Deepika Padukone: ಬ್ಯುಸಿನೆಸ್ ನಲ್ಲೂ ಹಣ ಹೂಡಿ ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ ಬುದ್ಧಿವಂತ ನಟಿ!

Published : Aug 24, 2023, 04:41 PM IST
Deepika Padukone: ಬ್ಯುಸಿನೆಸ್ ನಲ್ಲೂ ಹಣ ಹೂಡಿ ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ ಬುದ್ಧಿವಂತ ನಟಿ!

ಸಾರಾಂಶ

ಹಣ ಗಳಿಸಿದ್ರೆ ಸಾಲದು, ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿರಬೇಕು. ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿದ್ರೆ ಕೈತುಂಬ ಲಾಭ ಪಡೆಯಬಹುದು. ಇದಕ್ಕೆ ನಟಿ ದೀಪಿಕಾ ಪಡುಕೋಣೆ ಸಾಕ್ಷಿ.  

ದೇಶದ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ಬಾಲಿವುಡ್ ತಾರೆಗಳಲ್ಲಿ   ದೀಪಿಕಾ ಪಡುಕೋಣೆ ಒಬ್ಬರು. ದೀಪಿಕಾ ಕೈನಲ್ಲಿ ಈಗ ಐದು ಚಿತ್ರಗಳಿವೆ. ಮಹತ್ವದ ಪಾತ್ರಗಳಲ್ಲಿ ನಟಿಸಲಿರುವ ದೀಪಿಕಾ ಮೇಲೆ ಬಾಲಿವುಡ್ 1400 ಕೋಟಿ ಸುರಿಯುತ್ತಿದೆ. ದೀಪಿಕಾ ಪಡುಕೋಣೆ ಒಂದು ಚಿತ್ರಕ್ಕೆ 12ರಿಂದ 14 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ. ಬರೀ ಸಿನಿಮಾದಿಂದ ಮಾತ್ರವಲ್ಲ ದಿಪಿಕಾ ಗಳಿಕೆ ಬೇರೆ ಮೂಲಗಳಿಂದಲೂ ಇದೆ. ಐಷಾರಾಮಿ ವಾಚ್ ಮತ್ತು ಆಭರಣ ಬ್ರ್ಯಾಂಡ್ ಕಾರ್ಟಿಯರ್ ರಾಯಭಾರಿಯೂ ಆಗಿರುವ ದೀಪಿಕಾ, ನಿರ್ಮಾಪಕಿ ಕೆಲಸವನ್ನೂ ನಿರ್ವಹಿಸುತ್ತಾರೆ. ಇಷ್ಟೇ ಅಲ್ಲ ದೀಪಿಕಾ ಒಂದು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ನಾವಿಂದು ದೀಪಿಕಾ ಕಟ್ಟಿ ಬೆಳೆಸಿದ ಕಂಪನಿ ಯಾವುದು, ಅದ್ರ ನಿವ್ವಳ ಲಾಭವೆಷ್ಟು ಎಂಬುದನ್ನು ಹೇಳ್ತೇವೆ.

ದೀಪಿಕಾ ಪಡುಕೋಣೆ (Deepika Padukone) ಒಡೆತನದ ಆ ಕಂಪನಿ ಹೆಸರು KA ಎಂಟರ್‌ಪ್ರೈಸಸ್. ದೀಪಿಕಾ ಪಡುಕೋಣೆ  ವೆಂಚರ್ ಕ್ಯಾಪಿಟಲ್ ಕಂಪನಿ KA ಎಂಟರ್‌ಪ್ರೈಸಸ್‌ನ ಮಾಲೀಕರು ಮತ್ತು ಸಂಸ್ಥಾಪಕರಾಗಿದ್ದಾರೆ. ದೀಪಿಕಾ ಪಡುಕೋಣೆ ಕಂಪನಿ (Company), ಸ್ಟಾರ್ಟಪ್ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಸ್ಟಾರ್ಟ್ ಅಪ್ ಕಂಪನಿಗಳು ಎತ್ತರಕ್ಕೆ ಬೆಳೆಯಲು ನೆರವಾಗುವುದಲ್ಲದೆ ಕೋಟಿಗಟ್ಟಲೆ ಹಣವನ್ನು ಸ್ಟಾರ್ಟ್ ಅಪ್ ಮೇಲೆ ಹೂಡಿಕೆ ಮಾಡಿ ಲಾಭ ಗಳಿಸುವ ಗುರಿಯನ್ನು ಕಂಪನಿ ಹೊಂದಿದೆ.

119 ರೂ. ಅಗ್ಗದ ಪ್ಲ್ಯಾನ್‌ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ: ಇನ್ಮುಂದೆ ಮಿನಿಮಮ್‌ ರೀಚಾರ್ಜ್‌ಗೆ ಎಷ್ಟು ಹಣ ನೀಡ್ಬೇಕು ನೋಡಿ..

