
ನವದೆಹಲಿ[ಅ.2] ಹಣದುಬ್ಬರ ನಿಯಂತ್ರಣ ಹಾಗೂ ಹೆಚ್ಚುತ್ತಿರುವ ಚಾಲ್ತಿಕೊರತೆಯನ್ನು ನೀಗಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಕೆಲ ನೀತಿಗಳ ಪರಿಣಾಮ ಈಗ ಗೊತ್ತಾಗಿದೆ.
ಆರ್ ಬಿಐ ಗಾಗಲೇ ಎರಡು ಬಾರಿ ರೆಪೋರೇಟ್ ಏರಿಕೆ ಮಾಡಿದೆ. ಪರಿಣಾಮ ಪ್ರಮುಖ ಬ್ಯಾಂಕ್ಗಳಾದ ಎಸ್ಬಿಐ, ಐಸಿಐಸಿಐ ಮತ್ತು ಹೆಚ್ಡಿಎಫ್ಸಿ ನೀಡಿದ್ದ ಮತ್ತು ನೀಡುವ ಸಾಲಗಳ ಬಡ್ಡಿದರ ಹೆಚ್ಚಿಗೆ ಆಗಲಿದೆ.
ಮನೆ ಸಾಲ, ಆಟೋ ಮತ್ತು ಇನ್ನಿತರ ಸಾಲಗಳ ಮೇಲೆ ಈ ಮೂರೂ ಪ್ರಮುಖ ಬ್ಯಾಂಕ್ಗಳು ಸೋಮವಾರದಿಂದಲೇ ಬಡ್ಡಿದರ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ. ಎಸ್ಬಿಐ ಶೇ 8.50ಕ್ಕೆ ತನ್ನ ಬಡ್ಡಿದರ ಪ್ರಮಾಣವನ್ನ ಏರಿಕೆ ಮಾಡಿದೆ. 5 ಬೇಸಿಸ್ ಪಾಯಿಂಟ್ಗಳಷ್ಟು ಬಡ್ಡಿದರವನ್ನ ಏರಿಕೆ ಮಾಡಿದೆ. ಅತ್ತ ಐಸಿಐಸಿಐ 10 ರಷ್ಟು ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆ ಮಾಡಿದೆ. ಈಗ ಅದರ ಬಡ್ಡಿದರ ಶೇ 8.65 ರಷ್ಟಿದೆ. ಹೆಚ್ಡಿಎಫ್ಸಿ ಸಹ 10 ಬೇಸಿಕ್ ಪಾಯಿಂಟ್ಗಳಷ್ಟು ಏರಿಕೆ ಮಾಡಿದೆ. ಹೊಸ ಬಡ್ಡಿದರ ಶೇ 8.85 ರಷ್ಟಿದೆ.
ಇನ್ನು ಮಿತಿಯಲ್ಲೂ ವ್ಯತ್ಯಾಸ ಮಾಡಲಾಗಿದ್ದು 30 ಲಕ್ಷದ ವರೆಗಿನ ಗೃಹ ಸಾಲಕ್ಕೆ ಶೇ 8.85 ರಷ್ಟಿದ್ದರೆ, 75 ಲಕ್ಷದವರೆಗಿನ ಸಾಲಕ್ಕೆ ಶೇ 9 ರಷ್ಟು ಬಡ್ಡಿದರವನ್ನ ನಿಗದಿ ಮಾಡಲಾಗಿದೆ. ಹಾಗಾಗಿ ಗೃಹ ಸಾಳ ಹೊಂದಿರುವವರು ಹೆಚ್ಚಿನ ಹಣವನ್ನು ಬಡ್ಡಿ ರೂಪದಲ್ಲಿ ಕಟ್ಟಬೇಕಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.