Youtube Channel ಪ್ರಸಿದ್ಧಿಯಾಗ್ಬೇಕೆಂದ್ರೆ ಹೆಸರೂ ಮುಖ್ಯ

Published : Aug 24, 2022, 11:28 AM IST
Youtube Channel ಪ್ರಸಿದ್ಧಿಯಾಗ್ಬೇಕೆಂದ್ರೆ ಹೆಸರೂ ಮುಖ್ಯ

ಸಾರಾಂಶ

ಆನ್ಲೈನ್ ಮೂಲಕ ಹಣ ಗಳಿಸುವ ಸುಲಭ ದಾರಿ ಯುಟ್ಯೂಬ್. ಇತ್ತೀಚಿನ ದಿನಗಳಲ್ಲಿ ಯುಟ್ಯೂಬ್ ಸಂಖ್ಯೆ ಹೆಚ್ಚಾಗಿದೆ. ಅನೇಕರು ಚಾನೆಲ್ ಮೂಲಕ ಹಣ ಗಳಿಸ್ತಿದ್ದಾರೆ. ಮತ್ತೆ ಕೆಲವರು ಎಷ್ಟೇ ಪ್ರಯತ್ನಿಸಿದ್ರೂ ಸಬ್ಸ್ಕ್ರೈಬರ್ ಹೊಂದಲು ಸಾಧ್ಯವಾಗ್ತಿಲ್ಲ. ಇದಕ್ಕೆ ಅನೇಕ ಕಾರಣವಿದೆ.  

ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಎಂಬ ಮಾತಿದೆ. ಈ ಮಾತು ನೂರಕ್ಕೆ ನೂರು ಸತ್ಯ. ಯಾವುದೇ ವ್ಯಕ್ತಿಯಾಗಿರಲಿ, ಯಾವುದೇ ವಸ್ತುವಾಗಿರಲಿ ಇಲ್ಲ ಯಾವುದೇ ಊರಾಗಿರಲಿ ಅದ್ರ ಹೆಸರು ಕೂಡ ಮಹತ್ವ ಪಡೆಯುತ್ತದೆ. ಹಾಗೆಯೇ ಯುಟ್ಯೂಬ್ ಚಾನೆಲ್ ಹೆಸರು ಕೂಡ ಗ್ರಾಹಕರನ್ನು ಸೆಳೆಯುತ್ತದೆ. ಸ್ವೀಟ್ ಆಗಿರುವ,ಕ್ಯಾಚಿ ಆಗಿರುವ ಹಾಗೆ ನೆನಪಿನಲ್ಲಿ ಸುಲಭವಾಗಿಟ್ಟುಕೊಳ್ಳಲು ಬರುವಂತಹ ಹೆಸರು ಸಾಮಾನ್ಯವಾಗಿ ಎಲ್ಲರನ್ನು ಆಕರ್ಷಿಸುತ್ತದೆ. ಯುಟ್ಯೂಬ್ ಚಾನೆಲ್ ಗಳು ಈಗ ನಾಯಿ ಕೊಡೆಯಂತೆ ಹುಟ್ಟಿಕೊಂಡಿದೆ. ಲಕ್ಷಾಂತರ ಯುಟ್ಯೂಬ್ ಚಾನೆಲ್ ಗಳಿವೆ. ಆದ್ರೆ ಇದ್ರಲ್ಲೂ ಅನೇಕರು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಯುಟ್ಯೂಬ್ ಚಾನೆಲ್ ಶುರು ಮಾಡಿದ್ರೆ ಸಾಲದು ಅದು ಹೆಚ್ಚು ಸಬ್ಸ್ಕ್ರಬ್ ಆಗ್ಬೇಕೆಂದ್ರೆ ಅದ್ರ ಹೆಸರು ಕೂಡ ಮುಖ್ಯವಾಗುತ್ತದೆ. ಚಾನೆಲ್ ನಲ್ಲಿ ನೀವು ವಿಡಿಯೋ ಹಾಕುವ ಮೊದಲು, ವಿಡಿಯೋ ಆರಂಭದಲ್ಲಿಯೇ ನಮಸ್ಕಾರ ನನ್ನ ಹೆಸರು, ಈ ಯುಟ್ಯೂಬ್ ಚಾನೆಲ್ ಗೆ ಸ್ವಾಗತ ಎನ್ನುತ್ತ ನಿಮ್ಮ ಚಾನೆಲ್ ಹೆಸರನ್ನು ಹೇಳ್ತೀರಿ. ನಿಮ್ಮ ಚಾನೆಲ್ ಪ್ರತಿ ವಿಡಿಯೋದಲ್ಲೂ ನೀವು ಚಾನೆಲ್ ಹೆಸರನ್ನು ಹೇಳ್ತೀರಿ. ಹಾಗಾಗಿ ಚಾನೆಲ್ ಗೆ ಒಂದು ಹೆಸರು ಬೇಕೇಬೇಕು.

