ದಿನಕ್ಕೆ 150 ರೂ ಗಳಿಸ್ತಿದ್ದ ವ್ಯಕ್ತಿ ಯೂಟ್ಯೂಬರ್ ಆದ ಕಥೆ… ಈಗಿನ ಗಳಿಕೆ ಕೇಳಿದ್ರೆ ದಂಗಾಗ್ತೀರಿ!

By Suvarna News  |  First Published Apr 8, 2024, 3:35 PM IST

ಯೂಟ್ಯೂಬ್, ಸಾಮಾಜಿಕ ಜಾಲತಾಣ ಟೈಂ ಹಾಳು ಮಾಡುತ್ತೆ ನಿಜ. ಅದು ನೋಡೋರ ಸಮಯ ಹಾಳು ಮಾಡುತ್ತೇ ವಿನಃ ಅದ್ರಲ್ಲಿ ಸಂಪಾದನೆ ಮಾಡುವವರದ್ದಲ್ಲ. ಬೇರೆ ಕೆಲಸದಲ್ಲಿ ಸಿಗದ ಸಂಬಳ ಇದ್ರಲ್ಲಿ ಸಿಗ್ತಿದೆ ಅನ್ನೋದಕ್ಕೆ ಇವರು ಉತ್ತಮ ನಿದರ್ಶನ.
 


ಒಂದಾರು ತಿಂಗಳಲ್ಲೇ ಶ್ರೀಮಂತರಾಗ್ಬೇಕೆಂದ್ರೆ ಅದಕ್ಕೆ ಸುಲಭ ಮಾರ್ಗ ಸಾಮಾಜಿಕ ಜಾಲತಾಣ. ಹಾಗಂತ ಇದ್ರಲ್ಲಿರುವ ಎಲ್ಲರೂ ಅಷ್ಟೇ ಬೇಗ ಶ್ರೀಮಂತರಾಗ್ತಾರೆ ಎಂದಲ್ಲ. ನೀವು ಎಷ್ಟು ಒಳ್ಳೇಯ ಕ್ರಿಯೇಟಿವ್ ಕಂಟೆಂಟ್ ಹಾಕ್ತೀರಿ ಎನ್ನುವುದು ಇಲ್ಲಿ ಮುಖ್ಯ. ಅನೇಕರು ಒಳ್ಳೊಳ್ಳೆ ವಿಷ್ಯಗಳನ್ನು ಯುಟ್ಯೂಬ್, ಇನ್ಸ್ಟಾಗ್ರಾಮ್ ನಲ್ಲಿ ಹಾಕಿ ಲಕ್ಷಾಂತರ ಮಂದಿ ಫಾಲೋವರ್ಸ್ ಪಡೆಯುತ್ತಾರೆ. ಮಿಲಿಯನ್ ಲೆಕ್ಕದಲ್ಲಿ ಲೈಕ್ಸ್ ಪಡೆಯುವ ಜನರಿಗೆ ಸಾಮಾಜಿಕ ಜಾಲತಾಣದಿಂದ ಹಣ ಬರುತ್ತೆ. ಅನೇಕರು ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಲು ಶುರು ಮಾಡಿದ್ದಾರೆ. ಅದ್ರಲ್ಲಿ ಭುವನ್ ಬಮ್ ಕೂಡ ಒಬ್ಬರು. ಭಾರತದ ಪ್ರಸಿದ್ಧ ಯೂಟ್ಯೂಬರ್ ಭುವನ್ ಬಮ್ ಕೋಟ್ಯಾಧಿಪತಿಯಾಗಲು ಯೂಟ್ಯೂಬ್ ಕಾರಣ ಎನ್ನುವುದು ನೂರಕ್ಕೆ ನೂರು ಸತ್ಯ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಭುವನ್ ಬಮ್ ಗುರಿ ಯೂಟ್ಯೂಬರ್ ಆಗೋದಾಗಿರಲಿಲ್ಲ. ಸಿಂಗರ್ ಆಗ್ಬೇಕೆಂಬ ಕನಸು ಕಂಡಿದ್ದ ಭುವನ್ ಬಮ್ ಕೆಲ ಪರಿಸ್ಥಿತಿಯಿಂದಾಗಿ ಯೂಟ್ಯೂಬ್ ನಲ್ಲಿ ವಿಡಿಯೋ ಹಾಕಲು ಶುರು ಮಾಡಿದ್ದರು. ಅದೇ ಅವರ ಕೈ ಹಿಡಿತು. ಈಗ ಕೋಟ್ಯಾಧಿಪತಿ, ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಭುವನ್ ಬಮ್ ಪಾತ್ರರಾಗಿದ್ದಾರೆ. ನಾವಿಂದು ಭುವನ್ ಬಮ್ ಆರಂಭಿಕ ದಿನದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಭುವನ್ ಬಮ್ (Bhuvan Bam) ಯಾರು? : ಸಾಮಾಜಿಕ ಜಾಲತಾಣ ಬಳಸುವ, ಯೂಟ್ಯೂಬ್ (YouTube) ನಲ್ಲಿ ಹಾಸ್ಯದ ವಿಡಿಯೋ ನೋಡುವ ಬಹುತೇಕ ಎಲ್ಲರಿಗೂ ಭುವನ್ ಬಮ್ ಬಗ್ಗೆ ಗೊತ್ತು. ಭುವನ್ ಬಮ್ ಗುಜರಾತಿನ ವಡೋದರಾದಲ್ಲಿ ಜನಿಸಿದವರು. ಮಧ್ಯಮ ವರ್ಗದ ಭುವನ್, ಹಾಡುಗಾರರಾಗುವ ಕನಸು ಹೊತ್ತು ದೆಹಲಿಗೆ ಬಂದಿದ್ದರು. ಸಣ್ಣಪುಟ್ಟ ರೆಸ್ಟೋರೆಂಟ್ (Restaurant) ನಲ್ಲಿ ಹಾಡು ಹಾಡ್ತಿದ್ದ ಭುವನ್ ಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಸಿಗ್ತಾಯಿತ್ತು. ಅಂದ್ರೆ ದಿನಕ್ಕೆ ಭುವನ್ ಸುಮಾರು 150 ರೂಪಾಯಿ ಆಸುಪಾಸು ಗಳಿಸುತ್ತಿದ್ದರು. ಅನೇಕ ದಿನ ಇದೇ ಕೆಲಸದಲ್ಲಿ ಒದ್ದಾಡಿದ ಭುವನ್ ನಂತ್ರ ಈ ಕೆಲಸ ಬಿಡುವ ನಿರ್ಧಾರಕ್ಕೆ ಬಂದಿದ್ದರು. 

