ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಿದ ಎಸ್ ಬಿಐ; ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

By Suvarna NewsFirst Published Jul 21, 2022, 3:50 PM IST
Highlights

*ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಎಸ್ ಬಿಐ
*ಒಂದೇ ಒಂದು ಮೆಸೇಜ್ ಮೂಲಕ ಈ ಸೇವೆ ಪಡೆಯಲು ನೋಂದಣಿ ಮಾಡಬಹುದು
*ಮಿನಿ ಸ್ಟೇಟ್ ಮೆಂಟ್ ಪಡೆಯಲು ಹಾಗೂ ಖಾತೆ ಬ್ಯಾಲೆನ್ಸ್  ಚೆಕ್ ಮಾಡಲು ಅವಕಾಶ

ನವದೆಹಲಿ (ಜು.21): ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯನ್ನು ಇನ್ನಷ್ಟು ಸರಳಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮುಂದಾಗಿದೆ. ಅದರ ಭಾಗವಾಗಿ ದೇಶದ ಅತೀದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ ಬಿಐ, ವಾಟ್ಸಾಪ್ ಬ್ಯಾಂಕಿಂಗ್  ಸೇವೆಗಳನ್ನು ಪ್ರಾರಂಭಿಸಿದೆ. ಈ ಬಗ್ಗೆ ಎಸ್ ಬಿಐ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ. ಹೀಗಾಗಿ ಇನ್ನು ಮುಂದೆ ಎಸ್ ಬಿಐ ಗ್ರಾಹಕರು ವಾಟ್ಸಾಪ್ ಬಳಸಿಕೊಂಡು ನಿರ್ದಿಷ್ಟ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಇದು ಗ್ರಾಹಕರಿಗೆ ಹೆಚ್ಚು ಅನುಕೂಲ ಒದಗಿಸಲಿದೆ. ಏಕೆಂದ್ರೆ ಎಲ್ಲರ ಮೊಬೈಲ್ ನಲ್ಲಿ ವಾಟ್ಸಾಪ್ ಅಪ್ಲಿಕೇಷನ್ ಇರೋ ಕಾರಣ ಡೌನ್ ಲೋಡ್ ಮಾಡಿಕೊಳ್ಳಬೇಕಾದ ಅಥವಾ ಎಟಿಎಂಗೆ ಹೋಗಬೇಕಾದ ಅಗತ್ಯವಿಲ್ಲ. ಎಸ್ ಬಿಐ  ಮುಖ್ಯಸ್ಥ ದಿನೇಶ್ ಖಾರ ಜು.1ರಂದು ಸುದ್ದಿಗೋಷ್ಠಿ ನಡೆಸಿ, ಶೀಘ್ರದಲ್ಲೇ ವಾಟ್ಸಾಪ್  ಬ್ಯಾಂಕಿಂಗ್ ಸೇವೆ ಪ್ರಾರಂಭಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಎಸ್ ಬಿಐ ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ ಬಳಿಕ ಯಾವೆಲ್ಲ ಸೇವೆಗಳನ್ನು ಒದಗಿಸಲಾಗುತ್ತದೆ ಎಂಬ ಬಗ್ಗೆ ಖಾರ ಈ ಸಂದರ್ಭದಲ್ಲಿ ಮಾಹಿತಿ ನೀಡಿರಲಿಲ್ಲ.

'ನಿಮ್ಮ ಬ್ಯಾಂಕ್ ಈಗ ವಾಟ್ಸಾಪ್ ನಲ್ಲಿದೆ. ನಿಮ್ಮ ಖಾತೆಯ ಬ್ಯಾಲೆನ್ಸ್ ಹಾಗೂ ಮಿನಿ ಸ್ಟೇಟ್ ಮೆಂಟ್ ನೋಡಲು ಇದನ್ನು ಬಳಸಿ' ಎಂದು ಎಸ್ ಬಿಐ ಜುಲೈ  19ರ ಟ್ವೀಟ್ ನಲ್ಲಿ ತಿಳಿಸಿದೆ. ಗ್ರಾಹಕರು 'ಹಾಯ್' ಎಂದು 919022690226 ಸಂಖ್ಯೆಗೆ ಒಂದು ಮೆಸೇಜ್ ಕಳುಹಿಸಿದ ಬಳಿಕ ಎಸ್ ಬಿಐ  ವಾಟ್ಸಾಪ್ ಬ್ಯಾಂಕಿಂಗ್  ಸೇವೆಗಳು ಲಭಿಸುತ್ತವೆ ಎಂದು ಎಸ್ ಬಿಐ ತಿಳಿಸಿದೆ.

ವಿಶ್ವದ 5ನೇ ಅತಿ ಶ್ರೀಮಂತ ವ್ಯಕ್ತಿ ಅದಾನಿಗೆ ಎಸ್‌ಬಿಐನಿಂದ 14 ಸಾವಿರ ಕೋಟಿ ಸಾಲ ಬೇಕಂತೆ..!

ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪಡೆಯೋದು ಹೇಗೆ?
ಹಂತ 1:ಒಂದು ವೇಳೆ ನೀವು ನಿಮ್ಮ ಖಾತೆಯನ್ನು ನೋಂದಣಿ ಮಾಡಿಸದಿದ್ದರೆ, ವಾಟ್ಸಾಪ್ ನಲ್ಲಿ ಎಸ್ ಬಿಐ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಮೊದಲಿಗೆ ಬ್ಯಾಂಕ್ ನೀಡಿರುವ ಸಂಖ್ಯೆ ಮೂಲಕ ನಿಮ್ಮ ಒಪ್ಪಿಗೆ ನೀಡಬೇಕು. ನೋಂದಣಿಯಾಗದ ಗ್ರಾಹಕ ಈ ಸೇವೆ ಬಳಸಲು ಹೋದರೆ 'ಎಸ್ ಬಿಐ  ವಾಟ್ಸಾಪ್ ಬ್ಯಾಂಕಿಂಗ್  ಸೇವೆಗಳನ್ನು ಪಡೆಯಲು ನೀವು ನೋಂದಣಿ ಮಾಡಿಲ್ಲ' ಎಂಬ ಸಂದೇಶ ಬರುತ್ತದೆ. ಈ ಸೇವೆಗಳನ್ನು ಬಳಸಲು ನೋಂದಣಿ ಮಾಡಲು ಹಾಗೂ ನಿಮ್ಮ ಒಪ್ಪಿಗೆ ನೀಡಲು  WAREG A/c No ಎಂದು 917208933148 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್ ಎಂಎಸ್ ಕಳುಹಿಸಿ. 
ಹಂತ 2: ಒಮ್ಮೆ ನೋಂದಣಿಯಾದ ಬಳಿಕ ‘Hi SBI’ಎಂದು ಟೈಪ್ ಮಾಡಿ 919022690226ಕ್ಕೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಅಥವಾ ವಾಟ್ಸಾಪ್ ನಲ್ಲಿ ನಿಮಗೆ ಯಶಸ್ವಿ ನೋಂದಣಿಯಾದ ಬಗ್ಗೆ ಬಂದ ಮೆಸೇಜ್ ಗೆ ಪ್ರತಿಕ್ರಿಯಿಸಿ.
ಹಂತ 3: ಒಮ್ಮೆ ನೀವು ಮೆಸೇಜ್ ಕಳುಹಿಸಿದ ಬಳಿಕ ನಿಮಗೆ ಈ ರೀತಿ ಪ್ರತ್ಯುತ್ತರ ಬರುತ್ತದೆ.
ಪ್ರಿಯ ಗ್ರಾಹಕರೇ, ಎಸ್ ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಗೆ ಸ್ವಾಗತ. ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆರಿಸಿ.
1.ಅಕೌಂಟ್ ಬ್ಯಾಲೆನ್ಸ್
2.ಮಿನಿ ಸ್ಟೇಟ್ ಮೆಂಟ್
3.ವಾಟ್ಸಾಪ್ ಬ್ಯಾಂಕಿಂಗ್ ನಿಂದ ಡಿ-ರಿಜಿಸ್ಟ್ರಾರ್

ರುಪಾಯಿ ಮಹಾಪತನ: ಡಾಲರ್ ಮುಂದೆ 80ಕ್ಕೆ ಕುಸಿತ

ಹಂತ 4: ಈ ಮೇಲೆ ವಿವರಿಸಿದ ಆಯ್ಕೆಗಳಲ್ಲಿ 1 ಅಥವಾ 2 ಅನ್ನು ಆಯ್ಕೆ ಮಾಡಿ. ನಿಮ್ಮ ಖಾತೆ ಬ್ಯಾಲೆನ್ಸ್ ಅಥವಾ ನಿಮ್ಮ ಕಳೆದ ಐದು ವಹಿವಾಟುಗಳ ಮಿನಿ ಸ್ಟೇಟ್ ಮೆಂಟ್ ಪಡೆಯಿರಿ. ಒಂದು ವೇಳೆ ನೀವು ಎಸ್ ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಂದ ಡಿ-ರಿಜಿಸ್ಟ್ರಾರ್ ಆಗಲು ಬಯಸಿದ್ರೆ 3ನೇ ಆಯ್ಕೆಯನ್ನು ಆರಿಸಿಕೊಳ್ಳಿ.
ಹಂತ 5: ನಿಮ್ಮ ಆಯ್ಕೆಗೆ ಅನುಗುಣವಾಗಿ ಮಿನಿ ಸ್ಟೇಟ್ ಮೆಂಟ್ ಅಥವಾ ಖಾತೆ ಬ್ಯಾಲೆನ್ಸ್ ಕಾಣಿಸುತ್ತದೆ.

click me!