
ನವದೆಹಲಿ: ಕಳೆದ 9 ತಿಂಗಳಿನಿಂದ ಸತತ ಏರಿಕೆ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಸೋಮವಾರ ಮತ್ತೊಂದು ದಾಖಲೆ ಮುಟ್ಟಿದೆ. ಬೆಂಗಳೂರಿನಲ್ಲಿ 1 ಕೆಜಿ ಚಿನ್ನದ ಬೆಲೆ 1.53 ಲಕ್ಷ ರು.ಗೆ ತಲುಪಿದ್ದರೆ, ದೆಹಲಿಯಲ್ಲಿ 1.50 ಲಕ್ಷ ಮುಟ್ಟಿದೆ. ಚಿನ್ನದ ಬೆಲೆ 1.50 ಲಕ್ಷ ರು.ದ ಗಡಿ ದಾಟಿದ್ದು ಇದೇ ಮೊದಲು.
ಚಿನ್ನ ದಾಖಲೆ:
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ಶೇ.99.9 ಶುದ್ಧತೆಯ ಹೊನ್ನು 10 ಗ್ರಾಂಗೆ 1,19,500 ರು. ಆಗಿದೆ. ಶನಿವಾರ ಇದು 1,18,000 ರು ಇತ್ತು. ಅತ್ತ ಬೆಂಗಳೂರಿನಲ್ಲಿ ಶೇ.99.5 ಶುದ್ಧತೆಯ ಚಿನ್ನದ ಬೆಲೆ 1,20,000 ರು. ಆಗಿದೆ.
ಅಮೆರಿಕದ ರಾಷ್ಟ್ರೀಯ ಬ್ಯಾಂಕ್ ಬಡ್ಡಿದರ ಕಡಿತ ಮಾಡುವ ನಿರೀಕ್ಷೆ ಇರುವುದು, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಹಬ್ಬಗಳ ಸಾಲು ಆರಂಭವಾಗಿರುವ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಚಿನ್ನ, ಬೆಳ್ಳಿ ಬೆಲೆಯ ನಾಗಾಲೋಟಕ್ಕೆ ಕಾರಣ ಎನ್ನಲಾಗಿದೆ.
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ?
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಖಾಸಗಿ ಚಿನ್ನದ ಗಣಿ
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ಖಾಸಗಿ ಗಣಿಗಾರಿಕೆ ಪೂರ್ಣ ಪ್ರಮಾಣದ ಚಿನ್ನವನ್ನು ಉತ್ಪಾದನೆಯಾಗುವ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದ್ದು, ಇಲ್ಲಿಯ ವಹಿವಾಟು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
1 ಸಾವಿರ ಟನ್ ಚಿನ್ನ ಆಮದು
ಈ ಖಾಸಗಿ ಚಿನ್ನದ ಗಣಿಗಾರಿಕೆಯಿಂದ ಹಲವು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಏರಿಕೆಯಾಗಲಿವೆ. ಪ್ರಸ್ತುತ ಭಾರತ ಪ್ರತಿ ವರ್ಷ ಸುಮಾರು 1 ಸಾವಿರ ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಿದೆ. ಕಚ್ಚಾ ತೈಲದ ಬಳಿಕ ಭಾರತ ಆಮದು ಮಾಡಿಕೊಳ್ಳುವ ವಸ್ತು ಚಿನ್ನವಾಗಿದೆ.
ಎಲ್ಲಿದೆ ಭಾರತದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ?
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿ, ಎರ್ರಗುಡಿ ಮತ್ತು ಪಗದಿರಾಯ್ ಗ್ರಾಮಗಳ ಬಳಿ ಚಿನ್ನದ ಗಣಿಗಾರಿಕೆ ನಡೆಯಲಿದೆ. ಈ ಗಣಿಗಾರಿಕೆಯ ಡೆವಲಪರ್ ಆಗಿರುವ ಜಿಯೋಮೈಸೋರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಚಿನ್ನದ ಪರಿಶೋಧನಾ ಕಂಪನಿಯಾದ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಡಿಜಿಎಂಎಲ್) ಪಾಲನ್ನು ಹೊಂದಿದೆ. ಗುರುವಾರ ಡಿಜಿಎಂಎಲ್ ಷೇರು 9.95% ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಷೇರು ಸುಮಾರು 12% ರಷ್ಟು ಕುಸಿದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.