SBI ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ!

By Web DeskFirst Published May 11, 2019, 10:11 AM IST
Highlights

ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ? ಇಲ್ಲಿದೆ ವಿವರ

ನವದೆಹಲಿ[ಮೇ.11]: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಗೃಹ ಸಾಲದ ಬಡ್ಡಿ (ಎಂಸಿಎಲ್‌ಆರ್‌) ದರಗಳನ್ನು ಶುಕ್ರವಾರ ಶೇ.0.05ರಷ್ಟುಅಂದರೆ ಶೇ 8.50ರಿಂದ ಶೇ.8.45ಕ್ಕೆ ಇಳಿಕೆ ಮಾಡಿದೆ. ಹೀಗಾಗಿ ಗೃಹ ಸಾಲ ಸೇರಿದಂತೆ ಎಲ್ಲಾ ಸಾಲದ ಮೇಲಿನ ಬಡ್ಡಿದರ ಮೇ 10ರಿಂದ ಅನ್ವಯವಾಗುವಂತೆ ಶೇ.0.05ರಷ್ಟುಕಡಿತಗೊಂಡಿದೆ.

ಏ.10ರ ಬಳಿಕ ಇದುವರೆಗೆ ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಶೇ.0.15ರಷ್ಟುಇಳಿಕೆಯಾಗಿದೆ. ಇದೇ ವೇಳೆ 2018-​19ನೇ ಸಾಲಿನ ನಾಲ್ಕನೇ ತ್ರೈಮಾಸಿಕ (ಜನವರಿ- ಮಾಚ್‌ರ್‍) ದ ಅವಧಿಯಲ್ಲಿ ಎಸ್‌ಬಿಐ 838.40 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಇದೇ ಅವಧಿಯಲ್ಲಿ ಬ್ಯಾಂಕಿನ ಆದಾಯ ಶೇ.11ರಷ್ಟು ಏರಿಕೆಯಾಗಿದ್ದು, 75,670.50 ರು.ತಲುಪಿದೆ.

ಒಟ್ಟಾರೆಯಾಗಿ 2018​-19ನೇ ಸಾಲಿನ ಹಣಕಾಸು ವರ್ಷದಲ್ಲಿ ಎಸ್‌ಬಿಐ 3,069 ರು. ಲಾಭ ಗಳಿಸಿದಂತಾಗಿದೆ. 2017-​18ನೇ ಸಾಲಿನಲ್ಲಿ ಎಸ್‌ಬಿಐ 4,187 ಕೋಟಿ ರು. ನಷ್ಟ ಅನುಭವಿಸಿತ್ತು.

click me!