ಪುರುಷರೇ ಎಚ್ಚರ! ನಿಮ್ಮ ಹಿಂದೆ ಹುಡುಗಿಯರ ಛೂ ಬಿಡ್ತಿವೆ ಈ ರೆಸ್ಟೋರೆಂಟ್​ಗಳು: ಏನಿದು ವಂಚನೆ?

Published : Aug 29, 2025, 11:48 AM IST
 Restaurants Fruad

ಸಾರಾಂಶ

ಪುರುಷರಿಗೆ ಶಾಕಿಂಗ್​ ಆಗುವಂಥ ಘಟನೆಗಳು ಬೆಳಕಿಗೆ ಬಂದಿವೆ. ನಿಮ್ಮ ಹಿಂದೆ ಕೆಲವು ಬಾರ್​ ಮತ್ತು ರೆಸ್ಟೋರೆಂಟ್​ಗಳು ಹುಡುಗಿಯರನ್ನು ಛೂ ಬಿಡ್ತಿವೆ. ಅದೇನು ಸ್ಕ್ಯಾಮ್​ ನೋಡಿ.... 

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತು ಕೇಳಿದ್ದೀರಲ್ಲವೆ? ಇಲ್ಲಿ ಮೋಸ ಮಾಡುವವರಿಗಿಂತಲೂ ಬಹುದೊಡ್ಡ ಅಪರಾಧಿಗಳು ಮೋಸ ಹೋಗುವವರೇ ಎನ್ನಲಾಗುತ್ತದೆ. ಅದರಲ್ಲಿಯೂ ಸುಂದರ ಹುಡುಗಿಯರನ್ನು ನೋಡಿ ಇಲ್ಲವೇ ಹೆಣ್ಣುಮಕ್ಕಳ ಸುಮಧುರ ದನಿಗೆ ಮಾರುಹೋಗಿ ಟೋಪಿ ಹಾಕಿಸಿಕೊಳ್ಳುವವರೇ ಹೆಚ್ಚುಮಂದಿ. ಕೊನೆಗೆ ಮೋಸ ಹೋದ ಮೇಲೆ ಅವರ ಮರ್ಯಾದೆಯ ಪ್ರಶ್ನೆ ಆಗಿರುತ್ತದೆ ಎನ್ನೋ ಕಾರಣಕ್ಕೆ ಯಾರ ಬಳಿಯೂ ಹೇಳಲು ಅಥವಾ ದೂರು ದಾಖಲಿಸಲು ಹೋಗುವುದಿಲ್ಲ ಎನ್ನುವುದು ಈ ಹುಡುಗಿಯರಿಗೆ ಅಥವಾ ಅವರನ್ನು ಬಳಸಿಕೊಳ್ತಿರೋ ಗ್ಯಾಂಗ್​ಗೆ ಚೆನ್ನಾಗಿ ಗೊತ್ತಿರುತ್ತದೆ. ಮೋಸ ಹೋಗುವವರು ವಿವಾಹಿತರಾಗಿರೋ ಹೆಚ್ಚೇ ಇದೆ, ಇಲ್ಲವೇ ಮನೆಯಲ್ಲಿ ಹೇಳದೇ ಕೇಳದೇ ಹುಡುಗಿಯರ ಹಿಂದೆ ಹೋಗಿ ಮೋಸ ಹೋದರೆ ಹೇಳಿಕೊಳ್ಳಲು ನಾಚಿಕೆ ಅಲ್ವಾ?

ಆದ್ದರಿಂದ ಅಪರಿಚಿತ ಹುಡುಗಿಯರು ಮರಳು ಮಾಡಲು ಬಂದರೆ ಮೈಯೆಲ್ಲಾ ಕಣ್ಣಾಗಿ ಇರಬೇಕಾದುದು ಇಂದು ದಾಖಲಾಗ್ತಿರೋ ಪ್ರಕರಣಗಳನ್ನು ನೋಡಿದರೇನೇ ತಿಳಿಯುತ್ತದೆ. ಆದರೆ ಇಲ್ಲೊಂದು ಇನ್ನೂ ಕುತೂಹಲ ಎನ್ನುವ ಘಟನೆ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಅದೇನೆಂದರೆ, ಪುರುಷರನ್ನು ಮೋಸ ಮಾಡುವುದಕ್ಕಾಗಿಯೇ ಸುಂದರ ಕಾಲೇಜು ಹುಡುಗಿಯರನ್ನು ರೆಸ್ಟೋರೆಂಟ್​ಗಳು, ಬಾರ್​ಗಳು ಛೂ ಬಿಡುತ್ತಿರುವುದು ಬೆಳಕಿಗೆ ಬಂದಿದೆ. ಈಗಿನ ಹೈಫೈ ಹುಡುಗಿಯರಿಗೆ ಮಜಾ ಮಾಡಲು ದುಡ್ಡು ಸಿಕ್ಕರೆ ಸಾಕು, ಅವರು ಏನು ಕೆಲಸ ಮಾಡಲೂ ಹೇಸುವುದಿಲ್ಲ. ಅಂಥವರದ್ದೇ ರೆಸ್ಟೋರೆಂಟ್​ಗಳು ಹೈಯರ್​ ಮಾಡಿಕೊಳ್ಳುತ್ತಿವೆ. ಭಾರಿ ಸಂಪಾದನೆಯ ಆಮಿಷ ತೋರಿಸಲಾಗುತ್ತಿದೆ.

