ಅಂಬಾನಿ ನೇತೃತ್ವದ ಬೃಹತ್ ಸಂಸ್ಥೆ ರಿಲಯನ್ಸ್‌ನಲ್ಲಿ ಇದೀಗ ಸಾವಿರಾರು ಕೋಟಿ ಹೂಡಿಕೆ ಮಾಡಲು ಕೆಕೆಆರ್ ಮುಂದಾಗಿದೆ. ಎಷ್ಟು ಕೋಟಿ ಹೂಡಿಕೆಯಾಗಲಿದೆ?
ಮುಂಬೈ (ಸೆ.25): ಅಮೆರಿಕದ ಪ್ರಖ್ಯಾತ ಹೂಡಿಕೆ ಸಂಸ್ಥೆಗಳಲ್ಲಿ ಒಂದಾದ ಕೆಕೆಆರ್ ರಿಲಯನ್ಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿದೆ.
ರಿಲಯನ್ಸ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಕೆಕೆಆರ್ 5500 ಕೋಟಿ ರು. ಹೂಡಿಕೆ ಮಾಡಿ, ಇದು ರಿಲಯನ್ಸ್ ರಿಟೇಲ್‌ನ ಶೇ.1.28ರಷ್ಟುಬಂಡವಾಳವನ್ನು ಕೊಂಡು ಕೊಂಡಿದೆ.
ಈ ಹಿಂದೆ ಜಿಯೋ ಫ್ಲಾಟ್‌ಫಾರಂನಲ್ಲಿಯೂ ಕೂಡ ಕೆಕೆಆರ್ 11,367 ಕೋಟಿ ರು. ಹೂಡಿಕೆ ಮಾಡಿತ್ತು. ಈ ಹಿಂದೆ ರಿಲಯನ್ಸ್ ಜಿಯೋನಲ್ಲಿ ಗೂಗಲ್ 33737 ಕೋಟಿ ರು. ಹಾಗೂ ಅಮೆಜಾನ್ 43,574ಕೋಟಿ ರು.ಗಳನ್ನು ಹೂಡಿಕೆ ಮಾಡಿತ್ತು.
ಕೊರೋನಾ ಮಧ್ಯೆ ಏರಿದ್ದ ಚಿನ್ನ, ಬೆಳ್ಳಿ ದರ ಇಳಿಕೆ ಹಾದಿಯಲ್ಲಿ: ಇಲ್ಲಿದೆ ಸೆ.24ರ ರೇಟ್! ...
undefined
ಈಗಾಗಲೇ ರಿಲಯನ್ಸ್ ಸಂಸ್ಥೆಯಲ್ಲಿ ಭಾರೀ ಪ್ರಮಾಣದ ಹೂಡಿಕೆಗಳು ಮಾಡಲಾಗಿದ್ದು ಇದಕ್ಕೆ ಇದೀಗ ಅಮೆರಿಕಾದ ಸಂಸ್ಥೆಯೂ ಹೊಸ ಸೇರ್ಪಡೆಯಾಗಿದೆ.
ಅಂಬಾನಿ ಒಡೆತನದ ರಿಲಯನ್ಸ್ ಮಾರುಕಟ್ಟೆ ವಿಶ್ವವ್ಯಾಪಿ ವಿಸ್ತರಿಸಿದ್ದು, ಕೊಟ್ಯಂತ ವ್ಯವಹಾರಗಳು ನಡೆಯುತ್ತವೆ.