ಒಂದೇ ವರ್ಷದಲ್ಲಿ ತಮ್ಮ ಕಂಪನಿಯ ಮೌಲ್ಯದಲ್ಲಿ ಶೇ. 35ರಷ್ಟು ಏರಿಕೆ ಕಂಡಿದ್ದರಿಂದ ಭಾರತದ ಶ್ರೀಮಂತ ಮಹಿಳೆಯರ ಲಿಸ್ಟ್‌ನಲ್ಲಿ ಕಾಂಗ್ರೆಸ್ ನಾಯಕಿ 7ನೇ ಸ್ಥಾನಕ್ಕೇರಿದ್ದಾರೆ, ವಿಶೇಷವೆಂದರೆ, ದೇಶದ ಅಗ್ರ 10 ಕೋಟ್ಯಧಿಪತಿಗಳ ಲಿಸ್ಟ್‌ನಲ್ಲಿರುವ ಏಕೈಕ ಮಹಿಳೆ ಇವರಾಗಿದ್ದಾರೆ.
ನವದೆಹಲಿ (ಅ.4): ಒಂದೇ ವರ್ಷದಲ್ಲಿ ಕಂಪನಿಯ ಮೌಲ್ಯದಲ್ಲಿ ಆದ ಶೇ.35ರಷ್ಟು ಏರಿಕೆಯೊಂದಿಗೆ ಚೀನಾದ ದೇಶದ ಹೊರಗಿನ ಅತೀದೊಡ್ಡ ಉಕ್ಕು ತಯಾರಕ ಕಂಪನಿ ಎನಿಸಿಕೊಂಡಿರುವ ಆರ್ಸೆಲರ್ ಮಿತ್ತಲ್‌ನ ಚೇರ್ಮನ್ ಲಕ್ಷ್ಮೀ ಮಿತ್ತಲ್ ಅವರನ್ನು ಹಿಂದೆ ಹಾಕಿರುವ ಸಾವಿತ್ರಿ ದೇವಿ ಜಿಂದಾಲ್ ದೇಶದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಸಾವಿತ್ರಿ ದೇವಿ ಜಿಂದಾಲ್, ಜಿಂದಾಲ್ ಸ್ಟೀಲ್‌ನ ಚೇರ್ಮನ್ ಮಾತ್ರವಲ್ಲ ಒಪಿ ಜಿಂದಾಲ್ ಅವರ ಪತ್ನಿ. ಅದರೊಂದಿಗೆ ಕಾಂಗ್ರೆಸ್‌ನ ನಾಯಕಿ ಕೂಡ ಹೌದು. ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಈಗ 1.55 ಲಕ್ಷ ಕೋಟಿ ನಿವ್ವಳ ಮೌಲ್ಯದೊಂದಿಗೆ ಭಾರತೀಯ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ. ಇನ್ನು ಆರ್ಸೆಲರ್ ಮಿತ್ತಲ್‌ನ ಚೇರ್ಮನ್ ಲಕ್ಷ್ಮಿ ಮಿತ್ತಲ್ ಅವರ ನಿವ್ವಳ ಮೌಲ್ಯ 1.43 ಲಕ್ಷ ಕೋಟಿ ಆಗಿದ್ದು, 10ನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ 10ನೇ ಸ್ಥಾನದಲ್ಲಿದ್ದ ಸಾವಿತ್ರಿ ದೇವಿ ಜಿಂದಾಲ್, ಕಂಪನಿಯ ಮೌಲ್ಯದಲ್ಲಿ ದೊಡ್ಡ ಮಟ್ಟದ ಏರಿಕೆ ಆಗುವುದರೊಂದಿಗೆ ತಮ್ಮ ಶ್ರೇಯಾಂಕವನ್ನೂ ಏರಿಸಿಕೊಂಡಿದ್ದಾರೆ.
