ಆರಂಭವಾಗಿ ಎರಡು ವರ್ಷ ಕಳೆಯುವ ಮುನ್ನವೇ ದೇಶದಲ್ಲಿ ‘ಅಮೆಜಾನ್ ಲರ್ನಿಂಗ್ ಪ್ಲಾಟ್‌ಫಾರ್ಮ್’ ಅನ್ನು 2023ರ ಆಗಸ್ಟ್ ನಿಂದ ನಿಲ್ಲಿಸುವುದಾಗಿ ಗುರುವಾರ ಅಮೆಜಾನ್ ಘೋಷಿಸಿದೆ.
ನವದೆಹಲಿ: ಆರಂಭವಾಗಿ ಎರಡು ವರ್ಷ ಕಳೆಯುವ ಮುನ್ನವೇ ದೇಶದಲ್ಲಿ ‘ಅಮೆಜಾನ್ ಲರ್ನಿಂಗ್ ಪ್ಲಾಟ್‌ಫಾರ್ಮ್’ ಅನ್ನು 2023ರ ಆಗಸ್ಟ್ ನಿಂದ ನಿಲ್ಲಿಸುವುದಾಗಿ ಗುರುವಾರ ಅಮೆಜಾನ್ ಘೋಷಿಸಿದೆ. ಆದರೆ ಇದಕ್ಕೆ ಯಾವುದೇ ಕಾರಣವನ್ನು ಅಮೆಜಾನ್ ಬಹಿರಂಗಪಡಿಸಿಲ್ಲ. ಕಳೆದ ವರ್ಷ ಜನವರಿಯಲ್ಲಿ ಕೋವಿಡ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ನಡೆಸಲಾಗುವ ಜೆಇಇ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವಂತೆ ಈ ಪ್ಲಾಟ್‌ಫಾರ್ಮ್ ಅನ್ನು ಅಮೆಜಾನ್ ಪ್ರಾರಂಭಿಸಿತ್ತು.
ಆದರೆ ವಿದ್ಯಾರ್ಥಿಗಳಿಗೆ (student) ಪೂರ್ತಿ ಶುಲ್ಕವನ್ನು ಮರುಪಾವತಿಸುವುದಾಗಿಯೂ (refund) ಹೇಳಿದ್ದು ಸದ್ಯ ಕೋರ್ಸ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‌ನ ಅವಧಿ ಮುಗಿಯುವವರೆಗೂ 2024ರ ಅಕ್ಟೋಬರ್ ತನಕ ಆನ್‌ಲೈನ್ ತರಗತಿ (Online class) ಮುಂದುವರೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ನೀಟ್ (NEET) ಮತ್ತು ಜೆಇಇ (JEE exam) ಪರೀಕ್ಷಾ ಅಭ್ಯರ್ಥಿಗಳಿಗೆ ಸಂಪೂರ್ಣ ಪಠ್ಯಕ್ರಮದ ತರಗತಿ ನೀಡಲು ಕಂಪನಿಯು ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆಯೊಂದಿಗೆ (Shree Chaitanya Educational Institute)ಸಹಯೋಗ ಮಾಡಿಕೊಂಡಿದೆ.
HP Layoffs: ಇನ್ನು ಮೂರೇ ವರ್ಷದಲ್ಲಿ 6 ಸಾವಿರ ಎಚ್‌ಪಿ ಉದ್ಯೋಗಿಗಳ ವಜಾ!
ಹಣ ಉಳಿಸಿಕೊಳ್ಳಿ: ಟಿವಿ, ಫ್ರಿಡ್ಜ್, ಕಾರು ಖರೀದಿ ಬೇಡವೆಂದು ಅಮೆಜಾನ್ ಸಂಸ್ಥಾಪಕ ಸಲಹೆ..!
850 ಕಂಪನಿಯಿಂದ 1.36 ಲಕ್ಷ ಉದ್ಯೋಗಿಗಳ ವಜಾ, ಇದೀಗ ಗೂಗಲ್ 10,000 ನೌಕರರ ಕಡಿತಕ್ಕೆ ಪ್ಲಾನ್!