ಸಾಮಾನ್ಯವಾಗಿ ನೀವು ನಿಮಗಿಷ್ಟದ ಹೆಸರನ್ನು ಚಾನೆಲ್ (Channel) ಗೆ ಇಡೋದಲ್ಲ. ನಾಲ್ಕೈದು ಬಾರಿ ನಿಮ್ಮ ಚಾನೆಲ್ ಹೆಸರ (name) ನ್ನು ಹೇಳಿಕೊಳ್ಳಿ. ವೆಲ್ ಕಂ ಸ್ಪೀಚ್ ಮಾಡಿ. ನಿಮಗೆ ನಿಮ್ಮ ಹೆಸರು ಹೇಳಲು ಸುಲಭವಾಗ್ತಿದೆಯೇ ಎಂಬುದನ್ನು ಮೊದಲು ನೋಡಿ. ಟೀ ಶರ್ಟ್, ಚಪ್ಪಲಿ ಖರೀದಿ ಮಾಡುವಾಗ ಅದನ್ನು ಟ್ರಯಲ್ (Trial) ಮಾಡ್ತೇವೆ. ಹಾಗೆಯೇ ನೀವು ಒಮ್ಮೆ ಟ್ರಯಲ್ ಮಾಡಿ ನೋಡಿ. 

ಚಾನಲ್ ಹೆಸರು, ಯುಟ್ಯೂಬ್ ಬಳಕೆದಾರರ ಹೆಸರು ಮತ್ತು ಕಸ್ಟಮ್ ಯುಆರ್ ಎಲ್  ಇಡುವಾಗ ಆಲೋಚನೆ ಮಾಡಿ. ಚಾನಲ್ ಗೆ ಭೇಟಿ ನೀಡುವ ಗ್ರಾಹಕರು ಚಾನೆಲ್ ಆರ್ಟ್, ಚಾನಲ್ ಲೋಗೋ, ಟ್ಯಾಬ್, ಚಾನಲ್ ಮಾಹಿತಿ ಎಲ್ಲವನ್ನೂ ಗಮನಿಸುತ್ತಾರೆ. ಹಾಗಾಗಿ ಇದೆಲ್ಲದರ ಬಗ್ಗೆಯೂ ಆಸಕ್ತಿಯಿಂದ, ಜಾಗೃತಿಯಿಂದ ಬರೆಯಬೇಕು. 

ಹೆಸರು ಚೆನ್ನಾಗಿದ್ರೆ ಸರ್ಚ್ ರಿಸಲ್ಟ್ ನಲ್ಲಿ ನಿಮ್ಮ ಚಾನೆಲ್ ಹೆಸರು ಮುಂದಿರುತ್ತದೆ. ಆಗ ನಿಮ್ಮ ಯುಟ್ಯೂಬ್ ಚಾನೆಲನ್ನು ಆರಾಮವಾಗಿ ಹುಡುಕಬಹುದು. ಈಗಾಗಲೇ ಬೇರೆಯವರು ಇಟ್ಟಿರುವ ಹೆಸರನ್ನು ನೀವು ನಿಮ್ಮ ಚಾನೆಲ್ ಗೆ ಇಡಬೇಡಿ. ಇದರಿಂದ ನಿಮ್ಮ ಚಾನಲ್ ಸರ್ಚ್ ಆಗುವುದಿಲ್ಲ. ನೀವು ಯಾವ ರೀತಿಯ ವಿಡಿಯೋ ಹಾಕ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ. ಅದಕ್ಕೆ ತಕ್ಕಂತೆ ಹೆಸರನ್ನು ಇಡಿ. 