ಸಾವಿತ್ರಿ ದೇವಿ ಜಿಂದಾಲ್ ಅವರು ಚೇರ್ಮನ್ ಆಗಿರುವ ಪ್ರಮುಖ ಸಂಸ್ಥೆ ಜೆಎಸ್‌ಡಬ್ಯು ಸ್ಟೀಲ್, ಅವರ ಸಂಪತ್ತಿನ ಮೂರನೇ ಒಂದು ಭಾಗವನ್ನು ಹೊಂದಿದ್ದರೆ, ಜೆಎಸ್‌ಡಬ್ಲ್ಯು ಎನರ್ಜಿ ಮತ್ತು ಜಿಂದಾಲ್ ಸ್ಟೀಲ್ ಮತ್ತು ಪವರ್‌ನಲ್ಲಿ ಅವರ ಷೇರುಗಳ ಮೌಲ್ಯವು ಕ್ರಮವಾಗಿ 35 ಸಾವಿರ ಕೋಟಿ ಮತ್ತು 25 ಸಾವಿರ ಕೋಟಿ ಆಗಿದೆ. ಜೆಎಸ್‌ಡಬ್ಲ್ಯು ಎನರ್ಜಿಯ ಸ್ಟಾಕ್ 2023 ರಲ್ಲಿ ಇಲ್ಲಿಯವರೆಗೆ 46% ಕ್ಕಿಂತಲೂ ಹೆಚ್ಚು ಲಾಭದಲ್ಲಿದೆ. ಅದರ ನಂತರ ಜಿಂದಾಲ್ ಸ್ಟೀಲ್ & ಪವರ್, ಜನವರಿಯಿಂದ ಇಲ್ಲಿಯವರೆಗೆ ಶೇ. 17ರಷ್ಟು ಏರಿಕೆ ಕಂಡಿದೆ. ಹಾಗಿದ್ದರೂ, ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು ಮಾರ್ಚ್ ಮತ್ತು ಆಗಸ್ಟ್ 2023 ರ ನಡುವೆ 26% ರಷ್ಟು ಏರಿಕೆಯಾದ ನಂತರ ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದ ವಹಿವಾಟು ನಡೆಸುತ್ತಿದೆ.
undefined
ವರ್ಷದ ಆರಂಭದಿಂದಲೂ ಸುಮಾರು 42 ಸಾವಿರ ಕೋಟಿ ಸಂಪತ್ತನ್ನು ಸಾವಿತ್ರಿ ದೇವಿ ಜಿಂದಾಲ್ ನಿರ್ಮಿಸಿದ್ದಾರೆ. ಇತ್ತೀಚಿನ ನಿವ್ವಳ ಮೌಲ್ಯದ ಏರಿಕೆಯಲ್ಲಿ ಸೈರಸ್ ಪೂನವಾಲ್ಲಾ ನಂತರದ ಸ್ಥಾನದಲ್ಲಿದ್ದಾರೆ. ಸೈರಸ್ ಪೂನವಾಲ್ಲಾ ಅದೇ ಅವಧಿಯಲ್ಲಿ ಅವರ ನಿವ್ವಳ ಮೌಲ್ಯವು 40 ಸಾವಿರ ಕೋಟಿಗಳಷ್ಟು ಏರಿಕೆ ಕಂಡಿದ್ದಾರೆ. ಪೂನವಾಲ್ಲಾ ಅವರು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಜೆಎಸ್‌ಡಬ್ಲ್ಯು ಇನ್‌ಫ್ರಾಸ್ಟ್ರಕ್ಚರ್ ಇತ್ತೀಚೆಗೆ ಷೇರು ಮಾರುಕಟ್ಟೆಯ ಕಾಲಿಟ್ಟಿದೆ. ಮಂಗಳವಾರ ಲಿಸ್ಟಿಂಗ್ ಆಗಿದ್ದ ಈ ಕಂಪನಿ ಬುಧವಾರ 4 ಬಿಲಿಯನ್ ಯುಎಸ್ ಡಾಲರ್ ಮಾರುಕಟ್ಟೆ ಮೌಲ್ಯದ ಗಡಿ ದಾಟಿದೆ.
ಏಷ್ಯಾದ ಶ್ರೀಮಂತ ಪುರುಷ ಮಾತ್ರವಲ್ಲ, ಮಹಿಳೆ ಕೂಡ ಭಾರತೀಯರೆ;ಹುಯಿಯಾನ್ ಹಿಂದಿಕ್ಕಿದ ಸಾವಿತ್ರಿ ಜಿಂದಾಲ್
ಇನ್ನೊಂದೆಡೆ, ಆರ್ಸೆಲರ್ ಮಿತ್ತಲ್ ಷೇರುಗಳು ತಮ್ಮ ಕುಸಿತವನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿದವು. 2022 ರಲ್ಲಿ 18% ನಷ್ಟು ಕುಸಿದ ನಂತರ 2023 ರಲ್ಲಿ ಇದುವರೆಗೆ ಮತ್ತೊಂದು 8% ನಷ್ಟು ಸ್ಟಾಕ್ ಕಳೆದುಕೊಂಡಿದೆ.ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಮಿತ್ತಲ್ ಅವರ ಹೆಚ್ಚಿನ ಸಂಪತ್ತು ಆರ್ಸೆಲರ್ ಮಿತ್ತಲ್‌ನಲ್ಲಿನ 38% ಪಾಲಿನಿಂದ ಬಂದಿದೆ, ಇದು ಮಂಗಳವಾರದ ಹೊತ್ತಿಗೆ $8 ಶತಕೋಟಿಯಷ್ಟಿದೆ.
ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆ; ಕೇವಲ ಎರಡೇ ವರ್ಷಗಳಲ್ಲಿ ಇವರ ಸಂಪತ್ತು ಮೂರು ಪಟ್ಟು ಹೆಚ್ಚಳ