
ಮುಂಬೈ(ಸೆ.19): ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಸತತ ಎರಡನೇ ದಿನವೂ ಕುಸಿತ ದಾಖಲಾಗಿದ್ದು ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 2.72 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ.
ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ಇ ಸೂಚ್ಯಂಕ ಸುಮಾರು 800 ಅಂಕಗಳ ಕುಸಿತ ದಾಖಲಿಸಿದೆ. ಸೋಮವಾರ 505 ಪಾಯಿಂಟ್ ಕುಸಿತ ಕಂಡು 37,585.51ಕ್ಕೆ ತಲುಪಿದ್ದ ಸೂಚ್ಯಂಕ ಮಂಗಳವಾರ ಸಹ 295 ಪಾಯಿಂಟ್ ಕುಸಿತದೊಡನೆ 37,290 ಗೆ ತಲುಪಿದೆ.
ಷೇರುಗಳ ತೀವ್ರ ಕುಸಿತದಿಂದಾಗಿ, ಬಿಎಸ್ಇ ಪಟ್ಟಿಯಲ್ಲಿರುವ ಕಂಪನಿಗಳ ಮಾರುಕಟ್ಟೆಯ ಬಂಡವಾಳ ರೂ 2,72,549.15 ಕೋಟಿಯಿಂದ 1,53,64,470 ಕೋಟಿ ರೂ.ಗೆ ಇಳಿದಿದೆ.
ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಾಣಿಜ್ಯ ಸಮರಗಳ ಕಾರಣ ಷೇರು ವಹಿವಾಟಿನಲ್ಲಿ ತಲ್ಲಣ ಸೃಷ್ಟಿಯಾಗಿದೆ. ಯುಎಸ್ ಮತ್ತು ಚೀನಾ ನಡುವಿನ ವ್ಯವಹಾರ ಸುಂಕದ ಕ್ಕಟ್ಟಿನಿಂದಾಗಿ ಮತ್ತು ರೂಪಾಯಿ ಮೌಲ್ಯ ಇಳಿಕೆ ಈ ಎಲ್ಲವೂ ಹೂಡಿಕೆದಾರರ ಭಾವನೆಗಳ ಮೇಲೆ ಪ್ರಭಾವ ಬೀರಿದೆ.
ಎಸ್ ಬಿಐ , ಟಾಟಾ ಮೋಟಾರ್ಸ್, ಬಜಾಜ್ ಆಟೋ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿ 24 ಷೇರುಗಳು ಭಾರೀ ಕುಸಿತ ದಾಖಲಿಸಿದೆ. ಇಂದಿನ ವಹಿವಾಟಿನಲ್ಲಿ ಬಿಎಸ್ಇದಲ್ಲಿ 1,805 ಷೇರುಗಳು ಕುಸಿತ ದಾಖಲಿಸಿದರೆ 881 ಷೇರುಗಳು ಏರುಗತಿ ಕಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.