ಕಂಪನಿ ಶುರುವಾಗಿದ್ದು ಯಾವಾಗ? :  ದೀಪಿಕಾ ಪಡುಕೋಣೆ ಮೊದಲ ಬಾಲಿವುಡ್ ಚಿತ್ರ  ಓಂ ಶಾಂತಿ ಓಂ. ಈ ಚಿತ್ರದ ಮೂಲಕ ಖ್ಯಾತಿ ಗಳಿಸಿದ ಬಾಲಿವುಡ್ ನಟಿ ದೀಪಿಕಾ, 2014 ರಲ್ಲಿ KA ಎಂಟರ್‌ಪ್ರೈಸಸ್‌ನ ಕುಟುಂಬ ಕಚೇರಿಯನ್ನು ಸ್ಥಾಪಿಸಿದರು. ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಸಣ್ಣ ಹೂಡಿಕೆಗಳನ್ನು ಮಾಡಲು ಪ್ರಾರಂಭಿಸಿದರು. ಈಗ, ಕೆಎ ಪ್ರತಿ ವರ್ಷ ಕೋಟಿಗಳಲ್ಲಿ ವಹಿವಾಟು ನಡೆಸುವ ಪ್ರಮುಖ ವೆಂಚರ್ ಕ್ಯಾಪಿಟಲ್ ಸಂಸ್ಥೆಯಾಗಿದೆ.

ಕೆಎ ಎಂಟರ್‌ಪ್ರೈಸಸ್ ಅನ್ನು ವಿಶಿಷ್ಟವಾದ ವೆಂಚರ್ ಶಾಪ್‌ನಂತೆ ನಡೆಸುತ್ತೇವೆ. ದೀಪಿಕಾ ಪಡುಕೋಣೆ ಮನಸ್ಸಿಗೆ ಹೆಚ್ಚು ಬೆಲೆ ನೀಡ್ತಾರೆ. ಅವರು ಕಂಪನಿಗೆ ಹಾರ್ಟ್ ಆದ್ರೆ ನಾನು ಮೈಂಡ್ ಎಂದು ದೀಪಿಕಾ ಪಡುಕೋಣೆ ಸಂಸ್ಥೆಯ ಫಂಡ್ ಮ್ಯಾನೇಜರ್ ಜಿಗರ್ ಕೆ ಶಾ ಹೇಳಿದ್ದಾರೆ. ಸಣ್ಣ ಉದ್ಯಮಗಳ ಬೆಳವಣಿಗೆಗೆ ಸಹಾಯ ಮಾಡುವುದು ಈ ಕಂಪನಿ ಮೂಲ ಉದ್ದೇಶವಾಗಿದೆ. ದೀಪಿಕಾ ಪಡುಕೋಣೆ ಈಗಾಗಲೇ ಹೂಡಿಕೆ ಮಾಡಿರುವ ಹಲವಾರಿ ಸ್ಟಾರ್ಟ್‌ಅಪ್‌ಗಳು  ಉತ್ತಮ ವ್ಯವಹಾರ ನಡೆಸುತ್ತಿವೆ.  ಎಪಿಗಾಮಿಯಾ, ಫರ್ಲೆಂಕೊ, ಬ್ಲೂ ಸ್ಮಾರ್ಟ್, ಬೆಲಾಟ್ರಿಕ್ಸ್, ಅಟೊಂಬರ್ಗ್ ಟೆಕ್ನಾಲಜೀಸ್, ಫ್ರಂಟ್ ರೋ, ಮೊಕೊಬರಾ, ಸೂಪರ್‌ಟೇಲ್ಸ್, ನುವಾ ಮತ್ತು ಪರ್ಪಲ್ ಮುಂತಾದ ಸಂಸ್ಥೆಯಲ್ಲಿ ದೀಪಿಕಾ ಹೂಡಿಕೆ ಮಾಡಿದ್ದಾರೆ. 

ಸೆಪ್ಟೆಂಬರ್ ತಿಂಗಳಿಂದ ತರಕಾರಿ ಬೆಲೆ ಇಳಿಕೆ: ಆರ್ ಬಿಐ ಗವರ್ನರ್

ದೀಪಿಕಾ ಅವರ ಕೆಎ ಎಂಟರ್‌ಪ್ರೈಸಸ್ ಆರಂಭಿಕ ಹಂತದಲ್ಲಿ 3-5 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡುತ್ತದೆ. ವ್ಯಾಪಾರವು ಬೆಳೆದಂತೆ ಕಂಪನಿಯು ಹೂಡಿಕೆ ಜೊತೆ ತನ್ನ ಲಾಭವನ್ನು ಸಹ ಹೆಚ್ಚಿಸುತ್ತದೆ. ಕಂಪನಿ ವೆಬ್‌ಸೈಟ್ ಪ್ರಕಾರ, ಇಲ್ಲಿಯವರೆಗೆ ವೆಂಚರ್ ಕ್ಯಾಪಿಟಲ್  200 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ.

ದೀಪಿಕಾ ಹಾಗೂ ರಣವೀರ್ ಸಿಂಗ್ ಕೆಲ ದಿನಗಳ ಹಿಂದೆ ಮನೆ ವಿಷ್ಯಕ್ಕೆ ಚರ್ಚೆಗೆ ಬಂದಿದ್ದಾರೆ. ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಅದ್ಧೂರಿ ಮನೆ ಸಿದ್ದವಾಗ್ತಿದೆ. 16ರಿಂದ 19ನೇ ಮಹಡಿಯವರೆಗೆ ಇರುವ ಕ್ವಾಡ್ರಪ್ಲೆಕ್ಸ್ ಮನೆ ಬೆಲೆ  119 ಕೋಟಿ ಎನ್ನಲಾಗಿದೆ.ವರದಿ ಪ್ರಕಾರ, ದೀಪಿಕಾ ಪಡುಕೋಣೆ ಕಂಪನಿಯ ನಿವ್ವಳ ಮೌಲ್ಯ 500 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಈ ಮೂಲಕ ಬಾಲಿವುಡ್ ನ ಶ್ರೀಮಂತ ನಟಿಯರಲ್ಲಿ ದೀಪಿಕಾ ಒಬ್ಬರಾಗಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!