ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 5% ನಷ್ಟವನ್ನು ಅನುಭವಿಸಿದೆ. ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಹಾಗೂ ಟೆಲಿಕಾಂ ಮತ್ತು ರಿಟೇಲ್ ಇಂಡಸ್ಟ್ರಿಯಲ್ಲಿ ಕಡಿಮೆ ಮಾರ್ಜಿನ್ ಸಿಕ್ಕ ಹಿನ್ನೆಲೆ ನಿವ್ವಳ ಲಾಭದ ಪರಿಣಾಮ ಇಳಿಕೆಯಾಗಿದೆ.
ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ಕಂಪನಿ ರಿಲಯನ್ಸ್ ಇಂಡಸ್ಟ್ರಿ ಸಹ ಒಂದು ವರ್ಷದಲ್ಲಿ 42 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಮೂಲಕ ಕಂಪನಿ ತನ್ನ ವೆಚ್ಚವನ್ನು ಕಡಿತಗೊಳಿಸಿದೆ. ಉದ್ಯೋಗಿಗಳನ್ನು ಕಡಿತಗೊಳಿಸಿರುವ ಮಾಹಿತಿಯನ್ನು ತನ್ನ ವಾರ್ಷಿಕ ಜನರಲ್ ರಿಪೋರ್ಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಈ ರಿಪೋರ್ಟ್ ಪ್ರಕಾರ, ಆರ್ಥಿಕ ವರ್ಷ 2023ರ ವೇಳೆ ಕಂಪನಿಯಲ್ಲಿ 3,89,000 ಉದ್ಯೋಗಿಗಳಿದ್ದರು. 2024ರಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.11ರಷ್ಟು ಕಡಿತಗೊಂಡಿದ್ದು, ಸದ್ಯ 3,47,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 42 ಸಾವಿರ ಉದ್ಯೋಗಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಡಿತಗೊಳಿಸಿದೆ. ರಿಲಯನ್ಸ್ ರಿಟೇಲ್‌ನಲ್ಲಿ ಹೆಚ್ಚು ಜಾಬ್ ಕಡಿತಗೊಂಡಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಹೊಸ ಉದ್ಯೋಗಿಗಳ ನೇಮಕಾತಿಯಲ್ಲಿ ಮೂರನೇ ಒಂದು ಭಾಗದಷ್ಟು ಅಂದ್ರೆ 1,70,000ರಷ್ಟು ಕಡಿತಗೊಳಿಸಲಾಗಿದೆ. ಅದರಲ್ಲಿಯೂ ವಿಶೇಷವಾಗಿ ರಿಟೇಲ್ ಉದ್ಯಮದಲ್ಲಿ ಕೆಲಸದ ಕಡಿತ ಅಧಿಕವಾಗಿದೆ. ರಿಟೇಲ್ ವಿಭಾಗದಲ್ಲಿ ಕಳೆದ ಹಣಕಾಸಿನ ವರ್ಷದ ಶೇ.60ರಷ್ಟು ಉದ್ಯೋಗಿಗಳು ಅಂದ್ರೆ 2,07,000 ಕಾರ್ಯನಿರ್ವಹಿಸುತ್ತಿದ್ದಾರೆ. 2023ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ 2,45,000 ಆಗಿತ್ತು. ಇನ್ನು ಜಿಯೋದಲ್ಲಿ 95 ಸಾವಿರದಿಂದ 90 ಸಾವಿರಕ್ಕೆ ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಅಂದ್ರೆ 2024ರಲ್ಲಿ ನಮ್ಮಲ್ಲಿ ಕೆಲಸ ತೊರೆಯುವವರ ಸಂಖ್ಯೆ ಇಳಿಮುಖ ಕಂಡಿದೆ ಎಂದು ರಿಲಯನ್ಸ್ ಹೇಳಿಕೆ ಬಿಡುಗಡೆ ಮಾಡಿದೆ.
2024ರ ಹಣಕಾಸು ವರ್ಷದಲ್ಲಿ ಭಾರತದ ಟಾಪ್ 10 ಲಾಭದಾಯಕ ಕಂಪನಿಗಳಿವು!
ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿಯ ಪ್ರಕಾರ, ಅದು ತನ್ನ ಉದ್ಯೋಗಿಗಳಿಗೆ ಒದಗಿಸುವ ವಿವಿಧ ಸೌಲಭ್ಯಗಳ ಮೇಲಿನ ವೆಚ್ಚವನ್ನು ಶೇ.3ರಷ್ಟು ಹೆಚ್ಚಳ ಮಾಡಿದ್ದು, 25,699 ಕೋಟಿಗೆ ಏರಿಕೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.33ರಷ್ಟು ಹೆಚ್ಚಳ ಮಾಡಲಾಗಿದೆ. 2022-23ರಲ್ಲಿ ರಿಲಯನ್ಸ್ ರಿಟೇಲ್ ಹೊಸದಾಗಿ 3,300 ಸ್ಟೋರ್‌ಗಳನ್ನು ಆರಂಭಿಸಿದೆ, ಒಟ್ಟು ಸ್ಟೋರ್‌ಗಳ ಸಂಖ್ಯೆ 18 ಸಾವಿರಕ್ಕೂ ಅಧಿಕವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 5% ನಷ್ಟವನ್ನು ಅನುಭವಿಸಿದೆ. ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಹಾಗೂ ಟೆಲಿಕಾಂ ಮತ್ತು ರಿಟೇಲ್ ಇಂಡಸ್ಟ್ರಿಯಲ್ಲಿ ಕಡಿಮೆ ಮಾರ್ಜಿನ್ ಸಿಕ್ಕ ಹಿನ್ನೆಲೆ ನಿವ್ವಳ ಲಾಭದ ಪರಿಣಾಮ ಇಳಿಕೆಯಾಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಲಾಭವು 15,138 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 16,011 ಕೋಟಿ ರೂಪಾಯಿಗಳಷ್ಟಿತ್ತು. ಇದಕ್ಕೂ ಮುನ್ನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಆರ್ ಐಎಲ್ ದಾಖಲೆಯ 18,951 ಕೋಟಿ ರೂ ಆಗಿದೆ.
ಅನಂತ್ ಅಂಬಾನಿ ಮದುವೆ ಬೆನ್ನಲ್ಲೇ ಜಿಯೋಗೆ 5,445 ಕೋಟಿ ರೂ ತ್ರೈಮಾಸಿಕ ಲಾಭ!