ಮನೆಯಲ್ಲಿಯೇ ಕುಳಿತು ಆಗಿ ಲಕ್ಷಾಧಿಪತಿ, ಕೋಟ್ಯಧಿಪತಿ; ಕೆಲವರಿಗೆ ಮಾತ್ರ ಗೊತ್ತಿರೋ ವ್ಯವಹಾರದ್ದು 99% ರಷ್ಟಿದೆ ಸಕ್ಸಸ್ ರೇಟ್

By Mahmad RafikFirst Published Sep 30, 2024, 2:58 PM IST
Highlights

ಟೀ ಪುಡಿ ಮಾರಾಟ ಮಾಡುವ ಮೂಲಕ ಮನೆಯಲ್ಲಿಯೇ ಕುಳಿತು ದೊಡ್ಡ ಮೊತ್ತದ ಹಣವನ್ನು ಗಳಿಸಬಹುದು. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ವ್ಯವಹಾರದಲ್ಲಿ ಯಶಸ್ಸಿನ ಪ್ರಮಾಣ ಶೇ.99 ರಷ್ಟಿದೆ.

ಬೆಂಗಳೂರು: ನಮ್ಮ ದೇಶದಲ್ಲಿ ಬಹುತೇಕರು ಜನರು ಟೀ ಕುಡಿಯುವ ಮೂಲಕ ತಮ್ಮ ದಿನವನ್ನು ಆರಂಭಿಸುತ್ತಾರೆ. ಕೆಲವೊಮ್ಮೆ ಟೀ ಕುಡಿಯೋದು ಸ್ವಲ್ಪ ತಡವಾದ್ರೂ ಚಡಪಡಿಸುತ್ತಾರೆ. ಇನ್ನು ಒಂದಿಷ್ಟು ಮಂದಿ ಎರಡು ಗಂಟೆಗೊಮ್ಮೆ ಒಂದು ಸಿಪ್ ಟೀ ಕುಡಿಯಲು ಇಷ್ಟಪಡುತ್ತಾರೆ.  ಟೀಯನ್ನು ಸಾಮಾಜಿಕ ಸಾಮರಸ್ಯದ ಪಾನೀಯ ಎಂದು ಕರೆಯಲಾಗುತ್ತದೆ. ಟೀ ಕುಡಿಯುವ ನೆಪದಲ್ಲಿಯೇ ಜನರು ಒಂದೆಡೆ ಸೇರುತ್ತಿರುತ್ತಾರೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ  ಹೋಟೆಲ್ ಮುಂದೆ ಕುಳಿತುಕೊಳ್ಳುವ ಜನರು ಒಂದು ಕಪ್ ಟೀ ಹಿಡಿದು ಇಡೀ ದೇಶದ ವಿಷಯಗಳ ಬಗ್ಗೆ ದೀರ್ಘವಾದ ಚರ್ಚೆ ನಡೆಸುತ್ತಾರೆ. ಇದೇ ಟೀ ಪುಡಿಯ ಮಾರಾಟ ಮಾಡಿ ಜನರು ವ್ಯವಹಾರದಲ್ಲಿ ಸಕ್ಸಸ್ ಆಗುತ್ತಿದ್ದಾರೆ. ಟೀ ಪುಡಿ ವ್ಯಾಪಾರದ ಸಕ್ಸಸ್ ರೇಟ್ ಶೇ.99ರಷ್ಟಿದೆ. ಹಾಗಾಗಿ ಮಾರುಕಟ್ಟೆಯ ಅಪಾಯ ಕಡಿಮೆ ಇರುತ್ತದೆ.

ಮನೆಯಲ್ಲಿಯೇ ಕುಳಿತು ಟೀ ಪುಡಿ ಮಾರಾಟ ಮಾಡಿ ದೊಡ್ಡ ಮೊತ್ತದ ಹಣವನ್ನು ಸಂಪಾದಿಸಬಹುದು. ಈ ವ್ಯವಹಾರದ ವಿಶೇಷತೆ ಏನೆಂದ್ರೆ ಇದನ್ನು ಆರಂಭಿಸಲು ಹೆಚ್ಚಿನ ಬಂಡವಾಳ ಸಹ ಬೇಕಾಗುವುದಿಲ್ಲ. 5000 ರೂಪಾಯಿಯಿಂದಲೂ ಟೀ ಪುಡಿ ಮಾರಾಟ ಮಾಡುವ ಬ್ಯುಸಿನೆಸ್ ಆರಂಭಿಸಬಹುದು.

