Swiggyಯಿಂದ ಮಹಿಳೆಯರಿಗೆ ತಿಂಗಳಲ್ಲಿ 2 ದಿನ ಮುಟ್ಟಿನ ರಜೆ, ಹಲವು ಸೌಲಭ್ಯ!

By Suvarna News  |  First Published Oct 23, 2021, 3:05 PM IST

-ಮಹಿಳಾ ಡೆಲಿವರಿ ಸಿಬ್ಬಂದಿಗಳಿಗೆ ತಿಂಗಳಿನಲ್ಲಿ 2 ದಿನ ಮುಟ್ಟಿನ ರಜೆ
- ರಜೆಯ ದಿನ ಕೂಡ ಕನಿಷ್ಟ ವೇತನದ ಭರವಸೆ
-ಸ್ವಿಗ್ಗಿಯ ಈ ನೀತಿಗೆ ನೆಟ್ಟಿಗರಿಂದ ಭಾರೀ ಪ್ರಶಂಸೆ 
 


ಬೆಂಗಳೂರು(ಅ. 23) :  ಆನ್‌ಲೈನ್ ಫುಡ್‌ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ (Swiggy) ತನ್ನ ಮಹಿಳಾ ಡೆಲಿವರಿ ಸಿಬ್ಬಂದಿಗಳಿಗೆ (Women delivery partner) ಋತುಸ್ರಾವ ಸಮಯದಲ್ಲಿ 2 ದಿನ ರಜೆ ನೀಡುವುದಾಗಿ ತಿಳಿಸಿದೆ. 'ಋತುಸ್ರಾವದ ಸಮಯದಲ್ಲಿ (Periods) ಮನೆಯಿಂದ ಹೊರಗಿದ್ದು ರಸ್ತೆಯ ಮೇಲೆ ವಾಹನ ಚಲಾಯಿಸುವುದು ಸುಲಭವಲ್ಲ, ಹಾಗಾಗಿ ಮಹಿಳೆಯರು ಇದೇ ಕಾರಣದಿಂದ ಡೆಲಿವರಿ ಕೆಲಸವನ್ನು ಪರಿಗಣಿಸುವುದಿಲ್ಲ ಎಂದೆನಿಸುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸಹಾಯವಾಗುವಂತೆ, ಯಾವುದೇ ಪ್ರಶ್ನೆಗಳನ್ನು ಕೇಳದೆ ತಿಂಗಳಿನಲ್ಲಿ ಎರಡು ದಿನ ರಜೆ ನೀಡುವ ನೀತಿಯನ್ನು (Policy) ಜಾರಿಗೆ ತಂದಿದ್ದೇವೆ' ಎಂದು ಸ್ವಿಗ್ಗಿಯ ಸೇವಾ ವಿಭಾಗದ ಉಪಾಧ್ಯಕ್ಷರಾದ ಮಿಹಿರ್ ಶಾ (Mihir Shah) ಹೇಳಿದ್ದಾರೆ.

ಬಂಜೆತನಕ್ಕೆ ಕಾರಣ ವಯಸ್ಸೊಂದೇಯಲ್ಲ, ಇವೂ ಆಗಬಹುದು ಕಾರಣ!

Tap to resize

Latest Videos

undefined

ವೇತನ ಸಹಿತ ಎರಡು ದಿನ ರಜೆ!

ಸ್ವಿಗ್ಗಿಯ ಮಹಿಳಾ ಡೆಲಿವರಿ ಸಿಬ್ಬಂದಿಗಳು ತಿಂಗಳಿನಲ್ಲಿ ವೇತನ ಸಹಿತ ಎರಡು ದಿನ ರಜೆಯನ್ನು ಪಡೆಯಬಹುದು. ಈ ರಜೆಯ ದಿನಗಳಲ್ಲಿ ಕನಿಷ್ಟ ವೇತನ ನೀಡುವ ಭರವಸೆಯನ್ನು ಸ್ವಿಗ್ಗಿ ನೀಡಿದೆ. 2016 ರಲ್ಲಿ ಮೊದಲ ಬಾರಿಗೆ ಸ್ವಿಗ್ಗಿ ಮಹಿಳಾ ಡೆಲಿವರಿ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಇದಾದ ನಂತರ ನಿರಂತರವಾಗಿ ಮಹಿಳಾ ಡೆಲಿವರಿ ಸಿಬ್ಬಂದಿಗಳ ಸಂಖ್ಯೆಯನ್ನು ಸ್ವಿಗ್ಗಿ ಹೆಚ್ಚಿಸಿದೆ.  ಅಲ್ಲದೇ ಮಹಿಳಾ ಉದ್ಯೋಗಿಗಳಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಾಣ  ಮಾಡಿರುವುದಾಗಿ ಸ್ವಿಗ್ಗಿ ತಿಳಿಸಿದೆ. ಸ್ವಿಗ್ಗಿ ಈ ಯೋಜನೆ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿದೆ. ಮಹಿಳೆಯರಿಗಾಗಿಯೇ ವಿಶೇಷ ನೀತಿ ಜಾರಿಗೊಳಿಸಿರಯವ ಸ್ವಿಗ್ಗಿ ಸಂಸ್ಥೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. 

 

24% of the women delivery partners at Swiggy are earning an income for the first time in their lives.

How important is that - The Financial Freedom!

Also, has rolled out a 2-day paid Period time-off for its women delivery partners.