ಇದನ್ನೂ ಓದಿ: Personal Finance: ಗೃಹಿಣಿಯರಿಗೆ ಇಲ್ಲಿದೆ ಬ್ಯುಸಿನೆಸ್ ಟಿಪ್ಸ್

ಯಾವಾಗ್ಲೂ ಚಾನೆಲ್ ಹೆಸರು ತುಂಬಾ ಚಿಕ್ಕದಾಗಿರಲಿ. ಹಾಗೆ ಹೆಸರು ಸಿಂಪಲ್ ಆಗಿರುವಂತೆ ನೋಡಿಕೊಳ್ಳಿ. ಫೋನ್ ನಲ್ಲಿ ಹೆಸರು ಹೇಳಿದ್ರೂ ಕೇಳುವವರಿಗೆ ಇದು ಸರಿಯಾಗಿ ಅರ್ಥವಾಗ್ಬೇಕು ಅಂತ ಹೆಸರನ್ನಿಡಿ.
ಒಂದೇ ಶಬ್ಧವನ್ನು ಚಾನೆಲ್ ಗೆ ಹೆಸರಿಡಲು ಪ್ರಯತ್ನಿಸಿ. ಸಿಂಗಲ್ ವರ್ಲ್ಡ್ ಯಾವಾಗ್ಲೂ ಅನನ್ಯವಾಗಿರುತ್ತದೆ. ಇದು ಬೇಗ ಪ್ರಸಿದ್ಧಿಯಾಗುತ್ತದೆ. ಸಿಂಗಲ್ ಶಬ್ಧ ಇಡಲು ಸಮಯ ತೆಗೆದುಕೊಳ್ಳುತ್ತದೆ. ಆಲೋಚನೆ ಮಾಡಿ ಶಬ್ಧ ಆಯ್ಕೆ ಮಾಡಿ. ಈ ಹೆಸರನ್ನು ಸರ್ಚ್ ಮಾಡಿ. ಯುಟ್ಯೂಬ್ ನಲ್ಲಿ ಈ ಹೆಸರಿನ ಚಾನೆಲ್ ಇದ್ಯೆ ಎಂಬುದನ್ನು ನೋಡಿ.  ಇಲ್ಲವೆಂದ್ರೆ ನೀವು ಎರಡು ಶಬ್ಧದ ಹೆಸರನ್ನು ಕೂಡ ಇಡಬಹುದು. ಆದ್ರೆ ಇದಕ್ಕಿಂತ ಹೆಚ್ಚು ಶಬ್ಧವಿರುವ ಹೆಸರನ್ನು ಆಯ್ಕೆ ಮಾಡಲು ಹೋಗದಿರುವುದು ಒಳ್ಳೆಯದು. 

ಇದನ್ನೂ ಓದಿ: ಮಹಿಳೆ ದುಡಿದ್ರೆ ಸಾಕಾ, ಉಳಿಸೋದು ಬೇಡ್ವಾ? ಆಕೆಯ ಫೈನಾನ್ಷಿಯಲ್ ಪ್ಲ್ಯಾನಿಂಗ್ ಗೆ ಇಲ್ಲಿವೆ 5 ಟಿಪ್ಸ್

ಹೆಸರಿನ ಮೂಲಕ ನೀವು ಚಾನೆಲ್ ನಲ್ಲಿ ಏನು ಹೇಳ್ತಿದ್ದೀರಿ ಎಂಬುದನ್ನು ಹೇಳಲು ಸಾಧ್ಯವಾಗ್ತಿಲ್ಲ ಎಂದಾದ್ರೆ About Tab ನಲ್ಲಿ ವಿವರಿಸಬೇಕಾಗುತ್ತದೆ. ಹಾಗೆಯೇ ಬರಿ ವಿಡಿಯೋ ಹಾಕಿದ್ರೆ ಸಾಲದು. ಚಾನೆಲ್ ಪ್ರಸಿದ್ಧಿಗೆ ನೀವು ವಿಶೇಷವಾದದ್ದನ್ನು ಮಾಡಬೇಕಾಗುತ್ತದೆ. 

ಪ್ರಸಿದ್ಧ ಹೆಸರನ್ನು ಆಯ್ಕೆ ಮಾಡಿ. ಆದ್ರೆ ಅದಕ್ಕೆ ಗೂಗಲ್ ಸರ್ಚ್ ಮಾಡ್ಬೇಡಿ. ಮೊದಲು ಹೆಸರು ಬರೆದು, ನಂತ್ರ ಗೂಗಲ್ ನಲ್ಲಿ ಹೆಸರಿದೆಯಾ ಎಂಬುದನ್ನು ಪರೀಕ್ಷಿಸಿ. ಈಗಾಗಲೇ ಇರುವ ಚಾನೆಲ್ ಹೆಸರನ್ನು ಇಡಬೇಡಿ. ಯುಟ್ಯೂಬ್ ಚಾನೆಲ್ ಹೆಸರನ್ನು ಆಯ್ಕೆಮಾಡುವಾಗ ಜಾಗರೂಕರಾಗಿರಿ. ಚಾನಲ್‌ನ ಅದೇ ಹೆಸರಿನ ಡೊಮೇನ್ ಅನ್ನು ನೀವು ಪಡೆದರೆ ಅದು ತುಂಬಾ ಒಳ್ಳೆಯದು. ಚಾನಲ್ ಸ್ವಲ್ಪ ಜನಪ್ರಿಯವಾದಾಗ ವೆಬ್‌ಸೈಟ್ ಅಗತ್ಯವಿರುತ್ತದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್‌ಲೈನ್‌ ನಂಬರ್‌ಗಳು!