
ಮುಂಬೈ(ಸೆ.29): ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ?. ದೇಶದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ, ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಗಳಿಸಿದ ಭಾರತೀಯ ಉದ್ಯಮಿ ಅಂತೆಲ್ಲಾ ನಾವು ಮುಖೇಶ್ ಅಂಬಾನಿ ಅವರನ್ನು ಬಣ್ಣಿಸುತ್ತೇವೆ.
ಆದರೆ ನಮಗ್ಯಾರಿಗೂ ಮುಖೇಶ್ ಅಂಬಾನಿ ಅವರ ಕಾರು ಚಾಲಕನ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ. ಅರೆ! ಅಂಬಾನಿ ಕಾರು ಚಾಲಕನ ಬಗ್ಗೆ ಅದೆಂತಾ ಮಾಹಿತಿ ಅಂತೀರಾ?। ಖಂಡಿತ ಇದೆ ಸ್ವಾಮಿ.
ಅಷ್ಟಕ್ಕೂ ಮುಖೇಶ್ ಅಂಬಾನಿ ಅವರ ಕಾರು ಚಾಲಕನಾಗುವುದು ಅಷ್ಟು ಸುಲಭವಲ್ಲ. ಇದಕ್ಕೆಂದೇ ಕಂಪನಿಯೊಂದು ಚಾಲಕರನ್ನು ತರಬೇತುಗೊಳಿಸುತ್ತದೆ. ಅತ್ಯಂತ ಅನುಭವಿ ಚಾಲಕರನ್ನೇ ಅಂಬಾನಿ ಕುಟುಂಬದ ಕಾರು ಚಾಲಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ.
ಮುಖೇಶ್ ಅಂಬಾನಿ ಬಳಿ ಸುಮಾರು 500 ಕ್ಕೂ ಹೆಚ್ಚು ಕಾರುಗಳಿವೆ. ಅಂಬಾನಿ ಯಾವ ದಿನ ಯಾವ ಕಾರಿನಲ್ಲಿ ಪ್ರಯಾಣ ಮಾಡುತ್ತಾರೆ ಎಂಬುದು ರಹಸ್ಯವಾಗಿಯೇ ಇರುತ್ತದೆ. ಅದರಂತೆ ಅಂಬಾನಿ ಅವರ ಬಳಿ ಅನೇಕ ಕಾರು ಚಾಲಕರಿದ್ದಾರೆ.
ಸ್ಯಾಲರಿ ಎಷ್ಟು?:
ಇನ್ನು ಮುಖೇಶ್ ಅಂಬಾನಿ ಕಾರು ಚಾಲಕರ ವೇತನದ ಕುರಿತು ಮಾತನಾಡುವುದಾದರೆ, ಅಂಬಾನಿ ಅವರ ಪ್ರತಿಯೊಬ್ಬ ಕಾರು ಚಾಲಕ ಕಮ್ಮಿ ಎಂದರೂ 2 ಲಕ್ಷ ರೂ ವೇತನ ಪಡೆಯುತ್ತಾನೆ. ಕೆಲವು ಚಾಲಕರಿಗೆ ಇದಕ್ಕಿಂತ ಹೆಚ್ಚಿನ ವೇತನ ಇದೆ ಎಂಬುದು ಗುಟ್ಟಿನ ವಿಷಯವೇನಲ್ಲ.
ಅಂಬಾನಿ ದಿನಚರಿ, ಅವರು ಯಾವ ದಿನ ಯಾವ ಕಾರು ಬಳಸುತ್ತಾರೆ, ಮುಖೇಶ್ ಅವರೊಂದಿಗೆ ಪ್ರಯಾಣಿಸುವ ವ್ಯಕ್ತಿಗಳ ಕುರಿತು ಈ ಚಾಲಕರಿಗೆ ಮೊದಲೇ ಮಾಹಿತಿ ನೀಡಲಾಗಿರುತ್ತದೆ. ಅದರಂತೆ ಈ ಚಾಲಕರು ನಿತ್ಯವೂ ತಮ್ಮ ಕರ್ತವ್ಯ ನಿಭಾಯಿಸಬೇಕಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.