SBI ಗ್ರಾಹಕರೇ ಗಮನಿಸಿ, ನೆಟ್ ಬ್ಯಾಂಕಿಂಗ್ ನೋಂದಣಿ ಮನೆಯಲ್ಲೇ ಕುಳಿತು ಮಾಡ್ಬಹುದು, ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Apr 28, 2023, 7:14 PM IST

ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ನೀವು ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಮಾಡ್ಬಹುದು.ಎಸ್ ಬಿಐ ವೆಬ್ ಸೈಟ್ ನಲ್ಲಿ ನೀವು ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.ಆದರೆ,ನೀವು ಮೊಬೈಲ್ ನಂಬರ್‌ ಅನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿರಬೇಕು. ಹಾಗೆಯೇ ಎಟಿಎಂ ಕಾರ್ಡ್ ಕೂಡ ಹೊಂದಿರಬೇಕು.


Business Desk:ಎಸ್ ಬಿಐ ಖಾತೆ ಹೊಂದಿರೋರು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಆನ್ ಲೈನ್ ನಲ್ಲೇ ಸಕ್ರಿಯಗೊಳಿಸಬಹುದು. ಇನ್ನು ಒಮ್ಮೆ ನೀವು ಎಸ್ ಬಿಐ ನೆಟ್ ಬ್ಯಾಂಕಿಂಗ್ ಗೆ ನೋಂದಣಿ ಮಾಡಿಸಿದರೆ  ಮೊಬೈಲ್ ಗಳು, ಪಿಸಿಗಳು ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಈ ಸೌಲಭ್ಯವನ್ನು ಬಳಸಬಹುದು. ಇನ್ನು ಎಸ್ ಬಿಐ ನೆಟ್ ಬ್ಯಾಂಕಿಂಗ್ ಮೂಲಕ ನೀವು ಅನೇಕ ಸೇವೆಗಳನ್ನು ಪಡೆಯಬಹುದು. ಬ್ಯಾಂಕ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡೋದು, ಹಣ ಕಳುಹಿಸೋದು, ಎಟಿಎಂ ಕಾರ್ಡ್ ಸಕ್ರಿಯಗೊಳಿಸೋದು, ಡಿಜಿಟಲ್ ಉಳಿತಾಯ ಖಾತೆ ತೆರೆಯೋದು ಹಾಗೂ ಚೆಕ್ ಪುಸ್ತಕಕ್ಕೆ ಮನವಿ ಮಾಡೋದು ಮುಂತಾದ ಅನೇಕ ಸೇವೆಗಳನ್ನು ನೆಟ್ ಬ್ಯಾಂಕಿಂಗ್ ಮೂಲಕ ಪಡೆಯಬಹುದು. ಹೀಗಾಗಿ ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದರೆ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ಸಂಬಂಧಿ ಕೆಲಸಗಳನ್ನು ಪೂರ್ಣಗೊಳಿಸಬಹುದು.

ಆನ್ ಲೈನ್ ನಲ್ಲಿ ನೆಟ್ ಬ್ಯಾಂಕಿಂಗ್ ಸಕ್ರಿಯಗೊಳಿಸೋದು ಹೇಗೆ?
*ಎಸ್ ಬಿಐ ವೆಬ್ ಸೈಟ್ retail.onlinesbi.sbi/retail/login.htm ಭೇಟಿ ನೀಡಿ.
*ಆ ಬಳಿಕ ‘Personal Banking’ವಿಭಾಗಕ್ಕೆ ತೆರಳಿ ‘Continue To Login’ಆಯ್ಕೆ ಮಾಡಿ.
*‘Continue to Login’ ಮೇಲೆ ಕ್ಲಿಕ್ ಮಾಡಿ. ಹಾಗೆಯೇ ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆಯ ಟರ್ಮ್ ಆಫ್ ಸರ್ವೀಸಸ್ ಮೇಲೆ ಕ್ಲಿಕ್ ಮಾಡಿ.
*‘New User? Register here/Activate’ ಆಯ್ಕೆ ಕ್ಲಿಕ್ ಮಾಡಿ.
*‘New User Registration'ಆಯ್ಕೆ ಮಾಡಿ.

