ಸತ್ಯ ನಾದೆಳ್ಲ ಬಾಲ್ಯದಲ್ಲಿ ಕಂಡಿದ್ದ ಕನಸುಗಳೇ ಬೇರೆಯಾಗಿದ್ದವು. ಆದ್ರೆ ಹೇಗೆ ಅವರು ಇಂಜಿನಿಯರಿಂಗ್ ಸೇರಿಕೊಂಡರು ಎಂಬುದರ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ಬೆಂಗಳೂರು: ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಳ್ಲಾ ಸಹ ಬಾಲ್ಯದಲ್ಲಿ ಒಳ್ಳೆಯ ಕ್ರಿಕೆಟರ್ ಆಗಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಕನಸು ಕಂಡಿದ್ದರು. ತದನಂತರ ಎಂಎ ಮಾಡ್ಕೊಂಡು ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ್ರೆ ಲೈಫ್ ಸೆಟಲ್ ಅಂದುಕೊಂಡಿದ್ದರು. ಆದ್ರೆ ಇದೆಲ್ಲಾ ಕನಸುಗಳಿದ್ದರೂ ತಂದೆ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರ ಸತ್ಯ ಅವರ ಜೀವನವನ್ನೇ ಬದಲಿಸಿತ್ತು. ಹೈದರಾಬಾದ್ ಮೂಲದ ಸತ್ಯ ನಾದೆಳ್ಲ, ತನ್ನ ಭಾಗಶಃ ಶಿಕ್ಷಣವನ್ನು ಭಾರತದಲ್ಲಿಯೇ ಪಡೆದುಕೊಂಡಿದ್ದಾರೆ. ಕರ್ನಾಟಕದ ಮಣಿಪಾಲ್ ವಿವಿಯಿಂದ ಪದವಿ ಪಡೆದಿದ್ದಾರೆ. ಸದ್ಯ ಅಮೆರಿಕದಲ್ಲಿ ವಾಸಾಗಿರುವ ಸತ್ಯ ನಾದೆಳ್ಳ, ಹಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದರಾಬಾದ್ ಮೂಲದ ಸತ್ಯ ನಾದೆಳ್ಲಾ 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿ ನೇಮಕವಾಗಿದ್ದರು.
ವೈರಲ್ ಆಗಿರುವ ಸಂದರ್ಶನ
undefined
ನಾನು ಹುಟ್ಟಿದ್ದು ಭಾರತದ ಹೈದರಾಬಾದ್ ನಗರದಲ್ಲಿ. ನಾನು ಚಿಕ್ಕವನಿದ್ದಾಗ ಹೆಚ್ಚು ಕ್ರಿಕೆಟ್ ಆಡುತ್ತಿದ್ದೆ. ನಾನು ಕ್ರಿಕೆಟ್ ಆಡೋದನ್ನು ಕಡಿಮೆ ಮಾಡಿ ಓದಿನ ಕಡೆ ಗಮನ ನೀಡಲಿ ಎಂದು ಪೋಷಕರು ಬಯಸುತ್ತಿದ್ದರು. ನನಗೆ ಕ್ರಿಕೆಟ್ ಅಂತ ಅಂದ್ರೆ ತುಂಬಾ ಇಷ್ಟ. ಕ್ರಿಕೆಟರ್ ಆಗಬೇಕು ಅನ್ನೋದು ನನ್ನ ಬಾಲ್ಯದ ಕನಸುಗಳಲ್ಲಿ ಒಂದಾಗಿತ್ತು. ಆದರೆ ನನ್ನ ತಂದೆ ತೆಗೆದುಕೊಂಡು ಒಂದು ದೊಡ್ಡ ನಿರ್ಧಾರ ನನ್ನ ಇಡೀ ಜೀವನವನ್ನೇ ಬದಲಿಸಿತು. ಹೈದರಾಬಾದ್‌ನಲ್ಲಿ ಅರ್ಥಶಾಸ್ತ್ರ ಅಥವಾ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕು. ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕು ಎಂಬುವುದು ನನ್ನ ಗುರಿಯಾಗಿತ್ತು. ಆದ್ರೆ ನನ್ನ ತಂದೆ ಏನು ಮಾಡ್ತಿದ್ದೀಯಾ ಎಂದು ನನ್ನನ್ನು ಇಂಜಿನಿಯರಿಂಗ್‌ಗೆ ಸೇರಿಸಿದರು. ತಂದೆಯ ಈ ನಿರ್ಧಾರ ನನ್ನ ಸಾಧನೆಯ ಮೊದಲ ಹೆಜ್ಜೆ ಆಗಿತ್ತು. ನನ್ನ ಮಾರ್ಕ್ಸ್ ಕಾರ್ಡ್ ನೋಡಿದ್ರೆ ಇಷ್ಟು ಅಂಕ ಯಾರಾದ್ರೂ ತೆಗೆದುಕೊಳ್ತಾರಾ ಅಂತ ನನಗೆ ಅನ್ನಿಸುತ್ತದೆ. ನನ್ನೊಂದಿಗೆ ತಂದೆ ಇದ್ದು, ಅವರೂ ನಾನಿನ್ನು ಹೆಚ್ಚು ಸಾಧನೆ ಮಾಡಬೇಕೆಂದು ಆಶಿಸುತ್ತಾರೆ ಎಂದು ಸತ್ಯ ನಾದೆಳ್ಲ ಎಂದು ಹೇಳಿಕೊಂಡಿದ್ದಾರೆ.
ಸಿಇಒ ಸುಂದರ್ ಪಿಚೈಗಿಂತಲೂ ಹೆಚ್ಚು ಶ್ರೀಮಂತ, ಬೆಂಗಳೂರಲ್ಲಿ ಕಲಿತ ಈ ಗೂಗಲ್ ಉದ್ಯೋಗಿ
2022ರಲ್ಲಿ ಸತ್ಯ ನಾದೆಳ್ಲಾ ಅವರ ಪುತ್ರ ಝೈನ್ ನಾದೆಳ್ಲಾ (26) ಅನಾರೋಗ್ಯದಿಂದ ಮೃತಪಟ್ಟಿದ್ದರು. ಝೈನ್ ಹುಟ್ಟುವಾಗಲೇ ಸೆರೆಬ್ರಲ್ ಪಾಲ್ಸಿ (ಮೆದುಳು ಸಂಬಂಧಿ ಕಾಯಿಲೆ)ಯೊಂದಿಗೆ ಜನಿಸಿದ್ದರು. ಪುತ್ರನ ಈ ಕಾಯಿಲೆ ತಂತ್ರಜ್ಞಾನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತ್ತು ಎಂದು ಈ ಹಿಂದೆ ಸತ್ಯ ನಾದೆಳ್ಲಾ ಹೇಳಿದ್ದರು.
ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದವುಲೂರಿ ನೇಮಕಗೊಂಡಿದ್ದಾರೆ. ಮದ್ರಾಸ್ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಪವನ್ ಇದಕ್ಕೂ ಮೊದಲು ಮೈಕ್ರೋಸಾಫ್ಟ್ ಸರ್ಫೇಸ್ ಸಿಲಿಕಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ವಿಂಡೋಸ್ ಮುಖ್ಯಸ್ಥ ಪನೋಸ್ ಪಣಯ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಅಮೆಜಾನ್ ಸಂಸ್ಥೆಗೆ ತೆರಳಿದ ಹಿನ್ನೆಲೆಯಲ್ಲಿ ಭಾರತೀಯನನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ಇದರೊಂದಿಗೆ ಮೈಕ್ರೋಸಾಫ್ಟ್‌ನಲ್ಲಿ ಸಿಇಒ ಆಗಿರುವ ಭಾರತೀಯ ಸತ್ಯ ನಾದೆಳ್ಲಾ ಜೊತೆಗೆ ಮತ್ತೊಬ್ಬರು ಅಗ್ರ ಸ್ಥಾನಕ್ಕೇರಿದಂತಾಗಿದೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬೆಂಬಲ: ವಜಾ ಆಗಿದ್ದ ಆಲ್ಟ್‌ಮನ್‌ಗೆ ಮತ್ತೆ ಓಪನ್ ಎಐ ಸಿಇಒ ಸ್ಥಾನ?