3 ಶತಕೋಟಿ ಡಾಲರ್ ಸಂಗ್ರಹಕ್ಕೆ ಮುಂದಾದ ಎಸ್‌ಬಿಐ; ಹಣ ಕ್ರೋಢೀಕರಣ ಹಿಂದಿನ ರಹಸ್ಯ ಏನು?

By Mahmad RafikFirst Published Jun 12, 2024, 3:29 PM IST
Highlights

ಅಂತಿಮವಾಗಿ ಬ್ಯಾಂಕ್ ಈ ಹಣವನ್ನು ಯುಎಸ್ ಡಾಲರ್ ಅಥವಾ ವಿದೇಶಿ ಕರೆನ್ಸಿಗಳಲ್ಲಿ ಪರಿವರ್ತಿಸಿಕೊಂಡು ತನ್ನಲ್ಲಿ ಉಳಿಸಿಕೊಳ್ಳುವ ಮಹತ್ವದ ಯೋಜನೆಯನ್ನು ಎಸ್‌ಬಿಐ ಹೊಂದಿದೆ ಎಂದು ವರದಿಯಾಗಿದೆ .

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಈ ಆರ್ಥಿಕ ವರ್ಷದಲ್ಲಿ 3 ಶತಕೋಟಿ ಡಾಲರ್ ಸಂಗ್ರಹಣೆ ಮಾಡಲು ನಿರ್ಧರಿಸಿದೆ. ಅಂದ್ರೆ ಬರೋಬ್ಬರಿ 25,084 ಕೋಟಿ ರೂಪಾಯಿ ಸಂಗ್ರಹಣೆ ಯೋಜನೆಗೆ ಅನುಮೋದನೆ ನೀಡಿದೆ. ಇಷ್ಟು ದೊಡ್ಡ ಮೊತ್ತವನ್ನು (Fund Collection) ಸಾರ್ವಜನಿಕರಿಂದ ಸಾಲ ಸೇರಿದಂತೆ ವಿವಿಧ ರೂಪದಲ್ಲಿ ಸಂಗ್ರಹಣೆ ಮಾಡಲು ಎಸ್‌ಬಿಐ ನಿರ್ಧರಿಸಿದೆ. ಈ ಮೊತ್ತವನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ಹಂತಗಳಲ್ಲಿ ಸಂಗ್ರಹಿಸಬಹುದು. ಸಾರ್ವಜನಿಕರಿಂದ ಅಥವಾ ಹಿರಿಯ ನಾಗರಿಕರಿಗೆ ವಿಶೇಷ ಯೋಜನೆಗಳನ್ನು ಪರಿಚಯಿಸುವ ಮೂಲಕವಾಗಿಯೂ ಹಣ ಸಂಗ್ರಹಕ್ಕೆ ಮುಂದಾಗಬಹುದು. ಅಂತಿಮವಾಗಿ ಬ್ಯಾಂಕ್ ಈ ಹಣವನ್ನು ಯುಎಸ್ ಡಾಲರ್ ಅಥವಾ ವಿದೇಶಿ ಕರೆನ್ಸಿಗಳಲ್ಲಿ ಪರಿವರ್ತಿಸಿಕೊಂಡು ತನ್ನಲ್ಲಿ ಉಳಿಸಿಕೊಳ್ಳುವ ಮಹತ್ವದ ಯೋಜನೆಯನ್ನು ಎಸ್‌ಬಿಐ ಹೊಂದಿದೆ ಎಂದು ವರದಿಯಾಗಿದೆ .

ಬಂಡವಾಳ ಸಂಗ್ರಹಣೆ ಯಾಕೆ?

Latest Videos

ಹಣವನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಣೆ ಮಾಡಲು ಮುಂದಾಗಿದೆ ಎಂದು ಎಸ್‌ಬಿಐ ಹೇಳಿಕೊಂಡಿಲ್ಲ. ಸದ್ಯ ದೇಶದಲ್ಲಿ ಸಾರ್ವಜನಿಕ ವಲಯದಿಂದ ಸಾಲದ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಬಂಡವಾಳ ಸಂಗ್ರಹಿಸಿ ಸಾಲದ ಪೂರೈಕೆಯನ್ನು ನಿಭಾಯಿಸಲು ಭಾರತದ ಬ್ಯಾಂಕ್‌ಗಳು ಸಾರ್ವಜನಿಕ ವಲಯದಿಂದಲೇ ಬಂಡವಾಳ ಕ್ರೋಢೀಕರಣಕ್ಕೆ ಮುಂದಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. 

