SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿ ದರ ಏರಿಕೆ!

Published : Nov 28, 2018, 03:52 PM ISTUpdated : Nov 28, 2018, 03:54 PM IST
SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿ ದರ ಏರಿಕೆ!

ಸಾರಾಂಶ

ಎಸ್‌ಬಿಐ ಗ್ರಾಹಕರಿಗೆ ಭಾರೀ ಸಿಹಿ ಸುದ್ದಿ ನೀಡಿದ ಬ್ಯಾಂಕ್! ನಿಶ್ಚಿತ ಠೇವಣಿ ಬಡ್ಡಿದರದಲ್ಲಿ ಗಮನಾರ್ಹ ಏರಿಕೆ! ಹೊಸ ಠೇವಣಿ ಬಡ್ಡಿದರಗಳು ಇಂದಿನಿಂದಲೇ ಜಾರಿಗೆ! ಸಾಮಾನ್ಯ ಮತ್ತು ಹಿರಿಯ ನಾಗರಿಕರ ಠೇವಣಿಗೆ ಹೆಚ್ಚಿನ ಬಡ್ಡಿದರ

ನವದೆಹಲಿ(ನ.28): ದೇಶದ ಸಾರ್ವಜನಿಕ ವಲಯದ ಅತ್ಯಂತ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ತನ್ನ ನಿಶ್ಚಿತ ಠೇವಣಿ ಬಡ್ಡಿದರದಲ್ಲಿ ಗಮನಾರ್ಹ ಏರಿಕೆ ಮಾಡಿದೆ. ಶೇ. 0.05 ರಿಂದ ಶೇ. 0.10ರ ವರೆಗೆ ಅಥವಾ 5 ರಿಂದ 10 ಪಾಯಿಂಟ್ಸ್ ಗಳ ವರೆಗೆ ಬಡ್ಡಿದರದಲ್ಲಿ ಏರಿಕೆಯಾಗಿದೆ.

ಒಂದು ಕೋಟಿ ರೂ.ಒಳಗಿನ ಮೊತ್ತದ ನಿಶ್ಚಿತ ಠೇವಣಿಗೆ ಹೊಸ ಬಡ್ಡಿದರಗಳು ಅನ್ವಯವಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ. ನೂತನ ಬಡ್ಡಿದರ ಇಂದಿನಿಂದಲೇ ಜಾರಿಗೆ ಬರಲಿದ್ದು, ಸಾಮಾನ್ಯ ಮತ್ತು ಹಿರಿಯ ನಾಗರಿಕರ ಠೇವಣಿಗಳ ಬಡ್ಡಿದರದಲ್ಲಿ ಗಮನಾರ್ಹ ಏರಿಕೆ ಮಾಡಲಾಗಿದೆ.

ಅದರಂತೆ ಸಾಮಾನ್ಯ ಗ್ರಾಹಕರ ಠೇವಣಿಗಳ ನೂತನ ಬಡ್ಡಿದರಗಳತ್ತ ಗಮನ ಹರಿಸುವುದಾದರೆ..

ಅವಧಿ-ಹಳೆಯ ಬಡ್ಡಿದರ-ಹೊಸ ಬಡ್ಡಿದರ

7 ರಿಂದ 45 ದಿನಗಳು-5.75-5.75

46 ರಿಂದ 179 ದಿನಗಳು-6.25-6.25

180 ರಿಂದ 210 ದಿನಗಳು-6.35-6.35

211 ರಿಂದ 1 ವರ್ಷದ ಒಳಗೆ-6.4-6.4

1 ವರ್ಷದಿಂದ 2 ವರ್ಷದ ಒಳಗೆ-6.7-6.8

2 ವರ್ಷದಿಂದ 3 ವರ್ಷಗಳ ಒಳಗೆ-6.75 -6.8

3 ರಿಂದ 5 ವರ್ಷಗಳ ಒಳಗೆ-6.8-6.8

5 ವರ್ಷದಿಂದ 10 ವರ್ಷಗಳ ಒಳಗೆ-6.85-6.85

ಅದರಂತೆ ಹಿರಿಯ ನಾಗರಿಕರ ಠೇವಣಿಗಳ ನೂತನ ಬಡ್ಡಿದರಗಳತ್ತ ಗಮನ ಹರಿಸುವುದಾದರೆ..

ಅವಧಿ-ಹಳೆಯ ಬಡ್ಡಿದರ-ಹೊಸ ಬಡ್ಡಿದರ

7 ರಿಂದ 45 ದಿನಗಳು-6.25-6.25

46 ರಿಂದ 179 ದಿನಗಳು-6.75-6.75

180 ರಿಂದ 210 ದಿನಗಳು-6.85-6.85

211 ರಿಂದ 1 ವರ್ಷದ ಒಳಗೆ-6.9-6.9

1 ವರ್ಷದಿಂದ 2 ವರ್ಷದ ಒಳಗೆ-7.2-7.3

2 ವರ್ಷದಿಂದ 3 ವರ್ಷಗಳ ಒಳಗೆ-7.25-7.3

3 ರಿಂದ 5 ವರ್ಷಗಳ ಒಳಗೆ-7.3-7.3

5 ವರ್ಷದಿಂದ 10 ವರ್ಷಗಳ ಒಳಗೆ-7.35-7.35

ಇದೇ ವೇಳೆ ಎಸ್‌ಬಿಐ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಈ ಮೇಲಿನ ಬಡ್ಡಿದರಕ್ಕಿಂತ ಶೇ.1 ರಷ್ಟು ಹೆಚ್ಚಿನ ಬಡ್ಡಿದರ ಅನ್ವಯವಾಗುತ್ತದೆ ಎಂದು ಎಸ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!