ರಿಲಯನ್ಸ್ Q2 ಲಾಭ ಎಷ್ಟು?: ಮುಖೇಶ್ ಕಿಂಗ್ ಯಾಕೆ ಗೊತ್ತಾ?

Published : Oct 17, 2018, 07:50 PM IST
ರಿಲಯನ್ಸ್ Q2 ಲಾಭ ಎಷ್ಟು?: ಮುಖೇಶ್ ಕಿಂಗ್ ಯಾಕೆ ಗೊತ್ತಾ?

ಸಾರಾಂಶ

ರಿಲಯನ್ಸ್ ಇಂಡಸ್ಟ್ರಿ ದ್ವಿತೀಯ ತ್ರೈಮಾಸಿಕ ವರದಿ! ಕಂಪನಿಗೆ ಬರೋಬ್ಬರಿ 9,516 ಕೋಟಿ ರೂ. ನಿವ್ವಳ ಲಾಭ! ರಿಲಯನ್ಸ್ ಇತಿಹಾಸದಲ್ಲೇ ಅತ್ಯಧಿಕ ತ್ರೈಮಾಸಿಕ ಲಾಭ! ನಿವ್ವಳ ಲಾಭದಲ್ಲಿ ಶೇ. 17.35 ರಷ್ಟು ಹೆಚ್ಚಳ! ಕಂಪನಿಯ ಏಕೀಕೃತ ಆದಾಯದಲ್ಲೂ ಭಾರೀ ಹೆಚ್ಚಳ

ಮುಂಬೈ(ಅ.17): ರಿಲಯನ್ಸ್ ಸಂಸ್ಥೆ ತನ್ನ ದ್ವಿತೀಯ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಬರೋಬ್ಬರಿ 9,516 ಕೋಟಿ ರೂ. ನಿವ್ವಳ ಲಾಭ ತೋರಿಸಿದೆ. ರಿಲಯನ್ಸ್ ಸಂಸ್ಥೆ ಇತಿಹಾಸದಲ್ಲೇ ಇದು ಅತ್ಯಧಿಕ ಪ್ರಮಾಣದ ತ್ರೈಮಾಸಿಕ ಲಾಭ ಎನ್ನಲಾಗಿದೆ.

ಕಂಪನಿಯ ನಿವ್ವಳ ಲಾಭದಲ್ಲಿ ಶೇ. 17.35 ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ  9,516 ಕೋಟಿ ರೂ. ಗಳಿಸಿದೆ ಎಂದು ವರದಿ ತಿಳಿಸಿದೆ. ಹಾಥ್ ವೇ ಮತ್ತು ಡೆನ್ ನೆಟವರ್ಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್, ಎರಡು ಕಂಪನಿಗಳಿಂದ ತಲಾ ಶೇ. 25 ರಷ್ಟು ಲಾಭ ಪಡೆಯುತ್ತಿದೆ.

ಇನ್ನು ಕಂಪನಿಯ ಏಕೀಕೃತ ಆದಾಯದಲ್ಲೂ ಭಾರೀ ಹೆಚ್ಚಳವಾಗಿದ್ದು, ಶೇ. 54.5ರಷ್ಟು ಹೆಚ್ಚಿನ ಆದಾಯ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೆಟ್ರೋಕೆಮಿಕಲ್ ಮತ್ತು ರಿಫೈನರಿ ಉತ್ಪನ್ನಗಳ ಬೆಲೆ ಹೆಚ್ಚಳ ಕೂಡ ತ್ರೈಮಾಸಿಕ ಲಾಭಕ್ಕೆ ಕೊಡುಗೆ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