ಅದೇ ಕತೆ, ನಮಗಷ್ಟೇ ವ್ಯಥೆ: ಮತ್ತೆ ಕುಸಿದ ರೂಪಾಯಿ ಮೌಲ್ಯ!

By Web DeskFirst Published Aug 30, 2018, 11:44 AM IST
Highlights

ಡಾಲರ್ ಎದುರು ಮತ್ತೆ ಕುಸಿತ ಕಂಡ ರೂಪಾಯಿ ಮೌಲ್ಯ! ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳ ಕಾರಣ! ಡಾಲರ್ ಎದುರು ರೂಪಾಯಿ ಮೌಲ್ಯ 70.82 ಕ್ಕೆ ಇಳಿಕೆ! ಕಚ್ಚಾ ತೈಲ ಬೆಲೆ ಏರಿಕೆ ಪ್ರಮುಖ ಕಾರಣ
 

ನವದೆಹಲಿ(ಆ.30): ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಬೆಳವಣಿಗೆ ಇಷ್ಟು ಬೇಗ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಕಾರಣ ಭಾರತದ ರೂಪಾಯಿ ದರ ಮತ್ತೆ  23 ಪೈಸೆಯಷ್ಟು ಕುಸಿತ ದಾಖಲಿಸಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 70.82 ಕ್ಕೆ ಇಳಿದಿದೆ.


ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ದರ ಮತ್ತೆ  23 ಪೈಸೆಯಷ್ಟು ಕುಸಿತ ದಾಖಲಿಸಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 70.82 ಕ್ಕೆ ಇಳಿದಿದೆ.

ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್ ಚ್ಜ಼ೆಂಜ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ಅಂತಿಮವಾಗಿ ಭಾರತೀಯ ರೂಪಾಯಿ ದಾಖಲೆ ಮಟ್ಟದ ಕುಸಿತದೊಡನೆ 70.82 ಕ್ಕೆ ತಲುಪಿದೆ.

Indian now at 70.82 versus the US dollar. pic.twitter.com/dxsplu6MB4

— ANI (@ANI)

ವಿದೇಶಿ ವಿನಿಮಯ ಡೀಲರ್ ಗಳು, ಆಮದುದಾರರ ಖರೀದಿ, ಕಚ್ಚಾ ತೈಲ ಬೆಲೆ, ಮತ್ತು ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ದೇಶೀಯ ಹಣದ ಮಾರುಕಟ್ಟೆಯಲ್ಲಿ ಏರಿಳತವಾಗಿದೆ. ಅಲ್ಲದೆ ವಿದೇಶೀ ಮಾರುಕಟ್ಟೆಯಲ್ಲಿ ವಿದೇಶೀ ಕರೆನ್ಸಿಗಳ ನಡುವೆ ಡಾಲರ್ ನ ಮೌಲ್ಯ ಬಲವರ್ಧನೆ ಸಹ ರೂಪಾಯಿಯ ಮೇಲೆ ಒತ್ತಡ ಹಾಕುತ್ತಿದೆ.

ಇದಕ್ಕೆ ಮುನ್ನ ಡಾಲರ್ ಎದುರು ರೂಪಾಯಿ ಮೌಲ್ಯ 49 ಪೈಸೆ ಕುಸಿತವಾಗಿ 70.59 ರೂ. ಆಗಿತ್ತು. ಏತನ್ಮಧ್ಯೆ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 96.13 ಪಾಯಿಂಟ್ ನೊಂದಿಗೆ 38,819.06 ಕ್ಕೆ ತಲುಪಿದೆ.

click me!