ಸುಪ್ರೀಂ ತೀರ್ಪಿನ ನಂತರ ಟೆಲಿಕಾಂ ಕಂಪನಿಗಳಿಗೆ ತಪರಾಕಿ, 15 ದಿನ ಇರೋದು!

By Web DeskFirst Published Oct 1, 2018, 5:49 PM IST
Highlights

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಟೆಲಿಕಾಂ ಕಂಪನಿಗಳ ಸಿಮ್ ಪಡೆದುಕೊಳ್ಳಲು ಆಧಾರ್ ಕಡ್ಡಾಯ ಅಲ್ಲ ಎಂಬುದನ್ನು ತೀರ್ಪು ಎತ್ತಿ ಹೇಳಿದೆ. ಆದರೆ ಕೆಲವು ಟಿಲಿಕಾಂ ಕಂಪನಿಗಳು ಆಧಾರ್ ಪಡೆದುಕೊಂಡಿದ್ದವು.

ನವದೆಹಲಿ(ಅ.1)  ಸುಪ್ರೀಂ ಕೋರ್ಟ್ ಆಧಾರ್ ಕುರಿತು ನೀಡಿರುವ ತೀರ್ಪಿನ್ನು ಆಧಾರವಾಗಿ ಇಟ್ಟುಕೊಂಡು ಯುಐಡಿಎಐ ದೇಶದ ಟೆಲಿಕಾಂ ಸಂಸ್ಥೆಗಳಿಗೆ ಪ್ರಶ್ನೆ ಮಾಡಿದೆ. ಆಧಾರ್ ದಾಖಲಾತಿ ವಿವರವನ್ನು ಯಾವ ಬಗೆಯಲ್ಲಿ ನಿಲ್ಲಿಸುತ್ತೀರಿ ಎಂದು ಮುಂದಿನ 15 ದಿನದೊಳಗೆ ಸ್ಪಷ್ಟಪಡಿಸಿ ಎಂದು ತಿಳಿಸಿದೆ.

ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ, ಐಡಿಯಾ,  ವೊಡಾಫೋನ್ ಸೇರಿದಂತೆ ದೇಶದ ಟೆಲಿಕಾಂ ಸೇವಾ ಪೂರೈಕೆದಾರರಿಗೆ  ಯುಐಡಿಎಐ  ಸುತ್ತೋಲೆ ಹೊರಡಿಸಿದೆ.
26 ಸೆಪ್ಟಂಬರ್ 2018.ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರವಾಗಿ ಎಲ್ಲಾ ಟಿಎಸ್ಪಿಗಳನ್ನು ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಆಧಾರ್ ಆಧಾರಿತ ದೃಢೀಕರಣ ವ್ಯವಸ್ಥೆಗಳ ಬಳಕೆಯನ್ನು ನಿಲ್ಲಿಸಲು ಯಾವ ಬಗೆಯ ಯೋಜನೆ ರೂಪಿಸಿಕೊಳ್ಳುತ್ತದೆ ಎಂಬುದನ್ನು15 ನೇ ಅಕ್ಟೋಬರ್, 2018 ರೊಳಗೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ.

click me!