ಸರ್ಕಾರಿ ಐಒಸಿ ಹಿಂದಿಕ್ಕಿದ ರಿಲಯನ್ಸ್ ಈಗ ಆದಾಯದಲ್ಲಿ ನಂ.1!

By Kannadaprabha News  |  First Published Dec 17, 2019, 8:30 AM IST

ಸರ್ಕಾರಿ ಐಒಸಿ ಹಿಂದಿಕ್ಕಿದ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಅತಿದೊಡ್ಡ ಕಂಪನಿ ಹಿರಿಮೆ| ಈಗ ಆದಾಯದಲ್ಲಿ ನಂ.1!


ನವದೆಹಲಿ[ಡಿ.17]: ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌, ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಅನ್ನು ಹಿಂದಿಕ್ಕಿ ಭಾರತದ ಅತಿದೊಡ್ಡ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

5.81 ಲಕ್ಷ ಕೋಟಿ ರು. ಆದಾಯದೊಂದಿಗೆ 2018-​19ನೇ ಸಾಲಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 10 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಐಒಸಿಯನ್ನು ಹಿಂದಿಕ್ಕಿದೆ. ಈ ಸಾಧನೆ ಮಾಡಿದ ಮೊದಲ ಖಾಸಗಿ ಕಂಪನಿ ಎನಿಸಿಕೊಂಡಿದೆ. 2018​-19ರ ಅವಧಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಆದಾಯ ಶೇ.41.5ರಷ್ಟು ಏರಿಕೆಯಾಗಿದೆ.

Tap to resize

Latest Videos

ಇದೇ ವೇಳೆ ಐಒಸಿ 5.36 ಲಕ್ಷ ಕೋಟಿ ರು. ಆದಾಯ ಗಳಿಸಿದ್ದು, ಶೇ.26.6ರಷ್ಟುಅಭಿವೃದ್ಧಿ ದಾಖಲಿಸಿದೆ. ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಗೆ ಮೂರನೇ ಸ್ಥಾನ ಲಭ್ಯವಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಟಾಟಾ ಮೋಟಾ​ರ್‍ಸ್, ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ನಂತರದ ಸ್ಥಾನದಲ್ಲಿವೆ ಎಂದು ಫಾರ್ಚುನ್‌ ಇಂಡಿಯಾ ವರದಿ ತಿಳಿಸಿದೆ.

click me!