
ನವದೆಹಲಿ (ಆ.09) ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡುವುದು ಅನಿವಾರ್ಯ. ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಈ ಕನಿಷ್ಠ ಬ್ಯಾಲೆನ್ಸ್ ಬಲು ದುಬಾರಿ. ಇದೀಗ ಐಸಿಐಸಿ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಮೊತ್ತ ಏರಿಕೆ ಮಾಡಲಾಗಿದೆ. ಆಗಸ್ಟ್ 1 ರಿಂದ ಐಸಿಐಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವವರು ಇದೀಗ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಪೆನಾಲ್ಟಿ ಅನ್ವಯವಾಗಲಿದೆ.
ಇಷ್ಟು ದಿನ ಐಸಿಐಸಿ ಬ್ಯಾಂಕ್ ಮಿನಿಮಮ್ ಖಾತೆ ಬ್ಯಾಲೆನ್ಸ್ 10,000 ರೂಪಾಯಿ ಇತ್ತು. ಆದರೆ ಈ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದು ಆಗಸ್ಟ್ 1 ರಿಂದ ಐಸಿಐಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಪ್ರತಿಯೊಬ್ಬರಿಗೂ ಹೊಸ ನಿಯಮ ಅನ್ವಯವಾಗಲಿದೆ.
ಆಗಸ್ಟ್ 1 ರಿಂದ ಐಸಿಐಸಿ ಖಾತೆ ತೆರೆಯುವ ಗ್ರಾಹಕರು ಮಿನಿಮಮ್ ಬ್ಯಾಲೆನ್ಸ್ 50,000 ರೂಪಾಯಿ ಇಡಬೇಕಿದೆ. ಆದರೆ ಈಗಾಗಲೇ ಐಸಿಐಸಿ ಬ್ಯಾಂಕ್ ಖಾತೆ ಹೊಂದಿರುವವರಿಗೂ ಈ ನಿಯಮ ಅನ್ವಯಾಗುವುದಿಲ್ಲ. ಹಳೇ ಗ್ರಾಹಕರು 10,000 ರೂಪಾಯಿ ಕನಿಷ್ಛ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಆಗಸ್ಟ್ 1 ರಿಂದ ಖಾತೆ ತೆರೆಯುವ ಗ್ರಾಹಕರು 50,000 ರೂಪಾಯಿ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಿದೆ.
ಸೆಮಿ ಅರ್ಬನ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಗಸ್ಟ್ 1 ರಿಂದ ಐಸಿಐಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಗ್ರಾಹಕರಿಗೆ ಕೊಂಚ ವಿನಾಯಿತಿ ನೀಡಲಾಗಿದೆ. ಪಟ್ಟಣದಲ್ಲಿನ ಐಸಿಐಸಿ ಗ್ರಾಹಕರಿಗೆ 25,000 ರೂಪಾಯಿ ಹಾಗೂ ಗ್ರಾಮೀಣ ಗ್ರಾಹಕರು 10,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಇನ್ನು ಸೆಮಿ ಅರ್ಬನ್ ಹಾಗೂ ಗ್ರಾಮೀಣ ಭಾಗದ ಹಳೇ ಗ್ರಾಹಕರು ಸದ್ಯ ಇರುವಂತೆ 5,000 ರೂಪಾಯಿ ಬ್ಯಾಂಕ್ ನಿರ್ವಹಣೆ ಮಾಡಬೇಕು.
ಹೊಸ ನಿಯಮದ ಪ್ರಕಾರ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಶೇಕಡಾ 6 ರಷ್ಟು ಅಥವಾ 500 ರೂಪಾಯಿ ಪೆನಾಲ್ಟಿ ಪಾವತಿಸಬೇಕು. ನಿರ್ವಹಣೆ ಮಾಡದೇ ಇದ್ದರೆ ಪ್ರತಿ ತಿಂಗಳು ಶೇಕಡಾ 6ರಷ್ಟು ಅಥವಾ 500 ರೂಪಾಯಿ ಪಾವತಿಸಬೇಕು.
ಇನ್ನು ಉಳಿತಾಯ ಖಾತೆಗೆ ಹಣ ಜಮೆ ಮಾಡಲು ಕೆಲ ನಿರ್ಬಂಧಗಳಿವೆ. ಖಾತೆಗೆ ಜಮೆ ಮಾಡಲು ತಿಂಗಳಲ್ಲಿ ಆರಂಭಿಕ 3 ವಹಿವಾಟು ಮಾತ್ರ ಉಚಿತವಾಗಿರುತ್ತದೆ. ಇನ್ನುಳಿದ ಪ್ರತಿ ಟ್ರಾನ್ಸಾಕ್ಷನ್‌ಗೆ 150 ರೂಪಾಯಿ ಪಾವತಿಸಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.