
ಮುಂಬೈ(ಅ.21): ಇದೇ ಅಕ್ಟೋಬರ್ 25-26 ರಂದು ಎರಡು ದಿನಗಳ ಕಾಲ ಮೊಬೈಲ್ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಈ ವೇಳೆ ದೇಶದ ಎರಡು ಟೆಲಿಕಾಂ ದಿಗ್ಗಜ ಕಂಪನಿಗಳ ಮಾಲೀಕರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ರಿಲಯನ್ಸ್ ಜಿಯೋ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಮತ್ತು ಭಾರತಿ ಏರ್‌ಟೆಲ್ ಮುಖ್ಯಸ್ಥರಾದ ಸುನೀಲ್ ಮಿತ್ತಲ್ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಜಿಯೋ ಮತ್ತು ಏರ್‌ಟೆಲ್ ಪರಸ್ಪರ ವೈರಿ ಸಂಸ್ಥೆಗಳೆಂದೇ ವ್ಯಾಪಾರ ಜಗತ್ತಿನಲ್ಲಿ ಹೆಸರು ಪಡೆದಿವೆ.
ಅಕ್ಟೋಬರ್ 25 ರ ಉದ್ಘಾಟನಾ ಸಮಾರಂಭದಲ್ಲಿ ಮುಖೇಶ್ ಮತ್ತು ಸುನೀಲ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ನಿರ್ಧಾರ ಈಗಾಗಲೇ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸಲಿದ್ದು, ಮುಖೇಶ್ ಮತ್ತು ಸುನೀಲ್ ಅವರನ್ನು ಒಟ್ಟಾಗಿ ನೋಡಲು ದೇಶ ಆದು ಕುಳಿತಿದೆ.
ಇದೇ ವೇಳೆ ಮೊಬೈಲ್ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ವೋಡಾಫೋನ್ ಐಡಿಯಾ ಚೇರಮನ್ ಕುಮಾರ್ ಮಂಗಲಂ ಬಿರ್ಲಾ ಕೂಡ ಭಾಗವಹಿಸಲಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.