
ನವದೆಹಲಿ(ಆ.1): ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಎಫ್ ಡಿ ಮೇಲಿನ ಬಡ್ಡಿ ದರವನ್ನು ಶೇ. 0.05 ದಿಂದ ಶೇ 0.1 ರಷ್ಟು ಏರಿಕೆ ಮಾಡಲಾಗಿದ್ದು, ಜುಲೈ 30 ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ.
ಬಡ್ಡಿ ಆದಾಯ ನೆಚ್ಚಿಕೊಂಡಿರುವ ಹಿರಿಯ ನಾಗರಿಕರು ಮತ್ತು ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಎಸ್‌ಬಿಐ ತಿಳಿಸಿಸದೆ. 1-2 ವರ್ಷದ ಅವಧಿಯ 1 ಕೋಟಿ ರೂ. ಒಳಗಿನ ಎಫ್ ಡಿಗೆ ಸಾಮಾನ್ಯ ನಾಗರಿಕರಿಗೆ ಶೇ. 6.65 ರಿಂದ ಶೇ. 6.70ಕ್ಕೆ ಏರಿಕೆ ಮಾಡಲಾಗಿದೆ.
2 ರಿಂದ 3 ವರ್ಷದ ಅವಧಿಯ ಠೇವಣಿಗೆ ಶೇ. 6.65 ರಿಂದ ಶೇ.6.75, 3 ರಿಂದ 5 ವರ್ಷದ ಅವಧಿಯ ಠೇವಣಿಗೆ ಶೇ.6.7ರಿಂದ ಶೇ.6.8, 5 ರಿಂದ 10 ವರ್ಷ ಅವಧಿಯ ಠೇವಣಿಗೆ ಶೇ. 6.75 ರಿಂದ ಶೇ. 6.85ರವರೆಗೆ ಬಡ್ಡಿದರ ಏರಿಕೆ ಮಾಡಿದೆ.
ಇದೇ ವೇಳೆ ಹಿರಿಯ ನಾಗರಿಕರಿಗೆ 1-2 ವರ್ಷದ ಠೇವಣಿಗೆ ಶೇ. 7.15 ರಿಂದ ಶೇ. 7.25ಕ್ಕೆ ಏರಿಕೆ ಮಾಡಲಾಗಿದೆ. 2 ರಿಂದ 3 ವರ್ಷದ ಅವಧಿಯ ಠೇವಣಿಗೆ ಶೇ. 7.15 ರಿಂದ ಶೇ.7.25, 3 ರಿಂದ 5 ವರ್ಷದ ಅವಧಿಯ ಠೇವಣಿಗೆ ಶೇ.7.25ರಿಂದ ಶೇ.7.30 ಮತ್ತು 5 ರಿಂದ 10 ವರ್ಷ ಅವಧಿಯ ಠೇವಣಿಗೆ ಶೇ. 7.25 ರಿಂದ ಶೇ 7.35ರವೆಗೆ ಬಡ್ಡಿದರ ಏರಿಕೆ ಮಾಡಿದೆ.
ಇಷ್ಟೇ ಅಲ್ಲದೇ ಎಸ್‌ಬಿಐ ನಿವೃತ್ತ ಉದ್ಯೋಗಿಗಳಿಗೆ ಹೆಚ್ಚಿನ ಬಡ್ಡಿದರ ನಿಗದಿಗೊಳಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.