ದೀಪಾವಳಿಗೆ ಅಂಬಾನಿ ಕೊಡುಗೆ, ಕೇವಲ 10 ರೂಪಾಯಿಗೆ ಖರೀದಿಸಿ 24 ಕಾರೆಟ್ ಶುದ್ಧ ಚಿನ್ನ!

Published : Oct 29, 2024, 07:50 PM IST
ದೀಪಾವಳಿಗೆ ಅಂಬಾನಿ ಕೊಡುಗೆ, ಕೇವಲ 10 ರೂಪಾಯಿಗೆ ಖರೀದಿಸಿ 24 ಕಾರೆಟ್ ಶುದ್ಧ ಚಿನ್ನ!

ಸಾರಾಂಶ

ಮುಕೇಶ್ ಅಂಬಾನಿ ಈ ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಜಿಯೋ ಫೈನಾನ್ಸ್ ಸ್ಮಾರ್ಟ್ ಗೋಲ್ಡ್ ಯೋಜನೆಯಿಂದ ಇದೀಗ 24 ಕಾರೆಟ್ ಶುದ್ಧ ಚಿನ್ನವನ್ನು ಕೇವಲ 10 ರೂಪಾಯಿಗೆ ಖರೀದಿಸಬುಹುದು. 

ನವದೆಹಲಿ(ಅ.29)  ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಹಲವು ಕೊಡುಗೆ ನೀಡಿದೆ. ಈ ಪೈಕಿ ಕೇವಲ 10 ರೂಪಾಯಿಗೆ ಶುದ್ಧ ಚಿನ್ನ ಖರೀದಿಸುವ ಹೊಸ ಯೋಜನೆಯನೊಂದನ್ನು ಘೋಷಿಸಿದೆ. ದೀಪಾವಳಿಗೂ ಮುನ್ನ ಬರವು ದನ್ ತೇರಸ್‌ ಇದೀಗ ಉತ್ತರ ಭಾರತ ಮಾತ್ರವಲ್ಲ, ದಕ್ಷಿಣದಲ್ಲೂ ಜನಪ್ರಿಯಗೊಂಡಿದೆ. ಈ ವೇಳೆ ಚಿನ್ನಾಭರಣ ಖರೀದಿ ಸಂಪ್ರದಾಯ. ಇದೀಗ ಜಿಯೋ ಫೈನಾನ್ಸ್ ಸ್ಮಾರ್ಟ್ ಗೋಲ್ಡ್ ಯೋಜನೆಯಡಿ ಚಿನ್ನ ಖರೀದಿ, ಹೂಡಿಕೆ ಮಾಡುವ ಅವಕಾಶ ನೀಡಿದೆ. ವಿಶೇಷ ಅಂದರೆ ಕನಿಷ್ಠ 10 ರೂಪಾಯಿ ಸಾಕು. 

ಸ್ಮಾರ್ಟ್‌ಗೋಲ್ಡ್ ಯೋಜನೆ ಅಡಿಯಲ್ಲಿ ಚಿನ್ನವನ್ನು ಡಿಜಿಟಲ್ ಸ್ವರೂಪದಲ್ಲಿ ಖರೀದಿಸುವ ಮೂಲಕ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬಹುದು. ಚಿನ್ನದ ಹೂಡಿಕೆಯಿಂದ ಪಡೆದ ಸ್ಮಾರ್ಟ್‌ಗೋಲ್ಡ್ ಯೂನಿಟ್ ಗಳನ್ನು ಯಾವುದೇ ಸಮಯದಲ್ಲಿ ನಗದು, ಚಿನ್ನದ ನಾಣ್ಯಗಳು ಅಥವಾ ಆಭರಣಗಳಾಗಿ ಪರಿವರ್ತಿಸಬಹುದು. ಈ ಪೈಕಿ ಮತ್ತೊಂದು ಪ್ರಮುಖ  ವಿಚಾರ ಎಂದರೆ, ಸ್ಮಾರ್ಟ್ ಗೋಲ್ಡ್ ನಲ್ಲಿ (SmartGold) ಸಾವಿರಾರು ಅಥವಾ ಲಕ್ಷ ರೂಪಾಯಿಗಳಷ್ಟು ಹೂಡಿಕೆ ಮಾಡುವ ಅಗತ್ಯವಿಲ್ಲ, ಕೇವಲ 10 ರೂಪಾಯಿಗೂ ಚಿನ್ನವನ್ನು ಖರೀದಿಸಬಹುದು. ಇದು ಈ ಯೋಜನೆಯ ವಿಶೇಷತೆ. 