Tap to resize

Latest Videos

Bank Holidays: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ಕ್ಲೋಸ್; ಇಲ್ಲಿದೆ RBI ರಜಾಪಟ್ಟಿ

* ಎಸ್ ಬಿಐ ಖಾತೆ ಸಂಖ್ಯೆ, ಸಿಐಎಫ್ ಸಂಖ್ಯೆ, ಶಾಖೆ ಕೋಡ್, ದೇಶ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ಅನ್ನು ನೋಂದಣಿ ಪುಟದಲ್ಲಿ ನಮೂದಿಸಿ.
*‘Full transaction rights’ ಆಯ್ಕೆ ಮಾಡಿ. ಆ ಬಳಿಕ ‘I Agree’ಮೇಲೆ ಕ್ಲಿಕ್ ಮಾಡಿ ‘Submit’ ಕ್ಲಿಕಿಸಿ.
*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದ ಬಳಿಕ ಅದನ್ನು ನಮೂದಿಸಿ ‘Confirm’ಬಟನ್ ಮೇಲೆ ಕ್ಲಿಕ್ ಮಾಡಿ.
* ಈ ಪ್ರಕ್ರಿಯೆ ಪೂರ್ಣಗೊಳಿಸಲು ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ-ಒಂದು ‘I have my ATM card’ ಹಾಗೂ ಇನ್ನೊಂದು ‘I do not have my ATM card'.
*‘I have my ATM card’ಆಯ್ಕೆ ಮಾಡಿ. ಆ ಬಳಿಕ ಎಟಿಎಂ ಕಾರ್ಡ್ ಮಾಹಿತಿಗಳನ್ನು ಭರ್ತಿ ಮಾಡಿ.
*submit ಮೇಲೆ ಕ್ಲಿಕ್ ಮಾಡಿ. ನಿಮ್ಮ ತಾತ್ಕಾಲಿಕ ಯೂಸರ್ ನೇಮ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಎಸ್ ಬಿಐ ನೆಟ್ ಬ್ಯಾಂಕಿಂಗ್ ಆನ್ ಲೈನ್ ನೋಂದಣಿಗೆ ಎಟಿಎಂ ಕಾರ್ಡ್ ಅಗತ್ಯ. ಇಲ್ಲವಾದ್ರೆ ನೀವು ನೆಟ್ ಬ್ಯಾಂಕಿಂಗ್ ನೋಂದಣಿಗೆ ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರಕ್ಕೆ 840 ಕೋಟಿ ರು. ಲಾಭ

SBI ಖಾತೆ ಹೊಂದಿರುವ ಗ್ರಾಹಕರು, ಇದುವರೆಗೆ ನೆಟ್‌ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡದ ಗ್ರಾಹಕರು ಈ ಸುಲಭ ವಿಧಾನದ ಮೂಲಕ ನೋಂದಣಿ ಮಾಡಿಕೊಳ್ಳಬುಹುದು. SBI ಗ್ರಾಹಕರು ತಮ್ಮ ಮೊಬೈಲ್ ನಂಬರ್‌ನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿರಬೇಕು(ಖಾತೆ ಆರಂಭಿಸುವಾಗ ಮೊಬೈಲ್ ನಂಬರ್ ದಾಖಲಿಸಿಕೊಂಡಿರುತ್ತಾರೆ). ಒಂದು ವೇಳೆ ಮಾಡಿಲ್ಲದಿದ್ದರೆ ಮತ್ತೊಮ್ಮೆ ಮೊಬೈಲ್ ನಂಬರ್ ನೀಡಬೇಕು) SBI ಬ್ಯಾಂಕ್ ಎಟಿಂ ಕಾರ್ಡ್ ಇರಬೇಕು. ಅಷ್ಟೇ ಅಲ್ಲ, ಈ ಮೊದಲು ಆನ್‌ಲೈನ್ ಬ್ಯಾಂಕಿಂಗ್ ಸೇವೆಗೆ ಅರ್ಜಿ ಸಲ್ಲಿಸಿರಬಾರದು.
 

click me!