Success Story : ಪಾರ್ಲೆ ಜಿಗೆ ಟಕ್ಕರ್ ನೀಡಿದ್ದ ಮಾರ್ವಾಡಿ ಬ್ಯುಸಿನೆಸ್ ಮ್ಯಾನ್!

By Suvarna News  |  First Published Mar 1, 2024, 3:57 PM IST

ಮಾರುಕಟ್ಟೆಯಲ್ಲಿ ಏಕಾಂಗಿಯಾಗಿ ಮೆರೆಯುತ್ತಿರುವ ಕಂಪನಿಗೆ ಟಕ್ಕರ್ ನೀಡೋದು ಸುಲಭಲ್ಲ. ನಾನಾ ಸ್ಪರ್ಧೆ ಎದುರಾಗುತ್ತದೆ. ಹೊಸ ಹೊಸ ಟ್ರಿಕ್ ಬಳಸಬೇಕಾಗುತ್ತದೆ. ಎಲ್ಲವನ್ನೂ ಮೀರಿ ಗುಣಮಟ್ಟ ಕಾಯ್ದುಕೊಂಡಾಗ ಜಯ ನಿಮ್ಮದೆ. ಇದಕ್ಕೆ ಈ ವ್ಯಾಪಾರಿ ಉತ್ತಮ ನಿದರ್ಶನ.  
 


ಅದೊಂದು ಕಾಲ ಇತ್ತು… ಅದನ್ನು ಪಾರ್ಲೆ ಜಿ ಕಾಲ ಎಂದೇ ಕರೆಯಬಹುದು. ಮನೆ, ಮನದಲ್ಲಿ, ಇಡೀ ಮಾರುಕಟ್ಟೆಯಲ್ಲಿ ಪಾರ್ಲೆ ಜಿ ಆಳ್ವಿಕೆ ಇದ್ದ ಸಮಯ. ಆ ಸಂದರ್ಭದಲ್ಲಿ ಬಿಸ್ಕತ್ ಮಾರುಕಟ್ಟೆಗೆ ಪ್ರವೇಶ ಮಾಡಿ, ಜನರ ಮನಸ್ಸು ಬದಲಿಸಿ ಪಾರ್ಲೆ ಜಿ ಜಾಗವನ್ನು ತುಂಬೋದು ಸುಲಭವಾಗಿರಲಿಲ್ಲ. ಹಾಗಂತ ಬಲ್ಲಭ್ ಪ್ರಸಾದ್ ಅಗರ್ವಾಲ್ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಕುಟುಂಬ ವ್ಯವಹಾರ ಬಿಟ್ಟು ಹೊಸ ದಾರಿ ಹಿಡಿದ ಬಲ್ಲಭ್ ಪ್ರಸಾದ್ ಅಗರ್ವಾಲ್ ಸಾಧಿಸಿ ತೋರಿಸಿದ್ರು. ಬಿಸ್ಕತ್ ಅಂದ್ರೆ ಪಾರ್ಲೆ ಜಿ ಎನ್ನುತ್ತಿದ್ದವರ ಬಾಯಲ್ಲಿ ಬೇರೆ ಹೆಸರು ಕೇಳುವಂತೆ ಮಾಡಿದ್ರು. ಉತ್ಪಾದನೆ, ಗುಣಮಟ್ಟದಲ್ಲಿ ಸಮಬಲ ಸಾಧಿಸಿ ಹೊಸ ಹೊಸ ಪ್ರಯೋಗ ಮಾಡಿದ ಬಲ್ಲಭ್ ಪ್ರಸಾದ್ ಅಗರ್ವಾಲ್, ಪಾರ್ಲೆ ಜಿ ಬೆವರಿಳಿಸಿದ್ರು. 

ಬಲ್ಲಭ್ (Ballabh) ಪ್ರಸಾದ್ ಅಗರ್ವಾಲ್ ಮಾರ್ವಾಡಿ (Marwari) ಕುಟುಂಬದವರು. ಅವರ ದೇಹದಲ್ಲಿ ವ್ಯಾಪಾರದ ರಕ್ತ ಹರಿಯುತ್ತಿತ್ತು. ವ್ಯವಹಾರದ ಬಗ್ಗೆ ಹೊಸದಾಗಿ ಕಲಿಯುವ ಅಗತ್ಯತೆ ಇರಲಿಲ್ಲ. ಕುಟುಂಬವು ಕೋಲ್ಕತ್ತಾದಲ್ಲಿ ತೈಲ ವ್ಯಾಪಾರ ಮಾಡುತ್ತಿತ್ತು. ಭಿನ್ನವಾಗಿ ಆಲೋಚನೆ ಹೊಂದಿದ್ದ  ಬಲ್ಲಭ್ ಪ್ರಸಾದ್ ಅಗರ್ವಾಲ್ ಬಿಸ್ಕತ್ (Biskat) ಕ್ಷೇತ್ರಕ್ಕೆ ಕಾಲಿಟ್ಟು ಕುಟುಂಬಸ್ಥರನ್ನು ಅಚ್ಚರಿಗೊಳಿಸಿದ್ದರು. ಅವರು 1967ರಲ್ಲಿ ಮೊದಲ ಬಾರಿ ತೆಂಗಿನ ಎಣ್ಣೆ ಬಳಸಿಕೊಂಡು ಬಿಸ್ಕತ್ ತಯಾರಿಸಿದ್ರು. 

Tap to resize

Latest Videos

ಅಬ್ಬಬ್ಬಾ..ಅಂಬಾನಿ ಸೊಸೆಯಂದಿರಾದ ಶ್ಲೋಕಾ-ರಾಧಿಕಾ ಇಷ್ಟೊಂದು ಓದ್ಕೊಂಡಿದ್ದಾರಾ?

ತಮ್ಮ ವ್ಯವಹಾರವನ್ನು ದೆಹಲಿಗೆ ಸ್ಥಳಾಂತರಿಸಿದ ಇವರು  ಬ್ಯಾಂಕ್ ನಿಂದ 25 ಲಕ್ಷ ರೂಪಾಯಿ ಸಾಲ ಪಡೆದ್ರು. ಶುದ್ಧ ಮತ್ತು ವಿಭಿನ್ನ ರುಚಿಯ ಬಿಸ್ಕತ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಆರಂಭದಲ್ಲಿ ಅವರು ತಮ್ಮ ಬಿಸ್ಕತ್ ಗೆ ಪ್ರಿಯಾ ಎಂದು ಹೆಸರಿಟ್ಟಿದ್ದರು. 1994ರಲ್ಲಿ ಕಂಪನಿಗೆ ಸೂರ್ಯ ಫುಡ್ಸ್ ಎಂದು ಹೆಸರಿಟ್ಟ ಇವರು, ಬಿಸ್ಕತ್ ಗೆ ಪ್ರಿಯಾಗೋಲ್ಡ್ ಎಂದು ನಾಮಕರಣ ಮಾಡಿದ್ರು. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಿಸ್ಕತ್ ಮಾರಾಟ ಮಾಡಲು ಮುಂದಾಗಿದ್ದ ಅಗರ್ವಾಲ್, ಬಿಸ್ಕತ್ ಪ್ಯಾಕ್ ಮೇಲೆ ಅಧಿಕಾರದಿಂದ ಕೇಳಿ ಎಂಬ ಸ್ಲೋಗನ್ ಹಾಕಿದ್ದರು. ಗ್ರಾಹಕರಿಗೆ ಇದು ಇಷ್ಟವಾಗಿತ್ತು. 

ತಮ್ಮ ವ್ಯವಹಾರವನ್ನು ಗ್ರೇಟರ್ ನೋಯ್ಡಾಗೆ ವಿಸ್ತರಿಸಿದ ಅಗರ್ವಾಲ್, ಸಿಎನ್‌ಸಿ ಮತ್ತು ಜಿಗ್-ಜಾಗ್ ಸಾಲ್ಟಿ ಬಿಸ್ಕತ್ತುಗಳನ್ನು ಪರಿಚಯಿಸಿದರು. ಆದ್ರೆ ಅಗರ್ವಾಲ್ ಗೆ ಇದು ತೃಪ್ತಿ ನೀಡಲಿಲ್ಲ. ಎಲ್ಲೂ ಯಡವಟ್ಟಾಗಿ ಎಂಬುದನ್ನು ಅರಿತ ಅವರು, ಅದ್ರ ಬಗ್ಗೆ ಪರಿಶೀಲನೆ ಶುರು ಮಾಡಿದ್ರು. ರುಚಿ, ಗುಣಮಟ್ಟದಲ್ಲಿ ಕೊರತೆ ಇರಲಿಲ್ಲ. ಜಾಹೀರಾತಿನ ಅವಶ್ಯಕತೆ ಇತ್ತು. ಹಾಗಾಗಿ ಬಲ್ಲಭ್ ಪ್ರಸಾದ್ ಅಗರ್ವಾಲ್, ನಟಿ ಪ್ರಿಯಾ ತೆಂಡೂಲ್ಕರ್‌ ಜೊತೆ ಒಪ್ಪಂದ ಮಾಡಿಕೊಂಡು ಜಾಹೀರಾತು ಸಿದ್ಧಪಡಿಸಿದ್ರು. ಇದು ಗ್ರಾಹಕರನ್ನು ತಲುಪಲು ನೆರವಾಯ್ತು. 

