ಬಾಡಿಗೆ ನೀಡದೇ ಠಿಕಾಣಿ ಹೂಡಿದ ಮಹಿಳೆ, ಕೋರ್ಟೂ ಹೀಂಗ್ ತೀರ್ಪು ನೀಡಿದ್ರೆ ಕಥೆ ಗೋವಿಂದ!

By Suvarna News  |  First Published Oct 6, 2023, 2:32 PM IST

ಮನೆ ಬಾಡಿಗೆಗೆ ನೀಡುವಾಗ ಜಾಗೃತಿಯಿಂದಿರಬೇಕು. ಕೆಲವೊಮ್ಮೆ ಮಾಲಿಕರ ನಿರ್ಲಕ್ಷ್ಯ ದೊಡ್ಡ ಸಮಸ್ಯೆ ತಂದಿಡುತ್ತದೆ. ತಳವೂರಿ ಕುಳಿತ ಬಾಡಿಗೆದಾರರನ್ನು ಬಿಡಿಸಲಾಗದೆ ಪರಿತಪಿಸಬೇಕಾಗುತ್ತದೆ. ದುರಾದೃಷ್ಟಕ್ಕೆ ಬಾಡಿಗೆದಾರನ ಪರವೇ ತೀರ್ಪು ಬಂದ್ರೆ ಮುಗೀತು.


ಬಾಡಿಗೆದಾರರು ಹಾಗೂ ಮನೆ ಮಾಲಿಕರ ಮಧ್ಯೆ ಗಲಾಟೆ ಸಾಮಾನ್ಯ. ಅತಿ ಹೆಚ್ಚು ನೀರು ಬಳಕೆ, ಮಿತಿಗಿಂತ ಹೆಚ್ಚು ಜನರು ಮನೆಯಲ್ಲಿ ವಾಸವಾಗಿರೋದು ಹೀಗೆ ಸಣ್ಣಪುಟ್ಟ ಗಲಾಟೆ ಜೊತೆ ಬಾಡಿಗೆ ವಿಷ್ಯಕ್ಕೆ ಜಗಳ ನಡೆಯೋದು ಹೆಚ್ಚು. ಬಾಡಿಗೆದಾರ, ಮಾಲೀಕನಿಗೆ ಬಾಡಿಗೆ ನೀಡಿಲ್ಲ ಎನ್ನುವ ಕಾರಣಕ್ಕೆ ಹತ್ಯೆ ಕೂಡ ನಡೆದಿರೋದಿದೆ. ಇಂಥ ಘಟನೆ ನಮ್ಮ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನಡೆಯುತ್ತಿರುತ್ತದೆ. ಬಾಡಿಗೆ ಮನೆಗೆ ಬಂದ ವ್ಯಕ್ತಿ ಎಷ್ಟೋ ತಿಂಗಳು ಬಾಡಿಗೆ ನೀಡದೆ ಹಾಗೆ ವಾಸವಾಗಿದ್ದಲ್ಲದೆ, ಮನೆ ಬಿಡಲು ತನಗೇ ಹಣ ನೀಡ್ಬೇಕು ಎಂದು ಪಟ್ಟುಹಿಡಿದ ಘಟನೆಯೊಂದು ಈಗ ಬೆಳಕಿಗೆ ಬಂದಿದೆ.

ಘಟನೆ ನಡೆದಿರೋದು ಲಾಸ್ ಏಂಜಲೀಸ್‌ (Los Angeles) ನಲ್ಲಿ. ಒಂದುವರೆ ವರ್ಷದಿಂದ ಬಾಡಿಗೆ (Rent) ಮನೆಯಲ್ಲಿರುವ ಮಹಿಳೆ, ಕೆಲ ತಿಂಗಳಿಂದ ಮನೆ ಬಾಡಿಗೆಯನ್ನೂ ಪಾವತಿಸಿಲ್ಲ ಮನೆ ಖಾಲಿ ಮಾಡಲು ಈಗ 100,000 ಡಾಲರ್ ಸ್ಥಳಾಂತರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಪ್ರಕರಣ ಕೋರ್ಟ್ (Court) ಮೆಟ್ಟಿಲೇರಿದೆ. 