ಕೇವಲ 699 ರೂಗೆ ಜಿಯೋ ಭಾರತ್ 4ಜಿ ಫೋನ್, ಇದು ದೀಪಾವಳಿ ಹಬ್ಬದ ಲಿಮಿಟೆಡ್ ಆಫರ್!

ಜಿಯೋ ಫೈನಾನ್ಸ್ ಅಪ್ಲಿಕೇಷನ್‌ನಲ್ಲಿ ಸ್ಮಾರ್ಟ್‌ಗೋಲ್ಡ್ ಯೋಜನೆಯಡಿ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಎರಡು ಆಯ್ಕೆಗಳು ಗ್ರಾಹಕರಿಗೆ ಲಭ್ಯವಿವೆ. ಮೊದಲನೆಯದಾಗಿ ಹೂಡಿಕೆಯ ಒಟ್ಟು ಮೊತ್ತವನ್ನು ನಿರ್ಧರಿಸಬಹುದು, ಎರಡನೆಯದಾಗಿ ಚಿನ್ನದ ತೂಕದ ಆಧಾರದಲ್ಲಿ, ಅಂದರೆ ಗ್ರಾಂ ಲೆಕ್ಕದಲ್ಲಿ ಹೂಡಿಕೆ ಮಾಡಬಹುದು. ಭೌತಿಕ ಚಿನ್ನದ ವಿತರಣೆಯು 0.5 ಗ್ರಾಂ ಮತ್ತು ಅದಕ್ಕಿಂತ ಹೆಚ್ಚು ಇರಬೇಕಾಗುತ್ತದೆ. ಇದು 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ ಮತ್ತು 10 ಗ್ರಾಂಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಬಯಸಿದರೆ, ಅವರು ನೇರವಾಗಿ ಅಪ್ಲಿಕೇಷನ್‌ನಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿಸುವ ಮೂಲಕ ಹೋಮ್ ಡೆಲಿವರಿ ಸೌಲಭ್ಯವನ್ನು ಸಹ ಪಡೆಯಬಹುದು.

ಗ್ರಾಹಕರ ಚಿನ್ನವನ್ನು ಸುರಕ್ಷಿತವಾಗಿಡುವುದಕ್ಕಾಗಿ ಹೂಡಿಕೆಯ ನಂತರ, ಸ್ಮಾರ್ಟ್ ಗೋಲ್ಡ್ ಹೂಡಿಕೆಗೆ ಸಮನಾದ 24 ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತದೆ ಮತ್ತು ಅದನ್ನು ವಿಮೆ ಮಾಡಿದ ವಾಲ್ಟ್‌ನಲ್ಲಿ ಇರಿಸುತ್ತದೆ. ಇದು ಚಿನ್ನವನ್ನು ಜೋಪಾನ ಮಾಡಬೇಕು ಎಂಬ ನಿಮ್ಮ ಜವಾಬ್ದಾರಿಯಿಂದ ಮುಕ್ತಗೊಳಿಸುವುದಲ್ಲದೆ, ಚಿನ್ನವು ಕಳ್ಳತನ ಆಗುತ್ತದೆ ಎಂಬ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಜಿಯೋ ಫೈನಾನ್ಸ್ ಅಪ್ಲಿಕೇಷನ್‌ನಲ್ಲಿ ನೀವು ಬಯಸಿದಾಗ ಚಿನ್ನದ ನೇರ ಮಾರುಕಟ್ಟೆ ಬೆಲೆಗಳನ್ನು ನೋಡಬಹುದು. ಸ್ಮಾರ್ಟ್ ಗೋಲ್ಡ್  ಡಿಜಿಟಲ್ ಚಿನ್ನವನ್ನು ಖರೀದಿಸಲು ಅನುಕೂಲಕರ, ಸುರಕ್ಷಿತ ಮತ್ತು ಅರ್ಥಪೂರ್ಣ ಮಾರ್ಗವಾಗಿದೆ.
ಜಿಯೋ 153 ರೂ ಪ್ಲಾನ್, ಉಚಿತ ಡೇಟಾ, 28 ವ್ಯಾಲಿಟಿಡಿ ಜೊತೆಗೆ ಜಿಯೋ ಟಿವಿ-ಸಿನಿಮಾ ಸಬ್‌ಸ್ಕ್ರಿಪ್ಶನ್!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!