ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್‌ ನ್ಯೂಸ್‌: ಬಡ್ಡಿ ದರದಲ್ಲಿ ಭಾರಿ ಹೆಚ್ಚಳ

By Kannadaprabha NewsFirst Published Apr 1, 2023, 11:41 AM IST
Highlights

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಬಡ್ಡಿ ದರವನ್ನು ಶೇ.7 ರಿಂದ ಶೇ. 7.7ಕ್ಕೆ ಹೆಚ್ಚಿಸಲಾಗಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಶೇ. 7.6 ರಿಂದ ಶೇ.8 ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕ ಉಳಿತಾಯ ಖಾತೆ ಬಡ್ಡಿದರವನ್ನು ಶೇ.8 ರಿಂದ ಶೇ. 8.2ಕ್ಕೆ, ಕಿಸಾನ್‌ ವಿಕಾಸ್‌ ಪತ್ರದ ಬಡ್ಡಿದರವನ್ನು ಶೇ. 7.2 ರಿಂದ ಶೇ.7.5 ಕ್ಕೆ ಹೆಚ್ಚಿಸಲಾಗಿದೆ.

ನವದೆಹಲಿ (ಏಪ್ರಿಲ್ 1, 2023): ಇದೇ ಏಪ್ರಿಲ್‌-ಜೂನ್‌ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ವಿವಿಧ ಸಣ್ಣ ಉಳಿತಾಯ ಖಾತೆ ಠೇವಣಿಗಳ ಬಡ್ಡಿದರವನ್ನು ಶೇ. 0.1 ರಿಂದ ಶೇ. 0.7 ರವರೆಗೂ ಹೆಚ್ಚಳ ಮಾಡಿ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಸಮಾಧಾನ ನೀಡಿದೆ. ಆದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌)ಯ ಬಡ್ಡಿದರವನ್ನು ಶೇ. 7.1 ಮತ್ತು ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ. 4 ರಲ್ಲೇ ಮುಂದುವರೆಸಲಾಗಿದೆ.

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಬಡ್ಡಿ ದರವನ್ನು ಶೇ.7 ರಿಂದ ಶೇ. 7.7ಕ್ಕೆ ಹೆಚ್ಚಿಸಲಾಗಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಶೇ. 7.6 ರಿಂದ ಶೇ.8 ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕ ಉಳಿತಾಯ ಖಾತೆ ಬಡ್ಡಿದರವನ್ನು ಶೇ.8 ರಿಂದ ಶೇ. 8.2ಕ್ಕೆ, ಕಿಸಾನ್‌ ವಿಕಾಸ್‌ ಪತ್ರದ ಬಡ್ಡಿದರವನ್ನು ಶೇ. 7.2 ರಿಂದ ಶೇ.7.5 ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಕಿಸಾನ್‌ ವಿಕಾಸ್‌ ಪತ್ರ ಮೆಚ್ಯೂರಿಟಿ ಅವಧಿಯನ್ನು ಈ ಹಿಂದಿನ 120 ತಿಂಗಳ ಬದಲಾಗಿ 115 ತಿಂಗಳಿಗೆ ಇಳಿಕೆ ಮಾಡಲಾಗಿದೆ.

ಇದನ್ನು ಓದಿ: ಎಲ್ಐಸಿಯ ಈ ಎರಡು ಪಾಲಿಸಿಗಳು ನಾಳೆಯಿಂದ ಲಭ್ಯವಿಲ್ಲ, ಏಕೆ? ಇಲ್ಲಿದೆ ಮಾಹಿತಿ

ಉಳಿದಂತೆ ಅಂಚೆ ಇಲಾಖೆಯ 1 ವರ್ಷದ ಅವಧಿಯ ಠೇವಣಿಯ ಬಡ್ಡಿದರವನ್ನು ಶೇ.6.6ರಿಂದ ಶೇ.6.8 ಕ್ಕೆ, 2 ವರ್ಷಗಳ ಠೇವಣಿ ಬಡ್ಡಿದರ ಶೇ. 6.8 ರಿಂದ ಶೇ. 6.9ಕ್ಕೆ, 3 ವರ್ಷದ ಠೇವಣಿ ಬಡ್ಡಿದರವನ್ನು ಶೇ. 6.9ರಿಂದ ಶೇ. 7ಕ್ಕೆ, 5 ವರ್ಷಗಳ ಠೇವಣಿ ಬಡ್ಡಿದರ ಶೇ.7ರಿಂದ ಶೇ.7.5ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮಾಸಿಕ ಆದಾಯ ಯೋಜನೆಯ ಬಡ್ಡಿದರವನ್ನು ಶೇ. 7.1 ರಿಂದ ಶೇ. 7.4ಕ್ಕೆ ಹೆಚ್ಚಿಸಲಾಗಿದೆ.

ಯಾವ್ಯಾವ ಯೋಜನೆ ಬಡ್ಡಿ ಹೆಚ್ಚಳ?
ಯೋಜನೆ                         ಹಳೇ ಬಡ್ಡಿ          ಹೊಸ ದರ
ಎನ್‌ಎಸ್‌ಸಿ                          ಶೇ.7                      ಶೇ.7.7
ಸುಕನ್ಯಾ ಸಮೃದ್ಧಿ                ಶೇ.7.6                   ಶೇ.8
ಹಿರಿಯ ನಾಗರಿಕರ ಎಸ್‌ಬಿ    ಶೇ.8                      ಶೇ.8.2
ಕಿಸಾನ್‌ ವಿಕಾಸ ಪತ್ರ             ಶೇ.7.2                   ಶೇ.7.5

ಇದನ್ನೂ ಓದಿ: ಏ.1ರಿಂದ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಬದಲಾವಣೆ; ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಪ್ರಾರಂಭ

click me!