Latest Videos

undefined

ಶ್ರೀಮಂತರಾದ್ರೂ ಬೇಕಾಬಿಟ್ಟಿ ಖರ್ಚು ಮಾಡೋಲ್ಲ, ಇವನ್ನು ಮಾಡ್ಬೇಡಿ ಅಂತಾರೆ!

ಎಲಿಜಬೆತ್ ಹಿರ್ಸ್ಚೋರ್ನ್ ಮತ್ತು ಸಾಸ್ಚಾ ಜೊವಾನೋವಿಕ್ ಮಧ್ಯೆ ಗಲಾಟೆ ನಡೆಯುತ್ತಿದೆ.  ಎಲಿಜಬೆತ್ ಹಿರ್ಸ್ಚೋರ್ನ್ ಬಾಡಿಗೆದಾರಳು. ಈಕೆ ಸೆಪ್ಟೆಂಬರ್ 2021 ರಲ್ಲಿ ಸಾಸ್ಚಾ ಜೊವಾನೋವಿಕ್ ಅವರ ಬ್ರೆಂಟ್‌ವುಡ್ ಅತಿಥಿಗೃಹವನ್ನು ಬಾಡಿಗೆಗೆ ಪಡೆದಿದ್ದಳು. ಆರು ತಿಂಗಳ ಕಾಲ ಪ್ರತಿ ರಾತ್ರಿಗೆ 105 ಡಾಲರ್ ದರದಂತೆ ಬಾಡಿಗೆ ನೀಡಬೇಕೆಂಬ ಒಪ್ಪಂದವಾಗಿತ್ತು. ಒಟ್ಟೂ ಆರು ತಿಂಗಳಿಗೆ ಆಕೆ  20,793 ಡಾಲರ್ ಶುಲ್ಕವನ್ನು ನೀಡಬೇಕಾಗಿತ್ತು. ಬಾಡಿಗೆ ಕರಾರಿನಂತೆ 2022 ಏಪ್ರಿಲ್ ನಲ್ಲಿ ಆಕೆಯ ವಾಸ್ತವ್ಯ ಕೊನೆಗೊಂಡಿದೆ. ಆದ್ರೆ ಎಲಿಜಬೆತ್ ಹಿರ್ಸ್ಚೋರ್ನ್ ಮನೆಯನ್ನು ಖಾಲಿ ಮಾಡಲಿಲ್ಲ. ಜೊತೆಗೆ ಬಾಡಿಗೆ ಇಲ್ಲದೆ ಆಕೆ ವಾಸವಾಗಿದ್ದಾಳೆ.

ಇಂಡಿಗೋ ಫ್ಲೈಟ್‌ ಪ್ರಯಾಣ ಟಿಕೆಟ್‌ಗೆ 1000 ರೂ. ವರೆಗೆ ಹೆಚ್ಚಳ: ಇನ್ಮೇಲೆ ವಿಮಾನದ ಇಂಧನಕ್ಕೂ ಇಷ್ಟು ದುಡ್ಡು ಕೊಡ್ಬೇಕು!

ಸಾಸ್ಚಾ ಜೊವಾನೋವಿಕ್ ಆಕೆಯನ್ನು ಹೊರಹಾಕಲು ಪ್ರಯತ್ನ ನಡೆಸುತ್ತಾರೆ. ಈ ವೇಳೆ ಎಲಿಜಬೆತ್ ಹಿರ್ಸ್ಚೋರ್ನ್, ಮನೆಯಿಂದ ಹೊರಗೆ ಹೋಗಲು ನಿರಾಕರಿಸುತ್ತಾಳೆ. ಹಾಗೆಯೇ ನಗರದ ತನಿಖಾಧಿಕಾರಿಗೆ ದೂರು ನೀಡುತ್ತಾಳೆ. ಎಲಿಜಬೆತ್ ಹಿರ್ಸ್ಚೋರ್ನ್,  ಬಾಡಿಗೆ ಪಾವತಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾಳೆ. ಕಿರುಕುಳ, ಅಕ್ರಮ ಹೊರಹಾಕುವಿಕೆ ಮತ್ತು ವರ್ಗಾವಣೆ ಶುಲ್ಕ ಪಾವತಿಸದ ಕಾರಣಕ್ಕಾಗಿ ಸಾಸ್ಚಾ ಜೊವಾನೋವಿಕ್ ವಿರುದ್ಧ ದೂರು ದಾಖಲಿಸಿದ್ದಾಳೆ. ಮೂಲಗಳ ಪ್ರಕಾರ, ಸಾಸ್ಚಾ ಜೊವಾನೋವಿಕ್ 100,000 ಡಾಲರ್ ಪಾವತಿಸಿದ ನಂತರ ಹೊರಡುವುದಾಗಿ ಎಲಿಜಬೆತ್ ತನ್ನ ದೂರಿನಲ್ಲಿ ಹೇಳಿದ್ದಾಳೆ. 

