ಬ್ಯಾಂಕ್‌ಗಳಿಗೆ ಬಿತ್ತು ಮೂಗುದಾರ, ಗ್ರಾಹಕರಿಗೆ ನಿರಾಳ!

By Web DeskFirst Published Dec 7, 2018, 10:23 AM IST
Highlights

ಆರ್‌ಬಿಐ ಗೃಹ, ವಾಹನ ಬಡ್ಡಿದರ ನಿಗದಿಗೆ 2019ರಿಂದ ಹೊಸ ಮಾನದಂಡ ವಿಧಿಸಿದೆ. ಈ ಮೂಲಕ ಬ್ಯಾಂಕ್‌ಗಳಿಗೆ ಮುಗುದಾರ ಹಾಕಿ ಗ್ರಾಹಕರ ಹೊರೆ ಕಡಿಮೆಗೊಳಿಸಿದೆ.

ಮುಂಬೈ[ಡಿ.07]: ತಾನು ಬಡ್ಡಿದರ ಇಳಿಕೆ ಮಾಡಿದರೂ, ಅದನ್ನು ಗ್ರಾಹಕರಿಗೆ ವರ್ಗಾವಣೆ ಮಾಡದೇ ಇರುವ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಕೊನೆಗೂ ಮೂಗುದಾರ ಹಾಕಿದ.

2019ರ ಏಪ್ರಿಲ್‌ 1ರಿಂದ ಗೃಹ, ವಾಹನ ಸೇರಿದಂತ ಇತರೆ ಸಾಲಗಳ ಮೇಲಿನ ಬಡ್ಡಿದರಕ್ಕೆ ಹೊಸ ಮಾನದಂಡ ಅನುಸರಿಸಬೇಕೆಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಇದುವರೆಗೆ ಬ್ಯಾಂಕ್‌ಗಳು ಗ್ರಾಹಕರ ಸಾಲಕ್ಕೆ ಬಡ್ಡಿ ದರ ನಿಗದಿ ಮಾಡಲು ಆಂತರಿಕ ಮಾನದಂಡ ಅನುಸರಿಸುತ್ತಿದ್ದವು. ಹೀಗಾಗಿ ಆರ್‌ಬಿಐ ರೆಪೋ ದರವನ್ನು ಇಳಿಸಿದರೂ, ಬ್ಯಾಂಕ್‌ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಆದರೆ ಇನ್ನು ಮುಂದೆ ಬಾಹ್ಯ ಮಾನದಂಡ ಅನುಸರಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

ಹೀಗಾಗಿ ಆರ್‌ಬಿಐ ರೆಪೋ ದರ ಇಳಿಸುತ್ತಲೇ, ಅದರ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಲಿದೆ.

click me!