
ನವದೆಹಲಿ(ಏ.12): ಇಂಧನ ತೈಲ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ ರೀಟೇಲ್ ಹಣದುಬ್ಬರ 2019ರ ಮಾರ್ಚ್ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ.
ಈ ಕುರಿತು ಖುದ್ದು ಸರ್ಕಾರ ಮಾಹಿತಿ ನೀಡಿದ್ದು, ಫೆಬ್ರವರಿಯಲ್ಲಿ ಈ ಹಣದುಬ್ಬರ ಶೇ.2.57ಕ್ಕೆ ಪರಿಷ್ಕೃತಗೊಂಡಿತ್ತು. ಆಹಾರ ದರ ಸೂಚ್ಯಂಕ (CFPI) ಶೇ.0.3ಕ್ಕೆ ಹೆಚ್ಚಾಗಿದೆ ಎಂದು ಹೇಳಿದೆ.
ಗ್ರಾಮೀಣ ಭಾಗದಲ್ಲಿನ ರೀಟೇಲ್ ಹಣದುಬ್ಬರ ಶೇ.1.8ರಷ್ಟಿದ್ದು, ನಗರ ಪ್ರದೇಶದಲ್ಲಿ ಶೇ.4.1ರಷ್ಟಿದೆ. ಇಂಧನ ತೈಲ ಹಣದುಬ್ಬರ ಶೇ. 2.42ರಷ್ಟಿದೆ.
ಏ.4ರಂದು ಆರ್‌ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ನಷ್ಟು ಇಳಿಕೆ ಮಾಡಿತ್ತು. ಕೇಂದ್ರೀಯ ಬ್ಯಾಂಕ್ ಗ್ರಾಹಕ ಹಣದುಬ್ಬರವನ್ನು ಶೇ.4ಕ್ಕೆ ನಿಗದಿಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.