್ರಮುಖ ಫೀಚರ್ ಆಗಿದೆ.
ಸಾರಾಂಶ
ಉತ್ತಮ ಹಾಗೂ ಸರಿಯಾಗ ಯುಪಿಐ ಆ್ಯಪ್ ಆಯ್ಕೆ ಮಾಡುವುದು, ಕೇವಲ ಬೇಸಿಕ್ ಫಂಕ್ಷನ್ ನೋಡಿ ಆಯ್ಕೆ ಮಾಡುವುದಲ್ಲ. ಅದಕ್ಕಿಂತ ಹೆಚ್ಚಿನ ಹಾಗೂ ಪ್ರಮುಖ ಫೀಚರ್ ಕುರಿತು ಪರಿಶೀಲಿಸಬೇಕು. ಉತ್ತಮ ಯುಪಿಐ ಆ್ಯಪ್ ಸುಲಭ ಬಳಕೆ, ಗರಿಷ್ಠ ಭದ್ರತೆ, ಇತರ ಸೇವೆಗಳ ಜೋಡಣೆ, ಬಳಕೆದಾರನ ಅನುಭವ ಹೆಚ್ಚಿಸುವ ಫೀಚರ್ಸ್ ಒಳಗೊಂಡಿರಬೇಕು. ತಡೆರಹಿತ ಆಫ್ಲೈನ್ ಪಾವತಿ, ಹಲವು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ಸಾಮರ್ಥ್ಯ, ಗ್ರಾಹಕ ಸೇವೆ, ವಹಿವಾಟು ಹಿಸ್ಟರಿ ಸೇರಿದಂತೆ ಕೆಲ ಅತ್ಯಗತ್ಯ ಫೀಚರ್ ಮೂಲಕ ಗ್ರಾಹಕರನ ದೈನಂದಿನ ಚಟುವಟಿಕೆ ನಿರ್ವಹಿಸುವ ವೇದಿಕೆಯಾಗಿ ಅಭಿವೃದ್ಧಿಗೊಂಡಿದೆ.
ಬಜಾಜ್ ಫಿನ್ಸರ್ವ್ BBPS ಪ್ಲಾಟ್ಫಾರ್ಮ್ ಈ ವಿಶೇಷತೆ ಹಾಗೂ ಫೀಚರ್ ಹೊಂದಿದ ಪರಿಣಾಮಕಾರಿ ಯುಪಿಐ ಆ್ಯಪ್ ಆಗಿದೆ. ಡಿಜಿಟಲ್ ಪಾವತಿ ಅನುಭವ, ಅನುಕೂಲತೆ, ಭದ್ರತೆ ಹಾಗೂ ಹೊಸತನ ಬಯಸುವ ಬಳಕೆದಾರರಿಗೆ ಉತ್ತಮ ಹಾಗೂ ಮುಂಚೂಣಿಯ ಆಯ್ಕೆಯನ್ನಾಗಿ ಮಾಡತ್ತದೆ. ಈ ಫೀಚರ್ಗಳನ್ನು ಗಮನದಲ್ಲಿಟ್ಟುಕೊಂಡು ನೀವು ಡೌನ್ಲೋಡ್ ಮಾಡುವ ಯುಪಿಐ ಆ್ಯಪ್ಲಿಕೇಶನ್ ನಿಮ್ಮ ಎಲ್ಲಾ ಅಗತ್ಯತೆ ಹಾಗೂ ಬೇಡಿಕೆ ಪೂರೈಸಿ, ಉತ್ತಮ ಅನುಭವ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.