ಡಾಲರ್ ಸಮುದ್ರದಲ್ಲಿ ಮುಳುಗುತ್ತಿರುವ ರೂಪಾಯಿ: ಸಾರ್ವಕಾಲಿಕ ಕುಸಿತ!

By Web DeskFirst Published Aug 14, 2018, 12:28 PM IST
Highlights

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ! ಒಂದು ಡಾಲರ್ ಭಾರತದ 70 ರೂ. ಗೆ ಸಮ! ಡಾಲರ್ ಎದುರು ರೂಪಾಯಿ ಮೌಲ್ಯದ ಸಾರ್ವಕಾಲಿಕ ಕುಸಿತ! ಜಾಗತಿಕ ಪರಿಣಾಮ ಬೀರಿದ ಟರ್ಕಿಯ ಆರ್ಥಿಕ ಅಸ್ಥಿರತೆ

ನವದೆಹಲಿ(ಆ.14): ಅಭಿವೃದ್ಧಿ ವಿಷಯದಲ್ಲಿ ತಮ್ಮ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ದೃಷ್ಟಿಕೋನ ಒಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಮೊನ್ನೆಯಷ್ಟೇ ಹೇಳಿದ್ದರು. ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬೇಕಿದ್ದರೆ ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರವಾಗಿರಬೇಕು.

ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ವಿರುದ್ಧವಾದ ಸಂಗತಿಗಳು ನಡೆಯುತ್ತಿದ್ದು, ಆ.14 ರಂದು ಬೆಳಿಗ್ಗೆ ಪ್ರಾರಂಭವಾದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದೆ. 

ಒಂದು ಅಮೆರಿಕನ್ ಡಾಲರ್ ಭಾರತದ 70 ರೂ.ಗಳಿಗೆ ಸಮಾನವಾಗಿದ್ದು, ಇದು ಡಾಲರ್ ಎದುರು ರೂಪಾಯಿ ಮೌಲ್ಯದ ಸಾರ್ವಕಾಲಿಕ ಕುಸಿತ ಎಂದು ಹೇಳಲಾಗಿದೆ. ಟರ್ಕಿಯಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿದ್ದು, ಇದು ರೂಪಯಿ ಮೌಲ್ಯ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ದೇಶಗಳ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ.  

ಪ್ರಾರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು 23 ಪೈಸೆಯಷ್ಟು ರೂಪಾಯಿ ಮೌಲ್ಯ ಚೇತರಿಕೆ ಕಂಡಿತ್ತು. ಆದರೆ ನಂತರದ ಜಾಗತಿಕ ಆರ್ಥಿಕ ಬೆಳವಣಿಗೆಯಿಂದ 70 ರೂಪಾಯಿಗಳಿಗೆ ತಲುಪಿದೆ. 
ಆ.13 ರಂದು 5 ವರ್ಷಗಳಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ 110 ಪೈಸೆಯಷ್ಟು ಕುಸಿತ ಕಂಡು, ರೂಪಾಯಿ ಮೌಲ್ಯ, 69.93 ರೂಪಾಯಿಗಳಿಗೆ ಕುಸಿದಿತ್ತು.  

click me!