ಅಕ್ಟೋಬರ್‌ನಲ್ಲಿ 11 ದಿನ ಬ್ಯಾಂಕ್ ರಜೆ| ತುರ್ತು ವ್ಯವಹಾರಕ್ಕೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ| ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಜೆ ಸೇರಿ ಬರೋಬ್ಬರಿ 11 ದಿನ ಬ್ಯಾಂಕ್‌ಗೆ ರಜೆ
ನವದೆಹಲಿ(ಅ.01): ಅಕ್ಟೋಬರ್‌ನಲ್ಲಿ ಬ್ಯಾಂಕಿಂಗ್ ವ್ಯವಹಾರಗಳು ಇದ್ದರೆ ಬೇಗನೇ ಮುಗಿಸಿಕೊಳ್ಳಿ. ಇಲ್ಲದಿದ್ದರೆ ತುರ್ತು ವ್ಯವಹಾರಕ್ಕೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬರಬಹುದು!
ಹೌದು, ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಜೆ ಸೇರಿ ಬರೋಬ್ಬರಿ 11 ದಿನ ಬ್ಯಾಂಕ್‌ಗೆ ರಜೆ ಇದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
undefined
ಸಾಲು ಸಾಲು ಹಬ್ಬಗಳು ಹಾಗೂ ವಾರಾಂತ್ಯದ ರಜೆಗಳು ಇದ್ದು, ದೈನಂದಿನ ಬ್ಯಾಂಕಿಂಗ್ ವಹಿವಾಟುಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಸತತ ರಜೆಯಿಂದ ಎಟಿಎಂ ವ್ಯವಹಾರಕ್ಕೂ ತೊಡಕಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿಹೀಗಿದೆ.
ಅ.2 ಗಾಂಧಿ ಜಯಂತಿ
ಅ.4 ಭಾನುವಾರ
ಅ.10 ಎರಡನೇ ಶನಿವಾರ
ಅ.11 ಭಾನುವಾರ
ಅ.18 ಭಾನುವಾರ
ಅ.23 ಮಹಾಸಪ್ತಮಿ (ಪ್ರಾದೇಶಿಕ)/
ಅ.24 ನಾಲ್ಕನೇ ಶನಿವಾರ
ಅ.25 ಭಾನುವಾರ
ಅ.26 ವಿಜಯ ದಶಮಿ
ಅ.29 ಈದ್ ಮಿಲಾದ್
ಅ.31 ವಾಲ್ಮೀಕಿ ಜಯಂತಿ