ಬೆಂಗ್ಳೂರಲ್ಲಿ ಬಿಯರ್ ಸಿಗ್ತಿಲ್ಲ: ಯಾಕೆ ಎಂಬುದಕ್ಕೆ ಉತ್ತರವೂ ಸಿಗ್ತಿಲ್ಲ!

Published : Oct 21, 2018, 03:02 PM ISTUpdated : Oct 21, 2018, 03:07 PM IST
ಬೆಂಗ್ಳೂರಲ್ಲಿ ಬಿಯರ್ ಸಿಗ್ತಿಲ್ಲ: ಯಾಕೆ ಎಂಬುದಕ್ಕೆ ಉತ್ತರವೂ ಸಿಗ್ತಿಲ್ಲ!

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಬಿಯರ್ ಸಪ್ಲೈ ಕಡಿಮೆ! ಬಿಯರ್ ಸಿಗದೇ ಪರದಾಡುತ್ತಿದ್ದಾರೆ ಮದ್ಯಪ್ರೀಯರು! ದೇಶಿ ಮದ್ಯ ಮಾರಾಟಕ್ಕೆ ಸರ್ಕಾರದ ಹೆಚ್ಚಿನ ಒಲವು! ಎಂಆರ್‌ಪಿ ಮಳಿಗೆಯಲ್ಲೂ ಬಿಯರ್ ಸಪ್ಲೈ ಕೊರತೆ! ಹಬ್ಬದಿಂದಾಗಿ ಖರೀದಿ ಹೆಚ್ಚಳ ಎಂದ ಅಬಕಾರಿ ಇಲಾಖೆ

ಬೆಂಗಳೂರು(ಅ.21): ನಗರದ ಬಿಯರ್ ಪ್ರಿಯರಿಗೆ ಕಹಿ ಸುದ್ದಿಯೊಂದು ಬಂದೆರಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಯರ್ ಸಪ್ಲೈ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಮದ್ಯದ ಅಂಗಡಿಗಳಲ್ಲಿ ಬಿಯರ್ ಸಿಗದೇ ಗ್ರಾಹಕರು ಕಂಗಾಲಾಗಿದ್ದಾರೆ.

ಭಾರತದಲ್ಲಿ ತಯಾರಾಗುವ ಮದ್ಯಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುವುದು, ಮದ್ಯ ಪೂರೈಕೆಯಲ್ಲಿನ ಕೊರತೆಗೆ ಕಾರಣ ಎಂದು ನಗರದ ಮದ್ಯ ಮಾರಾಟ ಮಾಲೀಕರು ಹೇಳಿದ್ದಾರೆ.

ಭಾರತದಲ್ಲಿ ತಯಾರಿಸುವ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದರಿಂದ, ಸರ್ಕಾರ ಅದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ರೈತರ ಸಾಲ ಮನ್ನಾ ಮಾಡಿರುವುದರಿಂದ ಸರ್ಕಾರಕ್ಕೆ ಬೇರೆ ಮೂಲಗಳಿಂದ ಆದಾಯ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಎಂಆರ್‌ಪಿ ದರದಲ್ಲಿ ಸಿಗುವ ಔಟ್‌ಲೆಟ್‌ಗಳಲ್ಲಿ ಬಿಯರ್ ಸಿಗುವುದು ಕಷ್ಟವಾಗಿದೆ. ಅನೇಕ ಬಿಯರ್ ಬ್ರ್ಯಾಂಡ್‌ಗಳು ಕಳೆದ 8-10 ದಿನಗಳಿಂದ ಸಿಗುತ್ತಿಲ್ಲ. ಲಿಕ್ಕರ್ ಡಿಪೋದಿಂದ ಬಿಯರ್ ಸಪ್ಲೈ ಆಗುತ್ತಿಲ್ಲ ಎಂಬುದು ಮದ್ಯದಂಗಡಿ ಮಾಲೀಕರ ಅಳಲು.

ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಈ ವಾದವನ್ನು ಒಪ್ಪುತ್ತಿಲ್ಲ. ಸಾಲುಸಾಲು ರಜೆ ಬಂದಿರುವುದರಿಂದ, ಖರೀದಿದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ತಾತ್ಕಾಲಿಕವಾಗಿ ಬಿಯರ್ ಕೊರತೆಯುಂಟಾಗಿದೆ ಎಂಬುದು ಅವರ ವಾದವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!