ಗಮನಿಸಿ, ವಿಜಯ ಬ್ಯಾಂಕ್ ಸಹ ವಿಲೀನ.. ಕಾರಣ ಏನು?

By Web DeskFirst Published Sep 17, 2018, 8:44 PM IST
Highlights

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಕೆಲ ತಿಂಗಳುಗಳ ಹಿಂದೆ ಒಂದಿಷ್ಟು ಬ್ಯಾಂಕ್ ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನ ಮಾಡಿದ್ದ ಕೇಂದ್ರ ಸರಕಾರ ಈಗ ಮತ್ತೊಂದಿಷ್ಟು ಬ್ಯಾಂಕ್ ಗಳನ್ನು ಏಕೀಕೃತ ವ್ಯವಸ್ಥೆ ಅಡಿ ತರಲು ಮುಂದಾಗಿದೆ.

ನವದೆಹಲಿ[ಸೆ.17] ಸಾರ್ವಜನಿಕ ಸ್ವಾಮ್ಯದ ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಒಂದೇ ಬ್ಯಾಂಕಿಂಗ್ ಸೆಕ್ಟರ್ ಮಾಡಲಿದೆ.

ದುಡಿಯದ ಬಂಡವಾಳ ನಿರ್ವಹಣೆ[ಎನ್ ಪಿಎ] ಗಾಗಿ ಬ್ಯಾಂಕ್ ವಿಲೀನ ಮಾಡಲು ಮುಂದಾಗಿದ್ದು ವಿಲೀನಗೊಂಡ ನಂತರ ಇದು  ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.

ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯನ್ನು ಬಜೆಟ್ ನಲ್ಲಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಗಳ ವಿಲೀನವಾಗಲಿದ್ದು ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಯಾವುದೇ ತೊಂದರೆ ಇಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ವಿಶ್ವದ ಟಾಪ್ 50 ಪಟ್ಟಿಯಲ್ಲಿ ಭಾರತದ ಯಾವೊಂದು ಬ್ಯಾಂಕ್ ಸ್ಥಾನ ಪಡೆದಿಲ್ಲ. ಹೀಗಾಗಿ ಸಾರ್ವಜನಿಕ ವಲಯದಲ್ಲಿರುವ 21 ಬ್ಯಾಂಕ್ ಗಳನ್ನು 12ಕ್ಕೆ ಇಳಿಸಲು ಕೇಂದ್ರ ಸರಕಾರ ಯೋಜಿಸಿರುವುದು  ಇನ್ನೊಂದು ಕಾರಣ.

click me!