ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಸತತವಾಗಿ ಪ್ರಯತ್ನಪಟ್ಟರೆ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯ ಎಂದು ಹಿರಿಯರು ಹೇಳುತ್ತಾರೆ. ಇದು ನಿಜ ಅನ್ನೋದನ್ನು ಹಲವು ಉದ್ಯಮಿಗಳು ಸಾಬೀತುಪಡಿಸಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಈ ಉದ್ಯಮಿ. ಬೆಂಗಳೂರಿನಲ್ಲಿ ಭಿಕ್ಷೆ ಬೇಡ್ತಿದ್ದವರು ಈಗ ಕೋಟಿ ವ್ಯವಹಾರ ನಡೆಸೋ ಸಂಸ್ಥೆಯ ಉದ್ಯಮಿ.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಸತತವಾಗಿ ಪ್ರಯತ್ನಪಟ್ಟರೆ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯ ಎಂದು ಹಿರಿಯರು ಹೇಳುತ್ತಾರೆ. ಇದು ನಿಜ ಅನ್ನೋದನ್ನು ಹಲವು ಉದ್ಯಮಿಗಳು ಸಾಬೀತುಪಡಿಸಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ಉದ್ಯಮಿ ರೇಣುಕಾ ಆರಾಧ್ಯ. ಜೀವನೋಪಾಯಕ್ಕಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವರು. ತಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಇಂದು 40 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ.
ರೇಣುಕಾ ಆರಾಧ್ಯ, ಕರ್ನಾಟಕದ ಬೆಂಗಳೂರು ಸಮೀಪದ ಸಣ್ಣ ಹಳ್ಳಿಯಿಂದ ಬಂದವರು. ಅತ್ಯಂತ ಬಡ ಕುಟುಂಬದಲ್ಲಿ (Poor family) ಜನಿಸಿದ ಅವರ ಕುಟುಂಬದ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿತ್ತು, ಆರಾಧ್ಯ ತನ್ನ 10ನೇ ತರಗತಿಯನ್ನು ಮುಗಿಸಿದ ನಂತರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹಲವು ಮನೆಗಳಿಗೆ ಕೆಲಸ ಮಾಡಲು ಹೋಗಬೇಕಾಯಿತು. ರೇಣುಕಾ ಆರಾಧ್ಯ, ಕ್ರಮೇಣ ಅರ್ಚಕರಾಗಿ ಕೆಲಸ ಮಾಡಲು ಆರಂಭಿಸಿದರು. ನಂತರ ಮನೆ ಮನೆಗೆ ತೆರಳಿ ಅಕ್ಕಿ, ಹಿಟ್ಟು, ಬೇಳೆಕಾಳುಗಳನ್ನು ಭಿಕ್ಷೆ ಬೇಡಬೇಕಾಯಿತು. ಆದರೂ ಜೀವನ ನಿರ್ವಹಿಸುವುದು ಕಷ್ಟವಾಗ್ತಿತ್ತು. ಹೀಗಾಗಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಜಾಯಿನ್ ಆದರು. ಆ ಬಳಿಕ ಕಾರ್ಖಾನೆಯೊಂದರಲ್ಲಿ ಕೆಲಸವನ್ನು ಪಡೆದರು.
ಬಟ್ಟೆಯಂಗಡಿಯಲ್ಲಿ ಕೆಲಸ ಮಾಡ್ತಿದ್ದಾತ ಈಗ ಬಿಲಿಯನೇರ್, ಮೂರು ದಿಗ್ಗಜ ಕಂಪೆನಿಗಳ ಒಡೆಯ!
ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ ಸ್ವಂತ ಉದ್ಯಮ ಆರಂಭಿಸಿದ ಕನ್ನಡಿಗ
ಅದರ ನಂತರ, ಅವರು ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಮದುವೆಯಾಗಲು ನಿರ್ಧರಿಸಿದಾಗ ರೇಣುಕಾಗೆ ಕೇವಲ 20 ವರ್ಷ. ಮದುವೆಯಾದರೆ, ಹೆಚ್ಚುವರಿ ಜವಾಬ್ದಾರಿ, ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಅವರು ನಂಬಿದ್ದರು. ಹೀಗಾಗಿ ಸೂಕ್ತ ಹುಡುಗಿಯನ್ನು ಮದುವೆಯಾದರು.
ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಸ್ವಂತ ಉದ್ಯಮ ಆರಂಭಿಸುವ ಯೋಚನೆ ಬಂತು. ಸೂಟ್‌ಕೇಸ್ ಕವರ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದರು. ಆದರೆ ಕೆಲಸಗಳು ಅವರು ಅಂದುಕೊಂಡಂತೆ ನಡೆಯಲ್ಲಿಲ್ಲ. ಭದ್ರತಾ ಸಿಬ್ಬಂದಿಯಾಗಿ (Security guard) ಕೆಲಸ ಮಾಡುತ್ತಾ ಸುಮಾರು 30,000 ರೂ ನಷ್ಟವನ್ನು ಅನುಭವಿಸಿದರು. ಆದರೆ ಹಣ ವಸೂಲಿ ಮಾಡಲು ಸಾಧ್ಯವಾಗಲಿಲ್ಲ.
ಹೀಗಾಗಿ ಡ್ರೈವಿಂಗ್ ಕಲಿತು ಟ್ರಾವೆಲ್ ಏಜೆನ್ಸಿಯಲ್ಲಿ ಡ್ರೈವರ್ ಕೆಲಸ (Work) ಗಿಟ್ಟಿಸಿಕೊಂಡರು. ವಿದೇಶಿ ಪ್ರವಾಸಿಗರನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಿದ್ದರು. 4 ವರ್ಷಗಳ ಕಾಲ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಿದ ಬಳಿಕ, ಸ್ವತಃ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಪ್ರವಾಸಿ ಕ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಸ್ವಂತ ಹಣವನ್ನು ಹೂಡಿಕೆ (Investment) ಮಾಡಿದರು ಮತ್ತು ಕೆಲವು ಬ್ಯಾಂಕ್‌ಗಳ ಸಹಾಯವನ್ನು ಪಡೆದರು.
ಭಾರತಕ್ಕೆ ಟೂರಿಸ್ಟ್ ಆಗಿ ಬಂದಿದ್ದಾಕೆ ಈಗ ಬಿಲಿಯನೇರ್, ಕೋಟಿ ಸಂಸ್ಥೆಗಳ ಒಡತಿ; ಟಾಟಾ ಫ್ಯಾಮಿಲಿ ಜೊತೆ ಇರೋ ನಂಟೇನು?
ಒಂದು ಕಾರು ಖರೀದಿಸಿ ಟ್ರಾವೆಲ್ ಏಜೆನ್ಸಿ ಆರಂಭಿಸಿದವರು ಈಗ ಕೋಟ್ಯಾಧಿಪತಿ
ಮೊದಲಿಗೆ ಒಂದು ಕಾರನ್ನು ಖರೀದಿಸಿದರು. ಒಂದು ವರ್ಷದ ನಂತರ ಮತ್ತೊಂದು ಕಾರು ಖರೀದಿಸಿದರು. ಇದೇ ವೇಳೆ ಟ್ರಾವೆಲ್ ಏಜೆನ್ಸಿಯೊಂದು ತನ್ನ ವ್ಯಾಪಾರವನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದು ಅವರಿಗೆ ತಿಳಿಯಿತು. ರೇಣುಕಾ ಆರಾಧ್ಯ ಅದನ್ನು 6 ಲಕ್ಷಕ್ಕೆ ಖರೀದಿಸಿದರು. ಆ ಸಮಯದಲ್ಲಿ ಕಂಪೆನಿ 35 ಕ್ಯಾಬ್‌ಗಳನ್ನು ಹೊಂದಿತ್ತು.
ಇಲ್ಲಿಂದ ರೇಣುಕಾರ ಅದೃಷ್ಟ ಬದಲಾಯಿತು. ಇದರ ನಂತರ, ಅಮೆಜಾನ್ ಇಂಡಿಯಾ ತನ್ನ ಕಂಪನಿಯನ್ನು ತನ್ನ ಪ್ರಚಾರಕ್ಕಾಗಿ ಆಯ್ಕೆ ಮಾಡಿತು. ವಾಲ್‌ಮಾರ್ಟ್ ಮತ್ತು ಜನರಲ್ ಮೋಟಾರ್ಸ್‌ನಂತಹ ಕಂಪನಿಗಳು ಸಹ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದವು. ಕ್ರಮೇಣ ಕಂಪನಿಯ ವಹಿವಾಟು ಹೆಚ್ಚಾಗತೊಡಗಿರು. 40 ಕೋಟಿ ರೂ. ವರೆಗೂ ತಲುಪಿತು. ಇಂದು ರೇಣುಕಾ ಆರಾಧ್ಯ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ.