ಮಗುವಾದ್ಮೇಲೆ ಕೆಲಸ ಬಿಟ್ಟಾಕೆ ಈಗ ಲಕ್ಷಾಂತರ ರೂ. ಸಂಪಾದಿಸೋ ಉದ್ಯಮಿ!

By Suvarna NewsFirst Published Mar 28, 2024, 3:24 PM IST
Highlights

ಮಕ್ಕಳಿರುವಾಗ ಕೆಲಸಕ್ಕೆ ಹೋಗೋದು ಕಷ್ಟ. ಬ್ಯುಸಿನೆಸ್ ಇನ್ನೂ ಕಷ್ಟ ಎನ್ನುವವರಿದ್ದಾರೆ. ಕಠಿಣ ಅಂತ ಕುಳಿತ್ರೆ ಯಾವುದೂ ಸಾಧ್ಯವಾಗೋದಿಲ್ಲ. ಏನಾದ್ರೂ ಸಾಧಿಸಬೇಕು ಎನ್ನುವ ಜನರು ಎಲ್ಲವನ್ನು ಮೆಟ್ಟಿ ನಿಲ್ಲುತ್ತಾರೆ ಎನ್ನುವುದಕ್ಕೆ ಈ ಮಹಿಳೆ ಸಾಕ್ಷ್ಯ.
 

ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕೆಂದುಕೊಳ್ಳುವ ಜೊತೆಗೆ ಅದನ್ನು ಯಶಸ್ವಿಗೊಳಿಸಲು ನಿರಂತರ ಪ್ರಯತ್ನ ಮಾಡುವ ಜನರು ಅನೇಕರಿಗೆ ಸ್ಫೂರ್ತಿಯಾಗ್ತಾರೆ. ಉತ್ತಮ ಶಿಕ್ಷಣ ಪಡೆದ ಅದೆಷ್ಟೋ ಮಹಿಳೆಯರು ಮದುವೆ, ಮಕ್ಕಳಾದ್ಮೇಲೆ ತಮ್ಮ ವೃತ್ತಿ ಬಿಟ್ಟು ಮನೆಯಲ್ಲಿರ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಮನೆಯಲ್ಲಿ ಹೆಚ್ಚಿನ ಕೆಲಸವಿರೋದಿಲ್ಲ. ಖಾಲಿ ಸಮಯದಲ್ಲಿ ಏನು ಮಾಡ್ಬೇಕು ಎಂಬುದು ಮಹಿಳೆಯರಿಗೆ ತಿಳಿಯೋದಿಲ್ಲ. ಕೆಲ ಮಹಿಳೆಯರು ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಜೀವನದತ್ತ ಸಾಗಿದ್ರೆ ಮತ್ತೆ ಕೆಲವರು ಸಮಯ ವ್ಯರ್ಥ ಮಾಡ್ತಾ ತಮ್ಮ ಜೀವನದಲ್ಲಿ ಶೂನ್ಯ ಸಾಧನೆ ಮಾಡ್ತಾರೆ. ಪತಿ ಒಳ್ಳೆಯ ಕೆಲಸದಲ್ಲಿದ್ರೂ ಪತ್ನಿ ದುಡಿಯಬಾರದು ಎನ್ನುವ ನಿಯಮವಿಲ್ಲ. ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸ ನಿಮಗೆ ಸಿಗದೆ ಹೋದ್ರೂ ನೀವು ಒಳ್ಳೆ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು. ನಿತ್ಯ ಸಿಗುವ ಕಡಿಮೆ ಅವಧಿಯನ್ನೇ ಸದುಪಯೋಗಪಡಿಸಿಕೊಂಡು ನೀವು ಹೆಚ್ಚೆಚ್ಚು ಗಳಿಸಬಹುದು. ನಿಮ್ಮ ವಿದ್ಯೆಗೆ ಸಂಬಂಧಿಸಿದ ಉದ್ಯೋಗ, ವ್ಯವಹಾರ ಮಾಡ್ಬೇಕು ಅಂದೇನಿಲ್ಲ. ನೀವು ಬೇರೆ ಕ್ಷೇತ್ರವನ್ನು ಆಯ್ದುಕೊಂಡು ಅದ್ರಲ್ಲಿ ಗುರಿ ತಲುಪಬಹುದು. ಇದಕ್ಕೆ ಎಂಬಿಎ ಪೂರ್ಣಗೊಳಿಸಿರುವ ಈ ಮಹಿಳೆ ಉತ್ತಮ ನಿದರ್ಶನ.

ಇವರ ಹೆಸರು ಅನುರಾಧಾ ತ್ಯಾಗಿ (Anuradha Tyagi). ಮಧ್ಯಪ್ರದೇಶದ ಮಹಿಳೆ. ಎಂಬಿಎ (MBA) ಮುಗಿಸಿದ ಅನುರಾಧಾ ತ್ಯಾಗಿ ಮದುವೆಗೆ ಮುನ್ನ ಕೆಲ ಕಂಪನಿ (Company) ಯಲ್ಲಿ ಕೆಲಸ ಮಾಡಿದ್ದಾರೆ. ಕಾರ್ಪೋರೇಟ್ (Corporate) ಕಂಪನಿಯಲ್ಲಿ ಬ್ರಾಂಡ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಮನೆಗೊಂದು ಮಗು ಬಂದ ಕಾರಣ ಅನುರಾಧಾ ತ್ಯಾಗಿಗೆ ಕೆಲಸ ಮುಂದುವರೆಸಲು ಸಾಧ್ಯವಾಗ್ಲಿಲ್ಲ. ಹಾಗಂತ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಮನಸ್ಸಾಗ್ಲಿಲ್ಲ. ತನ್ನದೇ ಸ್ವಂತ ಉದ್ಯೋಗ ಮಾಡುವ ಆಲೋಚನೆ ಮಾಡಿದ ಅವರು ಆಹಾರ ಕ್ಷೇತ್ರಕ್ಕೆ ಕಾಲಿಟ್ಟರು.