ಇಂಥ ಹುಡುಗಿಯರು ದೊಡ್ಡ ಕೆಲಸವನ್ನೇನೂ ಮಾಡಬೇಕಾಗಿಲ್ಲ. ಡೇಟಿಂಗ್​ ಆ್ಯಪ್​ನಲ್ಲಿ ತಮ್ಮ ಪ್ರೊಫೈಲ್​ ಕ್ರಿಯೇಟ್​ ಮಾಡಿಕೊಂಡು ಡೇಟಿಂಗ್​ಗೆ ಆಸೆ ಪಡುವ ದೊಡ್ಡ ಕುಳಗಳನ್ನು ಇಲ್ಲವೇ ದುಡ್ಡು ಖರ್ಚು ಮಾಡಲು ರೆಡಿ ಇರುವ ಗಂಡುಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುವುದು ಅಷ್ಟೇ. ಕೊನೆಗೆ ಡೇಟಿಂಗ್​ ನೆಪದಲ್ಲಿ ಅವರನ್ನು ಆ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗುವುದು ಆ ಹುಡುಗಿಯರ ಕೆಲಸ ಅಷ್ಟೇ.

ಹೆಣ್ಣಿನ ಬಲೆಯಲ್ಲಿ ಬಿದ್ದ ಮೇಲೆ ಹುಡುಗರ ಸ್ಥಿತಿ ಏನು ಎನ್ನುವುದು ಬೇರೆ ಕೇಳಬೇಕಾಗಿಲ್ಲ. ಅವರ ಮೃದು ಮಾತಿನ ಮೋಡಿಯಲ್ಲಿ ಸಿಲುಕಿ ಅವರು ಹೇಳಿದ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗದೇ ಈ ಬಕ್ರಾಗಳಿಗೆ ವಿಧಿಯಿಲ್ಲ. ಕೊನೆಗೆ ಎಷ್ಟು ಸಾಧ್ಯವೋ ಅಷ್ಟು ಬಿಲ್​ ಮಾಡುವುದು ಹುಡುಗಿಯರ ಕೆಲಸ. ಇದು ಕೂಡ ಹುಡುಗಿಯರಿಗೆ ದೊಡ್ಡ ವಿಷ್ಯವೇ ಅಲ್ಲ ಬಿಡಿ. ಹೆಚ್ಚೆಚ್ಚು ಬಿಲ್​ ಮಾಡಿದ್ರೆ ಅವರಿಗೆ ಅಷ್ಟೇ ದೊಡ್ಡ ಆಫರ್​ ಕೂಡ ಇದೆ. ಅವರು ಮಾಡುವ ಬಿಲ್​ಗೆ ಅನುಗುಣವಾಗಿ ಶೇಕಡಾ 20ರಷ್ಟು ಟಿಪ್ಸ್​ ಹುಡುಗಿಯರಿಗೆ ಕೊಡಲಾಗುತ್ತದೆ. ಅಂದರೆ 50 ಸಾವಿರ ಬಿಲ್​ ಮಾಡಿದ್ರೆ, 20 ಸಾವಿರ ಹುಡುಗಿಯರಿಗೆ. ಇಂಥ ರೆಸ್ಟೋರೆಂಟ್​ಗೆ ಹೋದ್ರೆ ಕನಿಷ್ಠ 50 ಸಾವಿರ ಬಿಲ್​ ಆಗೇ ಆಗುತ್ತದೆ. ಆದ್ದರಿಂದ ಎಚ್ಚರ ಎಚ್ಚರ!

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!