Tap to resize

Latest Videos

ದೃಷ್ಟಿ ಇಲ್ದಿದ್ರೇನಂತೆ, ದೂರದೃಷ್ಟಿಯಿಂದ 50 ಕೋಟಿ ರೂ. ಕಂಪನಿ ಕಟ್ಟಿದ ಬೊಳ್ಳ

ನಂತ್ರ ಭುವನ್ ಮನಸ್ಸು ಯೂಟ್ಯೂಬ್ ಕಡೆ ತಿರುಗಿತ್ತು. ವಿಡಂಬನೆ ವಿಡಿಯೋ ಮಾಡಿದ ಭುವನ್ ಎಲ್ಲರ ಗಮನ ಸೆಳೆದಿದ್ದರು. ಕಾಶ್ಮೀರದ ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಪತ್ರಕರ್ತನೊಬ್ಬ ಕೇಳುವ ಅಸಂಬದ್ಧ ಪ್ರಶ್ನೆಯನ್ನು ಇದು ಹೊಂದಿತ್ತು. ಯೂಟ್ಯೂಬ್ ನಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತ್ರ ಭುವನ್ ಬೇರೆ ಕೆಲಸದ ಬಗ್ಗೆ ಆಲೋಚನೆ ಮಾಡ್ಲಿಲ್ಲ. ಯೂಟ್ಯೂಬ್ ನಲ್ಲಿ ಒಂದಾದ್ಮೇಲೆ ಒಂದರಂತೆ ಹಾಸ್ಯದ ವಿಡಿಯೋ ಹಾಕಲು ಶುರು ಮಾಡಿದ್ದರು. ಅದೇ ಅವರ ಕೈ ಹಿಡಿದಿದೆ.

ದಿವಾಳಿಯಾಗಿರೋ ಅನಿಲ್ ಅಂಬಾನಿ ಮಕ್ಕಳು ಉದ್ಯಮದಲ್ಲಿ ಸಕ್ಸಸ್ ಆಗಲು ಏನ್ ಮಾಡ್ತಿದ್ದಾರೆ?

ಬೀಬಿ ಕಿ ವೈನ್ಸ್ ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಭುವನ್. ಮನೆಯ ಕುಟುಂಬಸ್ಥರ ಪಾತ್ರದಲ್ಲಿ ಅವರೇ ನಟಿಸುತ್ತಾರೆ. ಅವರ ವಿಡಿಯೋಗಳು ರಾತ್ರೋರಾತ್ರಿ ಅವರನ್ನು ಸ್ಟಾರ್ ಮಾಡಿವೆ. ಅಲ್ಲದೆ ಅವರ ಗಳಿಕೆ ಕೋಟಿಮಟ್ಟಕ್ಕೇರಲು ಕಾರಣವಾಗಿವೆ. ಬಿಬಿ ಕಿ ವೈನ್ಸ್ ಯೂಟ್ಯೂಬ್ ಚಾನೆಲ್ 26 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. 2018 ರಲ್ಲಿ 10 ಮಿಲಿಯನ್ ಚಂದಾದಾರರನ್ನು ಹೊಂದಿದ್ದ ಭಾರತದ ಮೊದಲ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಭುವನ್ ಬಮ್ ಪಾತ್ರರಾಗಿದ್ದರು. ಒಂದು ಕಾಲದಲ್ಲಿ ಐದು ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಭುವನ್ ಈಗ ಸುಮಾರು 122 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ದುಬಾರಿ ಕಾರಿನಲ್ಲಿ ಅವರು ಓಡಾಡುತ್ತಾರೆ. ಯೂಟ್ಯೂಬರ್ ಆಗಿ ಮಾತ್ರವಲ್ಲದೆ ಅನೇಕ ಬ್ರ್ಯಾಂಡ್  ಪ್ರಚಾರದಲ್ಲಿ ಭುವನ್ ಹಣಗಳಿಸುತ್ತಿದ್ದಾರೆ. 

click me!