Business 2021: ಕೊರೋನಾ ಕಲಿಸಿದ ಪಾಠ; ಆರೋಗ್ಯ ವಿಮೆ, ಟರ್ಮ್ ಇನ್ಯುರೆನ್ಸ್ ಗೆ ಭಾರೀ ಬೇಡಿಕೆ

By Suvarna News  |  First Published Dec 23, 2021, 2:14 PM IST

*ಆರೋಗ್ಯ ವಿಮೆ ಮಹತ್ವದ ಬಗ್ಗೆ ಅರಿವು ಮೂಡಿಸಿದ ವರ್ಷ
*ಟರ್ಮ್ ಇನ್ಯುರೆನ್ಸ್ ಗೂ ಹೆಚ್ಚಿದ ಬೇಡಿಕೆ
*ಆರೋಗ್ಯ ವಿಮಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ
*ಹೆಚ್ಚಿನ ಕವರೇಜ್ ನೀಡೋ ವಿಮೆಗಳಿಗೆ ಭಾರೀ ಬೇಡಿಕೆ


Business Desk: ಭಾರತಕ್ಕೆ ಕೋವಿಡ್ -19 (COVID-19) ಕಾಲಿರಿಸಿದ ಬಳಿಕ ಎಲ್ಲ ವಲಯಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.ಅದ್ರಲ್ಲೂ ಆರೋಗ್ಯ ಹಾಗೂ ಜೀವ ವಿಮಾ ಕ್ಷೇತ್ರದ ಮೇಲೆ ಕೊರೋನಾ ಗಮನಾರ್ಹ ಪರಿಣಾಮ ಬೀರಿದೆ ಎಂದೇ ಹೇಳಬಹುದು. 2020ರ ಮಾರ್ಚ್ ನಲ್ಲಿ ಭಾರತಕ್ಕೆ ಕೊರೋನಾ ಕಾಲಿರಿಸಿದ್ರೂ ಆ ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ(Government hospitals) ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದ ಕಾರಣ ಆರೋಗ್ಯ ವಿಮಾ ಕಂಪನಿಗಳ (health Insurance Company) ಮೇಲೆ ಅಷ್ಟೇನೂ ಪ್ರಭಾವ ಬೀರಲಿಲ್ಲ.ಆದ್ರೆ 2021ರ ಮಾರ್ಚ್ ನಲ್ಲಿ ಅಪ್ಪಳಿಸಿದ ಕೊರೋನಾ ಎರಡನೇ ಅಲೆ ಆರೋಗ್ಯ(health) ಹಾಗೂ ಜೀವ ವಿಮೆ(Life Insurance) ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಸಿತು. ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ನಿಗದಿಪಡಿಸಿದ ಕಾರಣ ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲು ಅನೇಕರು ಹೆಣಗಾಡಿದರು. ಈ ಸಮಯದಲ್ಲಿ ಆರೋಗ್ಯ ವಿಮೆಯಿಂದ ಎಷ್ಟು ಪ್ರಯೋಜನವಿದೆ ಎಂಬುದು ಜನರಿಗೆ ಮನದಟ್ಟಾಗಿತ್ತು. ಪರಿಣಾಮ 2021 ವಿಮಾ ಕಂಪನಿಗಳ(Insurance Companies) ಪಾಲಿಗೆ ಮಹತ್ವದ ವರ್ಷವಾಯ್ತು. ಜೀವ ವಿಮೆ ಹಾಗೂ ಆರೋಗ್ಯ ವಿಮೆ  ಜೊತೆಗೆ ಟರ್ಮ್ ಇನ್ಯುರೆನ್ಸ್ ಗೂ(Term Insurance) ಬೇಡಿಕೆ ಹೆಚ್ಚಿದೆ.