Latest Videos

ಟೀ ಪುಡಿ ವ್ಯವಹಾರವನ್ನು ಹಲವು ರೂಪದಲ್ಲಿ ಆರಂಭಿಸಬಹುದು. ಮಾರುಕಟ್ಟೆಯಲ್ಲಿ ಖುಲ್ಲಾ ಟೀ ಪುಡಿಯನ್ನು ಮಾರಾಟ ಮಾಡಬಹುದು. ಇಲ್ಲವಾದರೆ  ದೊಡ್ಡ ಟೀ ಪುಡಿ ಕಂಪನಿಗಳ ಫ್ರಾಂಚೈಸಿಯನ್ನು ಪಡೆದುಕೊಳ್ಳುವ ಮೂಲಕ ಸ್ವಂತ ವ್ಯವಹಾರ ಆರಂಭಿಸಬಹುದು. ಫ್ರಾಂಚೈಸಿಯೂ ಕಡಿಮೆ ಬೆಲೆಗೆ ಸಿಗುತ್ತದೆ. ಫ್ರಾಂಚೈಸಿ ಪಡೆದು ಟೀ ಪುಡಿ ಮಾರಾಟ ಮಾಡಿದ್ರೆ ನಿಮ್ಮ ಸೇಲ್ ಮೇಲೆ ಒಳ್ಳೆಯ ಕಮಿಷನ್ ಪಡೆಯಬಹುದು. 

ಕೊರೊನಾ ನಂತ್ರ ₹1 ಸಂಬಳ ಪಡೆಯದ ಮುಕೇಶ್ ಅಂಬಾನಿ ಒಂದು ದಿನದ ಆದಾಯ ಎಷ್ಟು?

ನೀವೇ ಟೀ ಪುಡಿಯನ್ನು ಮನೆಯಿಂದ ಮನೆಗೆ ಮಾರಾಟ ಮಾಡಬಹುದು. ಒಂದು ಬಾರಿ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ರೆ ನಿರಂತರ ಮಾರಾಟವಾಗುತ್ತದೆ. ಇದಕ್ಕಾಗಿ ಒಳ್ಳೆಯ ಪ್ಯಾಕೇಜಿಂಗ್ ಕಲೆ ನಿಮಗೆ ಗೊತ್ತಿರಬೇಕು. 

ಅಸ್ಸಾಂ ಮತ್ತು ಡಾರ್ಜಿಲಿಂಗ್ ನಲ್ಲಿ ಒಳ್ಳೆಯ ಗುಣಮಟ್ಟದ ಟೀ ಪುಡಿ  ಕೆಜಿಗೆ 140 ರಿಂದ 180 ರೂಪಾಯಿವರೆಗೆ ಸಿಗುತ್ತದೆ. ನೇರವಾಗಿ ಉತ್ಪಾದಕರಿಂದ ಟೀ ಪುಡಿ ಖರೀದಿ ಮಾಡಿದ್ರೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಇದೇ ಟೀ ಪುಡಿಯನ್ನು ಚೆನ್ನಾಗಿ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಕೆಜಿಗೆ 200 ರಿಂದ 300 ರೂ.ವರೆಗೆ ಮಾರಾಟ ಮಾಡಬಹುದು. ಕೇವಲ 5,000 ದಿಂದ 20,000 ರೂ. ಹಣವಿದ್ರೆ ಟೀ ಪುಡಿ ಬ್ಯುಸಿನೆಸ್ ಆರಂಭಿಸಬಹುದು. ಹಂತವಾಗಿ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಾ ನಿಮ್ಮದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುವ ಅವಕಾಶಗಳಿರುತ್ತವೆ.

21 ವರ್ಷಕ್ಕೆ 71 ಲಕ್ಷ ರೂಪಾಯಿ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಹೇಗೆ?

click me!