Electoral Bond: ಲಾಟರಿ ಕಿಂಗ್‌ ಕಂಪನಿಯಿಂದ ಟಿಎಂಸಿಗೆ 542 ಕೋಟಿ, ಬಿಜೆಪಿಗೆ 'ಮೇಘಾ' ಗರಿಷ್ಠ ಡೋನರ್‌!

ಇತರೆ ಬ್ಯಾಂಕ್‌ಗಳಿಂದಲೂ ಬಂಡವಾಳ ಸಂಗ್ರಹಣೆ ಸಾಧ್ಯತೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾದರಿಯಲ್ಲಿಯೇ ಕೆನರಾ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಬಂಡವಾಳ ಸಂಗ್ರಹಕ್ಕೆ ಮುಂದಾಗಲಿವೆ ಎಂದು ವರದಿಗಳು ಪ್ರಕಟವಾಗುತ್ತಿವೆ. ಈ ಬ್ಯಾಂಕ್‌ಗಳು ಎಸ್‌ಬಿಐಗಿಂತ ಅಧಿಕ ಅಥವಾ ಕಡಿಮೆ ಬಂಡವಾಳ ಸಂಗ್ರಹಣೆ ಮಾಡಬಹುದು ಎಂದು ಅನುಮಾನಿಸಲಾಗಿದೆ. 

ಜನವರಿಯಲ್ಲಿ 50 ಬಿಲಿಯನ್ ರೂಪಾಯಿ ಸಂಗ್ರಹ

2024 ಜನವರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ ಬಾಸೆಲ್ III-ಕಂಪ್ಲೈಂಟ್ ಹೆಚ್ಚುವರಿ ಟೈರ್-1 ಪರ್ಪೆಚುಯಲ್ ಬಾಂಡ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ 50 ಬಿಲಿಯನ್ ರೂಪಾಯಿ (600 ಮಿಲಿಯನ್ ಡಾಲರ್) ಹಣವನ್ನು ಯಶಸ್ವಿಯಾಗಿ ಸಂಗ್ರಹ ಮಾಡಿತ್ತು. ಇಷ್ಟು ಬಂಡವಾಳ ಸಂಗ್ರಹಿಸಿದ್ದರೂ ಬ್ಯಾಂಕ್ ಮತ್ತಷ್ಟು ಹಣ ಸಂಗ್ರಹಿಸಲಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಸುಳಿವು ನೀಡಿದ್ದರು. ಬ್ಯಾಂಕ್ ತನ್ನ ಬೆಳವಣಿಗೆಗಾಗಿ ಈಕ್ವಿಟಿ ಶೇರುಗಳ ಮೂಲಕ ಬಂಡವಾಳ ಸಂಗ್ರಹಿಸಲು ಸಿದ್ಧವಾಗಿದೆ ಎಂದು ಮಾಹಿತಿ ನೀಡಿದ್ದರು. ಇನ್ನು ಶೇರು ಮಾರುಕಟ್ಟೆಯಲ್ಲಿ ಮಂಗಳವಾರ ಎಸ್‌ಬಿಐ ಶೇರುಗಳ ಬೆಲೆಯಲ್ಲಿ ಶೇ.0.8ರಷ್ಟು ಏರಿಕೆ ಕಂಡಿತ್ತು. ವರ್ಷದ ಆರಂಭದಿಂದ ಇಲ್ಲಿಯವರೆಗೆ ಎಸ್‌ಬಿಐ ಶೇರುಗಳಲ್ಲಿ ಶೇ.30.5ರಷ್ಟು ಏರಿಕೆಯನ್ನು ಹೊಂದಿವೆ.

1994ರಲ್ಲಿ 500 ರೂ ಷೇರು ಖರೀದಿಸಿ ಮರತೇಬಿಟ್ಟಿದ್ದ ಡಾಕ್ಟರ್, ಮೊಮ್ಮಗನಿಗೆ ಜಾಕ್‌ಪಾಟ್ ಮೊತ್ತ!

click me!