ವಿಚಾರಣೆ ಕೈಗೆತ್ತಿಕೊಂಡ ತನಿಖಾಧಿಕಾರಿಗಳು, ಇಬ್ಬರ ವಾದ – ವಿವಾದಗಳನ್ನು ಆಲಿಸಿದ್ದಾರೆ.  ನಗರದ ಬಾಡಿಗೆ ಸ್ಥಿರೀಕರಣ ಸುಗ್ರೀವಾಜ್ಞೆಯ ಅಡಿಯಲ್ಲಿ, ಲಾಸ್ ಏಂಜಲೀಸ್‌ನಲ್ಲಿ ಇತ್ತೀಚೆಗೆ ಅಳವಡಿಸಿಕೊಂಡ ಜಸ್ಟ್ ಕಾಸ್ ಆರ್ಡಿನೆನ್ಸ್ ಪ್ರಕಾರ, ಜೋವಾನೋವಿಕ್, ಎಲಿಜಬೆತ್ ಳನ್ನು ಹೊರಹಾಕಲು ಯಾವುದೇ ಕಾನೂನು ಕಾರಣವಿಲ್ಲ. ಅವಳನ್ನು ಹೊರಹಾಕಲು ಸ್ಥಳಾಂತರ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ತೀರ್ಪು ನೀಡಿದ್ದಾರೆ.  ಜಮೀನುದಾರನ ಪರ ತೀರ್ಪುಬರುವವರೆಗೂ ಈ ಮನೆ ಬಾಡಿಗೆಯಲ್ಲಿರುವವರ ಮನೆಯೇ ಆಗಿರುತ್ತದೆ ಎಂದೂ ಹೇಳಲಾಗಿದೆ. 

ಎಲಿಜಬೆತ್ ವಕೀಲರು, ಅವಳು ಬಾಡಿಗೆಯನ್ನು ಪಾವತಿಸಬಾರದು ಮತ್ತು ಬದಲಿಗೆ 20,793 ಡಾಲರ್ ಹಣ ಪಡೆಯಬೇಕೆಂದು ವಾದ ಮಾಡ್ತಿದ್ದಾರೆ. ಅವರ ಪ್ರಕಾರ, ನಗರದಲ್ಲಿ ಅತಿಥಿ ಗೃಹವನ್ನು ಬಾಡಿಗೆಗೆ ನೀಡಲು ಅನುಮತಿ ಇಲ್ಲ. ಪರವಾನಿಗೆ ಇಲ್ಲದೆ ಸಾಸ್ಚಾ ಜೊವಾನೋವಿಕ್ ಈ ಮನೆ ನಿರ್ಮಿಸಿದ್ದಲ್ಲದೆ ಬಾಡಿಗೆ ನೀಡಿದ್ದಾರೆ. ಇದು ತಪ್ಪು ಎಂದು ವಕೀಲರು ವಾದಿಸಿದ್ದಾರೆ. ಏನಾಗ್ತಿದೆ ಎಂಬುದು ತಿಳಿಯುತ್ತಿಲ್ಲ. ನಾನು ಒಳ್ಳೆ ಮಾಲಿಕನಾಗಲು ಪ್ರಯತ್ನಿಸಿದ್ದೆ ಎಂದು ಸಾಸ್ಚಾ ಜೊವಾನೋವಿಕ್ ಹೇಳಿದ್ದಾನೆ. ಈ ಬಗ್ಗೆ   ಅಂತಿಮ ತೀರ್ಪು ಬರಬೇಕಿದೆ. 
 

click me!