ಎಂಟು ರೂಗೆ ಕಾಂಡೋಮ್ ಮಾರಿ 8750 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಸಹೋದರರು

ಅನುರಾಧಾ 2022 ರಲ್ಲಿ ದೆಹಲಿಯಲ್ಲಿ ಮಸೋವಾ ಆರ್ಗ್ಯಾನಿಕ್ ಫುಡ್ ಕಂಪನಿಯನ್ನು (Organic Food Company) ಶುರು ಮಾಡಿದ್ರು. ಅನುರಾಧಾ ತಮ್ಮ ಕಂಪನಿಯಲ್ಲಿ ನಮ್ಕಿನ್ ತಯಾರಿಸುತ್ತಾರೆ. ಮಧ್ಯಪ್ರದೇಶದ ರತ್ಲಂನವರು ಅನುರಾಧ. ಅಲ್ಲಿನ ನಮ್ಕಿನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ರಾಜ – ಮಹಾರಾಜರು ಈ ನಮ್ಕಿನ್ ಸೇವನೆ ಮಾಡ್ತಿದ್ದರು. ಆಗಿನಿಂದ್ಲೂ ರತ್ಲಂ ನಮ್ಕಿನ್ ಗೆ ಹೆಚ್ಚಿನ ಬೇಡಿಕೆ ಇದೆ. ರತ್ಲಂ ಸೇವ್ ಏಕೆ ತಯಾರಿಸಬಾರದು ಎಂದು ಆಲೋಚನೆ ಮಾಡಿದ ಅನುರಾಧಾ ತ್ಯಾಗಿ ಅದಕ್ಕೆ ಕೈ ಹಾಕಿದ್ರು. ಅವರು ಹಿಂದೆ ಮಾಡ್ತಿದ್ದಂತೆ ಕೈನಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ನಮ್ಕಿನ್ ತಯಾರಿ ಶುರು ಮಾಡಿದ್ರು. 

ಅನುರಾಧಾ ತ್ಯಾಗಿಯ  ಮಸೋವಾ ಆರ್ಗ್ಯಾನಿಕ್ ಫುಡ್ ಕಂಪನಿಯಲ್ಲಿ ತಯಾರಾಗುವ ಉತ್ಪನ್ನಕ್ಕೆ ಯಾವುದೇ ರೀತಿಯ ಕೊಬ್ಬಿನ ಎಣ್ಣೆ ಬಳಕೆ ಮಾಡೋದಿಲ್ಲ. ಹಾಗಾಗಿ ಇದು ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯುಂಟು ಮಾಡೋದಿಲ್ಲ. ವಿಶ್ವವಿಖ್ಯಾತವಾದ ರತ್ಲಂ ಸಂಸ್ಕೃತಿಯ ಆಧಾರದ ಮೇಲೆ ಇದನ್ನು ತಯಾರಿಸಲಾಗುತ್ತದೆ. 

ಅನುರಾಧಾ ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ಅನುಭವ ಹೊಂದಿದ್ದರು ಅವರಿಗೆ ಈ ಕೆಲಸ ಸುಲಭವಾಗಿರಲಿಲ್ಲ. ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಅವರು ಎದುರಿಸಿದ್ದರು. ಆದ್ರೆ ಅವರ ಸಮರ್ಪಣಾ ಮನೋಭಾವ ವರ್ಕ್ ಆಗಿದೆ. ಅವರು ಪ್ರತಿ ವರ್ಷ ಐವತ್ತು ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. 

ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಶುರು ಮಾಡಿದ್ರೂ ಒಂದೇ ವರ್ಷದಲ್ಲಿ ಲಕ್ಷಾಂತರ ವ್ಯವಹಾರ

ಅನುರಾಧಾ ತಮ್ಮ ಉತ್ಪನ್ನವನ್ನು ಆನ್ಲೈನ್ ನಲ್ಲಿಯೂ ಮಾರಾಟ (Online Sale) ಮಾಡ್ತಿದ್ದಾರೆ. ಭಾರತದ ಯಾವುದೇ ಭಾಗದಲ್ಲಿ ಕುಳಿತು ನೀವು ಅವರ ನಮ್ಕಿನ್ ಆರ್ಡರ್ ಮಾಡಬಹುದು. ಆನ್ಲೈನ್ ವೆಬ್ಸೈಟ್ ಆರ್ ಟಿಎಂನಲ್ಲಿ ಅವರ ಉತ್ಪನ್ನ ಲಭ್ಯವಿದೆ ಎಂದು ಅನುರಾಧಾ ತ್ಯಾಗಿ ತಿಳಿಸಿದ್ದಾರೆ. 

click me!