Rupee Vs Dollar:ಡಾಲರ್ ಎದುರು ರೂಪಾಯಿ ಸರ್ವಕಾಲಿಕ ಕುಸಿತ ;ರೂಪಾಯಿ ಮೌಲ್ಯ 81ಪೈಸೆ ಇಳಿಕೆ

Suvarna News   | Asianet News
Published : Mar 07, 2022, 08:41 PM IST
Rupee Vs Dollar:ಡಾಲರ್ ಎದುರು ರೂಪಾಯಿ ಸರ್ವಕಾಲಿಕ ಕುಸಿತ ;ರೂಪಾಯಿ ಮೌಲ್ಯ 81ಪೈಸೆ ಇಳಿಕೆ

ಸಾರಾಂಶ

*ಕಚ್ಚಾ ತೈಲ ಬೆಲೆಯೇರಿಕೆ ಪರಿಣಾಮ ರೂಪಾಯಿ ಮೌಲ್ಯ ಕುಸಿತ *ಪ್ರಸ್ತುತ ಡಾಲರ್ ಎದುರು ರೂಪಾಯಿ ಮೌಲ್ಯ 76.98ರೂ.  * ಷೇರುಪೇಟೆ ಮೇಲೂ ಪರಿಣಾಮ,ಸೆನ್ಸೆಕ್ಸ್ ನಿಫ್ಟಿ ಕುಸಿತ

ನವದೆಹಲಿ (ಮಾ.7): ಈಗಷ್ಟೇ ಕೊರೋನಾ (Corona) ಹೊಡೆತದಿಂದ ಚೇತರಿಸಿಕೊಳ್ಳುತ್ತಿರೋ ಜಗತ್ತಿಗೆ ರಷ್ಯಾ (Russia)- ಉಕ್ರೇನ್ (Ukraine) ಸಂಘರ್ಷ ಮತ್ತೊಂದು ಆಘಾತ ನೀಡಿದೆ. ಭಾರತದ (India) ಪಾಲಿಗೂ ಯುದ್ಧದ (War) ಬಿಸಿ ತಟ್ಟಲಾರಂಭಿಸಿದ್ದು, ಸೋಮವಾರ  (ಮಾ.7) ಡಾಲರ್ (Dollar) ಎದುರು ರೂಪಾಯಿ (Rupee) ಮೌಲ್ಯ ಸರ್ವಕಾಲಿಕ ಕುಸಿತ ದಾಖಲಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 81ಪೈಸೆ ಇಳಿಕೆ ಕಂಡಿದ್ದು, ಪ್ರಸ್ತುತ 76.98ರೂ. ಇದೆ. 

ತೈಲ ಬೆಲೆ ಹೆಚ್ಚಳವೇ ಕಾರಣ
ಸೋಮವಾರ (ಮಾ.7)ಬೆಳಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಯೇರಿಕೆಯಾಗುತ್ತಿದ್ದಂತೆ ಡಾಲರ್ (Dollar) ಮೌಲ್ಯ ಕೂಡ ಹೆಚ್ಚಿತು. ಪರಿಣಾಮ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿತು. ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಸರ್ವಕಾಲಿಕ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಇದು ಭಾರತದ ಆರ್ಥಿಕ ರಂಗಕ್ಕೆ ದೊಡ್ಡ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸೋಮವಾರ ಗಣನೀಯ ಏರಿಕೆ ಕಂಡುಬಂದಿದೆ. ಇದು ಆಮದು ಹಣದುಬ್ಬರ ಏರಿಕೆ ಹಾಗೂ ದೇಶದ ವ್ಯಾಪಾರ ಹಾಗೂ ಚಾಲ್ತಿ ಖಾತೆ ಕೊರತೆಯನ್ನು ಇನ್ನಷ್ಟು ಹೆಚ್ಚಿಸೋ ಭಯ ಹುಟ್ಟಿಸಿದೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ.

Crude Oil Price: ದಾಖಲೆ ಬರೆದ ತೈಲ ಬೆಲೆ; ಬ್ಯಾರಲ್ ಗೆ $139 ಏರಿಕೆ; ದೇಶದಲ್ಲಿ ನಾಳೆ ಇಂಧನ ಬೆಲೆ ಹೆಚ್ಚಳ?

