ಕೇವಲ 2 ವರ್ಷದಲ್ಲಿ ಹೊಸ 2,000 ನೋಟ್ ಅನುಪಯುಕ್ತ?

By Web DeskFirst Published Nov 28, 2018, 2:40 PM IST
Highlights

ಹೊಸ ನೋಟುಗಳಲ್ಲಿ ಇಷ್ಟು ಬೇಗ ಕಾಣಿಸಿಕೊಳ್ತಾ ಪ್ರಾಬ್ಲಂ?! ಅಪನಗದೀಕರಣದ ಬಳಿಕ ಜಾರಿಗೆ ತರಲಾಗಿದ್ದ ಹೊಸ ನೋಟುಗಳು! 2,000 ಮತ್ತು 500 ನೋಟುಗ ಗುಣಮಟ್ಟ ಕಳಪೆಯಾಗಿದೆಯೇ?! ಎಟಿಎಂ ಸೆನ್ಸಾರ್‌ಗಳಿಗೆ ಹರಿದ ನೋಟುಗಳ ಪತ್ತೆ ಕಷ್ಟ! ಹೊಸ ನೋಟುಗಳ ಗುಣಮಟ್ಟ ಉತ್ತಮವಾಗಿದೆ ಎಂದ ಕೇಂದ್ರ
 

ನವದೆಹಲಿ(ನ.28): ಅಪನಗದೀಕರಣದ ಬಳಿಕ ಜಾರಿಗೆ ತರಲಾಗಿದ್ದ 2,000 ಮತ್ತು 500 ರೂ. ಹೊಸ ನೋಟುಗಳು ಅನುಪಯುಕ್ತವಾಗುತ್ತಿವೆ ಎಂದು ಹೇಳಲಾಗಿದೆ.

ಹೊಸ ನೋಟುಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಹರಿದ ನೋಟುಗಳ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಹೊಸ ನೋಟುಗಳ ಗುಣಮಟ್ಟಕ್ಕೆ ಹೋಲಿಸಿದರೆ ಹಳೆಯ 1,000 ಮತ್ತು 500 ರೂ. ಮುಖಬೆಲೆಯ ನೋಟುಗಳ ಗುಣಮಟ್ಟ ಅತ್ಯಂತ ಉತ್ತಮವಾಗಿತ್ತು ಎಂದು ವರದಿಯೊಂದು ಹೇಳಿದೆ.

Latest Videos

ಇನ್ನು ಕಳಪೆ ಗುಣಮಟ್ಟದ ಕಾರಣಕ್ಕೆ ಬಹುತೇಕ 2,000 ಮತ್ತು 500 ರೂ. ಮುಖಬೆಲೆಯ ನೋಟುಗಳು ಎಟಿಎಂನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ ಎಂದೂ ಹೇಳಲಾಗಿದೆ. ಕಾರಣ ಹರಿದ ನೋಟುಗಳು ಎಟಿಎಂ ಸೆನ್ಸಾರ್‌ಗೆ ಗುರುತು ಸಿಗದೇ ಜನ ತೊಂದರೆ ಅನುಭವಿಸುವಂತಾಗಿದೆ.

ಆದರೆ ಕೇಂದ್ರ ಸರ್ಕಾರ ಈ ಆರೋಪವನ್ನು ನಿರಂತರವಾಗಿ ತಳ್ಳಿ ಹಾಕುತ್ತಲೇ ಬಂದಿದ್ದು, ಹೊಸ ನೋಟುಗಳ ಗುಣಮಟ್ಟ ಉತ್ತಮವಾಗಿದೆ ಎಂದೇ ವಾದಿಸುತ್ತಿದೆ. ಅಲ್ಲದೇ ನಕಲಿ ನೋಟುಗಳ ಹಾವಳಿ ತಪ್ಪಿಸಲು ಈ ನೋಟುಗಳಲ್ಲಿ ಅತ್ಯಾಧುನಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

click me!