ಕಳೆದ 2 ವರ್ಷ​ಗ​ಳಿಂದ ಒಂದೇ ಒಂದು 2000 ಮುಖ​ಬೆ​ಲೆ​ಯ ನೋಟು ಮುದ್ರಿ​ಸಿ​ಲ್ಲ: ಕೇಂದ್ರ!

By Suvarna News  |  First Published Mar 16, 2021, 8:28 AM IST

2000 ರು. ಮುಖ​ಬೆ​ಲೆಯ ನೋಟು​ಗಳ ಸಂಖ್ಯೆ ವಿರ​ಳ| ಕಳೆದ 2 ವರ್ಷ​ಗ​ಳಿಂದ ಒಂದೇ ಒಂದು 2000 ಮುಖ​ಬೆ​ಲೆ​ಯ ನೋಟು ಮುದ್ರಿ​ಸಿ​ಲ್ಲ: ಕೇಂದ್ರ!


ನವ​ದೆ​ಹ​ಲಿ(ಮಾ.16): ಕಳೆ​ದೆ​ರಡು ವರ್ಷ​ಗ​ಳಲ್ಲಿ 2000 ರು. ಮೌಲ್ಯದ ನೋಟು​ಗ​ಳನ್ನು ಮುದ್ರಣ ಮಾಡ​ಲಾ​ಗಿಲ್ಲ. ಇದ​ರಿಂದಾಗಿ 2000 ರು. ಮುಖ​ಬೆ​ಲೆಯ ನೋಟು​ಗಳ ಸಂಖ್ಯೆ ವಿರ​ಳ​ವಾ​ಗಿದೆ ಎಂದು ಲೋಕ​ಸ​ಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಸಂಬಂಧ ಸೋಮ​ವಾರ ಲಿಖಿತ ಉತ್ತರ ನೀಡಿದ ಕೇಂದ್ರ ವಿತ್ತ ಸಚಿ​ವಾ​ಲ​ಯದ ರಾಜ್ಯ ಸಚಿವ ಅನು​ರಾಗ್‌ ಸಿಂಗ್‌ ಠಾಕೂರ್‌, ‘2018ರ ಮಾ.30ರಂದು 2000 ಮುಖ​ಬೆ​ಲೆಯ 336.2 ಕೋಟಿ ನೋಟು​ಗಳು ಚಾಲ್ತಿ​ಯ​ಲ್ಲಿ​ದ್ದವು. ಆದರೆ 2021ರ ಫೆ.26ರವ​ರೆಗೆ 2000 ಮುಖ​ಬೆ​ಲೆಯ 249.9 ಕೋಟಿ ನೋಟು​ಗಳು ಚಲಾ​ವ​ಣೆ​ಯ​ಲ್ಲಿವೆ.

Tap to resize

Latest Videos

ಅಂದರೆ ಒಟ್ಟಾರೆ ಬ್ಯಾಂಕ್‌ ನೋಟು​ಗಳ ಪೈಕಿ ಶೇ.17.78ರಷ್ಟುಮಾತ್ರವೇ 2000 ನೋಟು​ಗ​ಳಿದ್ದು, 2018ರಲ್ಲಿ ಈ ಪ್ರಮಾಣ ಶೇ.37.26ರಷ್ಟಿ​ತ್ತು’ ಎಂದಿ​ದ್ದಾರೆ.

click me!