Read - https://t.co/RqxOmwfeqv pic.twitter.com/KunZepCxH5

— Krishna Mishra 🎲 (@kas8_m)

 

ಮಹಿಳಾ ಡೆಲಿವರಿ ಸಿಬ್ಬಂದಿಗಳಿಗೆ ವಿಶೇಷ ಸೌಲಭ್ಯಗಳು

ಎರಡು ದಿನ ಮುಟ್ಟಿನ ರಜೆ ಜತೆಗೆ ಮಹಿಳೆಯರಿಗ ಇನ್ನು ಹಲವಾರು ಸೌಲಭ್ಯಗಳನ್ನು ಸ್ವಿಗ್ಗಿ ನೀಡಲಿದೆ. ಫುಡ್ ಡೆಲಿವರಿ (Food Delivery) ಮಾಡಲು ವಾಹನ ಇಲ್ಲದಿರುವ ಮಹಿಳೆಯರಿಗೆ‌ ಇಲೆಕ್ಟ್ರಿಕ್‌ ವಾಹನ (Electric vehicles) ಮತು ಸೈಕಲ್‌ಗಳನ್ನು ಬಾಡಿಗೆಗೆ ನೀಡುವ ನಿಟ್ಟಿನಲ್ಲಿ ಇಲೆಕ್ಟ್ರಿಕ್‌ ವಾಹನ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ. ಮಹಿಳೆಯರಿಗಾಗಿಯೇ ವಿಶೇಷ ರೆಸ್ಟ್‌ ರೂಮ್‌ಗಳನ್ನು ನಿರ್ಮಾಣ ಮಾಡಿರುವ ಸ್ವಿಗ್ಗಿ ಸ್ವಚ್ಛತೆಯನ್ನು ಕಾಪಡುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಲಿದೆ. 

ಹೆಣ್ಣುಮಗು ಜನಿಸಿದ ಸಂಭ್ರಮದಲ್ಲಿ ಉಚಿತ Petrol ಹಂಚಿದ ಬಂಕ್‌ ಮಾಲೀಕ!

ತುರ್ತು ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು (Medical Emergency) ಪಡೆಯಲು ಸ್ವಿಗ್ಗಿ ಆ್ಯಪ್‌ನಲ್ಲಿಯೇ ಎಸ್‌ಓಎಸ್  ಬಟನ್‌ (SOS Button) ನೀಡಲಾಗಿದ್ದು, ಇದು ಸ್ಥಳಿಯ ಪೋಲಿಸ್‌ (Police) ಮತ್ತು ಸ್ವಿಗ್ಗಿ ಸಹಾಯವಾಣಿಯನ್ನು ನೇರವಾಗಿ ಸಂಪರ್ಕಿಸುವ ಕಾರ್ಯ ಮಾಡಲಿದೆ.  ತಮ್ಮ ಡೆಲಿವರಿ ಸಿಬ್ಬಂದಿಗಳಿಗೆ ಶೌಚಾಲಯದ ವ್ಯವಸ್ಥೆಗಾಗಿ ಸ್ವಿಗ್ಗಿ, ಶೆಲ್‌ ಪೆಟ್ರೋಲ್‌ ಬಂಕ್‌ (Shell petrol bunk) ಜತೆ ಒಪ್ಪಂದ ಕೂಡ ಮಾಡಿಕೊಂಡಿದೆ. ಹಾಗಾಗಿ ದೇಶಾದ್ಯಂತ  ಶೆಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿರುವ ಶೌಚಾಲಯ ಮತ್ತು ರೆಸ್ಟ್‌ ರೂಮ್‌ಗಳನ್ನು ಡೆಲಿವರಿ ಸಿಬ್ಬಂದಿ ಬಳಸಬಹುದಾಗಿದೆ.

28 ವರ್ಷಗಳ ಹಿಂದೆಯೇ ಮುಟ್ಟಿನ ರಜೆ ಜಾರಿಗೊಳಿಸಿದ್ದ ಬಿಹಾರ ಸರ್ಕಾರ!

ಝೊಮ್ಯಾಟೋ (Zomato) ಕೂಡ ತನ್ನ  ಮಹಿಳಾ ಸಿಬ್ಬಂದಿಗಳಿಗೆ  ವರ್ಷದಲ್ಲಿ ಹತ್ತು ದಿನ ಮುಟ್ಟಿನ ರಜೆ ನೀಡುವುದಾಗಿ ಆಗಸ್ಟ 2020 ರಲ್ಲಿ ಘೋಷಿಸಿತ್ತು. ಇಷ್ಟೇ ಅಲ್ಲದೇ  ಝೊಮ್ಯಾಟೋ ಇಂತಹ ರಜೆ ನೀಡುವುದಕ್ಕೂ ಕೆಲ ವರ್ಷಗಳ ಹಿಂದೆ ಮೊದಲೇ, ವೆಬ್‌ಸೈಟ್ ಕಲ್ಚರ್ ಮಷೀನ್, ಗೋಝೂಪ್, ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಫರ್ಮ್ ಫ್ಲೈಮೈಬಿಜ್ ಕೂಡಾ ತಮ್ಮ ಮಹಿಖಾ ಉದ್ಯೋಗಿಗಳಿಗೆ ಇಂತಹುದ್ದೊಂದು ರಜೆ ಆರಂಭಿಸಿತ್ತು. 28 ವರ್ಷಗಳ ಹಿಂದೆಯೇ ಬಿಹಾರ ಸರ್ಕಾರ ಮುಟ್ಟಿನ ರಜೆ ಜಾರಿಗೊಳಿಸಿತ್ತು. 1992ರ ಜನವರಿ 2 ರಂದು ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಜೈವಿಕ ಕಾರಣಗಳಿಂದಾಗಿ ನಿಯಮಿತ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಎರಡು ದಿನ ಸಾಮಾನ್ಯ ರಜೆ ನೀಡಬೇಕೆಂದು ತಿಳಿಸಲಾಗಿತ್ತು. . 

Ola ಕಂಪನಿಯಲ್ಲಿ 10,000 ಉದ್ಯೋಗಾವಕಾಶಗಳು !

click me!