ಪಾತಾಳಕ್ಕೆ ಕುಸಿದ ರೂಪಾಯಿ
ಭಾಗಶಃ ( Partially)ಪರಿವರ್ತಿಸಬಹುದಾದ (convertible) ರೂಪಾಯಿ ಡಾಲರ್ ಎದುರು 76.92/93 ವಹಿವಾಟು ನಡೆಸುತ್ತಿದೆ. ಇದು ಒಂದು ಹಂತದಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಅಂದ್ರೆ 76.96 ಕುಸಿತ ಕಂಡಿತ್ತು. ಕಳೆದ ವಾರಾಂತ್ಯವಾದ ಶುಕ್ರವಾರ ರೂಪಾಯಿ ಡಾಲರ್ ಎದುರು 76.16 ಮೌಲ್ಯದೊಂದಿಗೆ ವಹಿವಾಟು ಮುಗಿಸಿತ್ತು. ಇಂಟರ್‌ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಯುಎಸ್ ಡಾಲರ್ ಎದುರು 76.85 ಮೌಲ್ಯದೊಂದಿಗೆ ರೂಪಾಯಿ ದಿನದ ವಹಿವಾಟು ಪ್ರಾರಂಭಿಸಿತ್ತು. ಆದ್ರೆ ಆ ಬಳಿಕ 81ಪೈಸೆ ಇಳಿಕೆ ಕಂಡು 76.98ಕ್ಕೆ ಕುಸಿಯಿತು ಎಂದು ಪಿಟಿಐ (PTI) ವರದಿ ತಿಳಿಸಿದೆ. ಶುಕ್ರವಾರ ರೂಪಾಯಿ 23 ಪೈಸೆಯಷ್ಟು ಇಳಿಕೆ ಕಂಡು ಡಾಲರ್ ಎದುರು 76.17ಕ್ಕೆ ತಲುಪಿತ್ತು. 2021ರ ಡಿಸೆಂಬರ್ ಬಳಿಕ ಅತ್ಯಂತ ಕಡಿಮೆ ಮಟ್ಟದ ಕ್ಲೋಸಿಂಗ್ ಇದಾಗಿದೆ.

ಸೆನ್ಸೆಕ್ಸ್ , ನಿಫ್ಟಿ ಕುಸಿತ
ಸೋಮವಾರ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್  ಶೇ.2.74 ಅಂದ್ರೆ 1,491.06 ಇಳಿಕೆ ಕಂಡು 52,842.75 ತಲುಪಿತ್ತು. ಇನ್ನು ಎನ್ ಎಸ್ಇ ಸೂಚ್ಯಂಕ ನಿಫ್ಟಿ ಕೂಡ ಶೇ.2.35 ಇಳಿಕೆ ಅಥವಾ 382.20 ಅಂಕಗಳ ಇಳಿಕೆ ಕಂಡು 15,863.15 ಮುಕ್ತಾಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ ಈ ಬೆಳವಣಿಗೆಗೆ ಕಾರಣ ಎನ್ನಬಹುದು.

Ukraine Crisis: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾಗೆ ಮತ್ತೊಂದು ಶಾಕ್!

ಕಚ್ಚಾ ತೈಲ ಬೆಲೆಯೇರಿಕೆ
ರಷ್ಯಾದ ಕಚ್ಚಾ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸೋ ಬಗ್ಗೆ ಐರೋಪ್ಯ ರಾಷ್ಟ್ರಗಳು ಹಾಗೂ ಮಿತ್ರರಾಷ್ಟ್ರಗಳ ಜೊತೆ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂದು ಭಾನುವಾರ ಸಂದರ್ಶನವೊಂದರಲ್ಲಿ ಅಮೆರಿಕದ (US) ಗೃಹ ಕಾರ್ಯದರ್ಶಿ(Secretary of Stat) ಆಂಟನಿ ಬ್ಲಿಂಕೆನ್ ಹೇಳಿದ್ದರು. ಬ್ಲಿಂಕೆನ್ ಹೇಳಿಕೆ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಜಾಗತಿಕ ಕಚ್ಚಾ ತೈಲದ ಮಾನದಂಡ  ಬ್ರೆಂಟ್ (Brent) ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ (Barrel) ಮೇಲೆ  $139.13 ಏರಿಕೆ ಕಂಡಿದೆ. ಇದು 14  ವರ್ಷಗಳಲ್ಲೇ ದಾಖಲೆಯ ಏರಿಕೆಯಾಗಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!