2008 ರ ಹೊತ್ತಿಗೆ ಸೂರ್ಯ ಫುಡ್ಸ್ ಮಾರಾಟವು 400 ಕೋಟಿ ರೂಪಾಯಿ ಮಾರುಕಟ್ಟೆ ಹೊಂದಿತ್ತು.  ಇದರಲ್ಲಿ ಶೇ.90ರಷ್ಟು ಆದಾಯ ಪ್ರಿಯಗೋಲ್ಡ್ ಬಿಸ್ಕೆಟ್ ನಿಂದ ಬಂದಿತ್ತು. ಪ್ರಿಯಾಗೋಲ್ಡ್ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ಜನರಿಗೆ ತಲುಪುತ್ತಿದ್ದೇ ವಿನಃ ದಕ್ಷಿಣ ಭಾರತಕ್ಕೆ ಪರಿಚಯ ಆಗಿರಲಿಲ್ಲ. ಅದ್ರ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ  ಅಗರ್ವಾಲ್,  3500 ವಿತರಕರು ಮತ್ತು 125 ಸೂಪರ್ ಸ್ಟಾಕಿಸ್ಟ್‌ಗಳನ್ನು ಮಾಡಿದರು. ಮಾರ್ಕೆಟಿಂಗ್ ಬಜೆಟ್ ಅನ್ನು 15 ಕೋಟಿಗೆ ಹೆಚ್ಚಿಸಿದ್ರು. ಕರಿಷ್ಮಾ ಕಪೂರ್ ಕಂಪನಿಯ ಅಂಬಾಸಿಡರ್ ಆದ್ರು. ಇದೆಲ್ಲವೂ ಅಗರ್ವಾಲ್ ಕಂಪನಿ ಮತ್ತಷ್ಟು ಎತ್ತರಕ್ಕೆ ಏರಲು ನೆರವಾಯ್ತು. 

ಸಂಬಂಧಕ್ಕೂ ಬಂತು ವಿಮೆ! ಸಂಗಾತಿ ಮಧ್ಯೆ ಅನ್ಯೋನ್ಯತೆ ಜೊತೆ ಆರ್ಥಿಕ ಭದ್ರತೆ ನೀಡುತ್ತೆ!

ಸೂರ್ಯ ಫುಡ್ಸ್ ಸ್ನಾಕರ್ ಚೋಕೋ ವೇಫರ್ಸ್  ಶುರು ಮಾಡಿದೆ. ಚೋಕೊ ಚೆಕರ್ಸ್, ಜೀರಾ ಬಿಸ್ಕತ್ತು ಮತ್ತು ಮ್ಯಾಂಗೋ ಕ್ಯಾಂಡಿ ಅವರ ಕಂಪನಿಯಿಂದ ಉತ್ಪಾದನೆ ಆಗ್ತಿದೆ. 2023 ರಲ್ಲಿ ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ, ಸೂರ್ಯ ಫುಡ್ಸ್ 3000 ಕೋಟಿ ರೂಪಾಯಿಗಳ ಮಾರಾಟ ಹೊಂದಿದೆ. ಬಲ್ಲಭ ಪ್ರಸಾದ್ ಅಗರ್ವಾಲ್ ಈಗ ನಮ್ಮೊಂದಿಗಿಲ್ಲ. 72 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರು ನೀಡಿದ ರುಚಿ ಹಾಗೂ ಸಾಧನೆ ನಮ್ಮ ಜೊತೆಗಿದೆ. 

click me!