ವಿಮೆ ಅರಿವು ಮೂಡಿಸಿದ ವರ್ಷ
ಜೀವ ವಿಮೆ ಹಾಗೂ ಆರೋಗ್ಯ ವಿಮೆ ಬಗ್ಗೆ ಭಾರತೀಯರಲ್ಲಿ ಇಷ್ಟು ವರ್ಷ ಒಂದು ರೀತಿಯ ನಿರ್ಲಕ್ಷ್ಯದ ಮನೋಭಾವವಿತ್ತು. ಬಹುತೇಕರು ತೆರಿಗೆ ವಿನಾಯ್ತಿ (Tax conession) ಸಿಗುತ್ತೆ ಎಂಬ ಉದ್ದೇಶದಿಂದ ಜೀವ ವಿಮೆ ಮಾಡಿಸುತ್ತಿದ್ದರು. ಇನ್ನು ಉದ್ಯೋಗಿಗಳು ಕಂಪನಿಗಳ ವತಿಯಿಂದ ನೀಡಲಾಗೋ ಆರೋಗ್ಯ ವಿಮೆಯನ್ನು ಮಾಡಿಸಿದ್ರೆ, ಸ್ವಂತ ಉದ್ಯಮ ಸೇರಿದಂತೆ ಬೇರೆ ವೃತ್ತಿಗಳಲ್ಲಿ ತೊಡಗಿರೋ ಬಹುತೇಕ ಜನರು ಆರೋಗ್ಯ ವಿಮೆಯನ್ನು ಮಾಡಿಸುತ್ತಲೇ ಇರಲಿಲ್ಲ. ಆದ್ರೆ  ಕೊರೋನಾ ಬಂದ ಬಳಿಕ ತಮಗೆ ಹಾಗೂ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಸುರಕ್ಷತೆ ಎಷ್ಟು ಅಗತ್ಯ ಎಂಬುದು ಮನದಟ್ಟಾಗಿದೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ಕೊರೋನಾ ಚಿಕಿತ್ಸಾ ವೆಚ್ಚಕ್ಕೆ ಮಿತಿ ನಿಗದಿಪಡಿಸಿದ್ರೂ ಗಂಭೀರ ಪ್ರಕರಣಗಳಲ್ಲಿ ಆಸ್ಪತ್ರೆ ಬಿಲ್ ಸಿಕ್ಕಾಪಟ್ಟೆ ದುಬಾರಿಯಾಯ್ತು. 

Tap to resize

Latest Videos

Forbes 30 under 30 list: 26 ವಯಸ್ಸಿನ ಭಾರತೀಯನ ಅಪ್ರತಿಮ ಸಾಧನೆ; ಫೋಬ್ಸ್ ಪಟ್ಟಿಯಲ್ಲಿ ಉದ್ಯಮಿ ಅಶ್ವಿನ್ ಶ್ರೀನಿವಾಸ್

ಹೆಚ್ಚಿನ ಕವರೇಜ್ ನೀಡೋ ಆರೋಗ್ಯ ವಿಮೆಗಳಿಗೆ ಬೇಡಿಕೆ
ಕೊರೋನಾಕ್ಕೂ ಮುನ್ನ ಬಹುತೇಕರು ಕಡಿಮೆ ಕವರೇಜ್ ಹೊಂದಿರೋ ಆರೋಗ್ಯ ವಿಮೆಗಳನ್ನು ಖರೀದಿಸುತ್ತಿದ್ದರು. ಇದು 5ಲಕ್ಷ ರೂ.ಗಿಂತ ಕಡಿಮೆ ಇತ್ತು. ಆದ್ರೆ ಕೊರೋನಾ ಬಳಿಕ ಇಡೀ ಕುಟುಂಬಕ್ಕೆ  10ಲಕ್ಷ ರೂ.ಗಿಂತ ಕಡಿಮೆ ಆರೋಗ್ಯ ವಿಮೆ ಕವರೇಜ್ ಹೊಂದಿರೋದು ರಿಸ್ಕ್ ಎಂಬುದು ಹೆಚ್ಚಿನವರಿಗೆ ಅರ್ಥವಾಗಿದೆ. Beshak.org ಎಂಬ ಗ್ರಾಹಕರಿಗೆ ಸಂಬಂಧಿಸಿದ ವಿಮೆ ಸಂಶೋಧನಾ ಫ್ಲಾಟ್ ಫಾರ್ಮ್ ಸಂಸ್ಥಾಪಕ ಮಹಾವೀರ್ ಛೋಪ್ರಾ ಅವರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು 20ಲಕ್ಷ ರೂ. ಕವರೇಜ್ ಹೊಂದಿರೋ ಆರೋಗ್ಯ ವಿಮೆಗಳನ್ನು ಖರೀದಿಸುತ್ತಿದ್ದಾರಂತೆ.

ಎಲ್ಲ ವೆಚ್ಚಗಳನ್ನೂ ಕವರ್ ಮಾಡೋ ಪಾಲಿಸಿಗೆ ಡಿಮ್ಯಾಂಡ್
ಕರೋನಾ ಚಿಕಿತ್ಸಾ ವೆಚ್ಚ ಭರಿಸೋ ಸಮಯದಲ್ಲಿ ಆಸ್ಪತ್ರೆಗಳು ಹಾಗೂ ಆರೋಗ್ಯ ವಿಮಾ ಸಂಸ್ಥೆಗಳ ನಡುವೆ ಸಾಕಷ್ಟು ತಿಕ್ಕಾಟ ಏರ್ಪಟ್ಟಿತ್ತು. ಮಾಸ್ಕ್, ಸ್ಯಾನಿಟೈಸರ್, ಗ್ಲೌ ಸ್ ಮುಂತಾದವುಗಳಿಗೆ ವಿಮೆ ಹಣ ಸಿಗೋದಿಲ್ಲ. ಆದ್ರೆಕೊರೋನಾ ಚಿಕಿತ್ಸೆಯಲ್ಲಿ ಇವೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿವೆ, ಹೀಗಾಗಿ ಇದಕ್ಕೂ ಪಾವತಿಸುವಂತೆ ಆಸ್ಪತ್ರೆಗಳು ಪಟ್ಟು ಹಿಡಿದಿದ್ದವು. ಆದ್ರೆ ಆರೋಗ್ಯ ವಿಮಾ ಕಂಪನಿಗಳು ಇದಕ್ಕೆ ಒಪ್ಪಿರಲಿಲ್ಲ. ಇದ್ರಿಂದ ವಿಮೆ ಪಾಲಿಸಿ ಹೊಂದಿರೋ ರೋಗಿ ತನ್ನ ಜೇಬಿನಿಂದಲೇ ಈ ಎಲ್ಲ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಯಿತು. ಹೀಗಾಗಿ ಈಗ ಜನರು ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸೋ ಆರೋಗ್ಯ ವಿಮೆ ಪಾಲಿಸಿಗಳಿಗೆ ಹೆಚ್ಚಿನ ಬೇಡಿಕೆಯಿಡುತ್ತಿದ್ದಾರೆ.

CPI Forecast: ಗ್ರಾಹಕ ದರ ಸೂಚ್ಯಂಕ 150 ಬೇಸಿಸ್ ಪಾಯಿಂಟ್ಸ್ ಏರಿಕೆ ಸಾಧ್ಯತೆ: ಸ್ಟ್ಯಾಂಡರ್ಡ್ ಚಾರ್ಟರಡ್ ಬ್ಯಾಂಕ್

ಟರ್ಮ್ ಇನ್ಯುರೆನ್ಸ್ (term insurance) ಪ್ರೀಮಿಯಂ ಹೆಚ್ಚಳ
ಕೊರೋನಾಕ್ಕೂ ಮುನ್ನ ಟರ್ಮ್ ಇನ್ಯುರೆನ್ಸ್ ಪ್ರೀಮಿಯಂ ಅತ್ಯಂತ ಕಡಿಮೆಯಿತ್ತು. ಆದ್ರೆ ಕೊರೋನಾ ಕಾಣಿಸಿಕೊಂಡ ಬಳಿಕ ಟರ್ಮ್ ಇನ್ಯುರೆನ್ಸ್ ಗಳಿಗೆ ಬೇಡಿಕೆ ಹೆಚ್ಚಿತು. ಇದ್ರಿಂದ ಜೀವ ವಿಮಾ ಕಂಪನಿಗಳು ಟರ್ಮ್ಇನ್ಯುರೆನ್ಸ್ ಪ್ರೀಮಿಯಂ ಹೆಚ್ಚಿಸಲು ಪ್ರಾರಂಭಿಸಿದವು. 2020 ಮಾರ್ಚ್ ನಿಂದ ಈ ತನಕ ಟರ್ಮ್ ಇನ್ಯುರೆನ್ಸ್ ಪ್ರೀಮಿಯಂನಲ್ಲಿ ಶೇ.25-45 ಏರಿಕೆ ಕಂಡುಬಂದಿದೆ. 
 

click me!