ನವದೆಹಲಿ(ಡಿ.30): ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ತಮ್ಮ ರಿಲಯನ್ಸ್ ಕಂಪನಿಯ ಮುಖ್ಯಸ್ಥ ಹುದ್ದೆ ವರ್ಗಾವಣೆಯ ಸುಳಿವು ನೀಡಿದ್ದಾರೆ.
ಕಂಪನಿ ಸಂಸ್ಥಾಪಕ ಧೀರುಬಾಯಿ ಅಂಬಾನಿಯ ಜನ್ಮದಿನದ ಸ್ಮರಣಾರ್ಥ ಆಯೋಜಿಸಿದ ‘ರಿಲಯನ್ಸ್ ಕುಟುಂಬ ದಿವಸ’ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೊಡ್ಡ ಕನಸು, ಅಸಾಧ್ಯವೆಂದು ಕಾಣುವ ಗುರಿಯನ್ನು ಸಾಧಿಸಲು ಸರಿಯಾದ ನಾಯಕತ್ವದ ಅಗತ್ಯವಿದೆ. ರಿಲಯನ್ಸ್ ಈಗ ನಾಯಕತ್ವದ ವರ್ಗಾವಣೆಯ ಮಹತ್ವದ ಹಂತದಲ್ಲಿದೆ. ಹಿರಿಯರಿಂದ ನನ್ನ ಪೀಳಿಗೆಗೆ ಬಂದಂತೆ ಮುಂದಿನ ಪೀಳಿಗೆಯ ಯುವ ನಾಯಕರಿಗೆ ವರ್ಗಾವಣೆಯಾಗಲಿದೆ. ಮಕ್ಕಳಾದ ಆಕಾಶ್, ಇಶಾ, ಅನಂತ ರಿಲಯನ್ಸ್ ಖ್ಯಾತಿಯನ್ನು ಇನ್ನಷ್ಟುಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು.
undefined
ಡಿಸ್ಕೌಂಟ್ ನೀಡಿ ತಗಲಾಕಿಕೊಂಡ ಜೊಮ್ಯಾಟೋ, ಸ್ವಿಗ್ಗಿ; ಆದಾಯ ತೆರಿಗೆ ಇಲಾಖೆಯಿಂದ ತನಿಖೆ!
ರಿಲಯನ್ಸ್, ಗುಜರಾತ್‌ನ ಜಾಮ್‌ನಗರದಲ್ಲಿರುವ ತೈಲ ಸಂಸ್ಕರಣಾಗಾರಗಳು, ಪೆಟ್ರೋಕೆಮಿಕಲ್ಸ್ ಪ್ಲಾಂಟ್‌ಗಳು ಮತ್ತು ಹೊಸ ಇಂಧನ ಕಾರ್ಖಾನೆಗಳು, ಭೌತಿಕ ಮಳಿಗೆಗಳು ಹಾಗೂ ಜಿಯೋಮಾರ್ಟ್‌ನಲ್ಲಿ ಆನ್‌ಲೈನ್ ಇ-ಕಾಮರ್ಸ್ ಘಟಕ ಅಲ್ಲದೇ ಜಿಯೋದಲ್ಲಿ ಟೆಲಿಕಾಂ ಮತ್ತು ಡಿಜಿಟಲ್ ವ್ಯವಹಾರವನ್ನು ಒಳಗೊಂಡ ಬೃಹತ್ ಕಂಪನಿಯಾಗಿದೆ.
ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!
ಭಾರತದಲ್ಲಿ ಡೇಟಾ(Mobile data) ಹಾಗೂ ಮೊಬೈಲ್ ನೆಟ್‌ವರ್ಕ್(Mobile Network) ಮೂಲಕ ಕ್ರಾಂತಿ ಮಾಡಿರುವ ಜಿಯೋಗೆ ಮತ್ತೊಂದು ಹಿರಿಮೆ ಸೇರಿಕೊಂಡಿದೆ.ಇಂಗಾಲ ಹೊರಸೂಸುವಿಕೆ ನಿಯಂತ್ರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈ ಜೋಡಿಸಿರುವ ಕಂಪನಿಗಳಿಗೆ ನೀಡುವ ಗ್ರೇಡ್‌ಗಳಲ್ಲಿ ಈ ಬಾರಿ ರಿಲಯನ್ಸ್ ಜಿಯೋ(Reliance Jio) ಎ ಗ್ರೇಡ್ ಪಡೆದುಕೊಂಡಿದೆ. ಪರಿಸರಕ್ಕೆ ಹಾನಿಮಾಡದೇ ಸ್ವಚ್ಛ ಕಂಪನಿಗಳಿಗೆ CDP(carbon disclosure project) ನೀಡುವ ಗ್ರೇಡ್ ಸರ್ಟಿಫಿಕೇಟ್ ಇದಾಗಿದೆ.
CDP 2021ನೇ ಸಾಲಿನಲ್ಲಿ A ದರ್ಜೆ ಪಡೆದ ದೇಶದ ಏಕೈಕ ಟೆಲಿಕಾಂ ಡಿಜಿಟಲ್ ಕಂಪನಿ(Telecom and Digital Company) ರಿಲಯನ್ಸ್ ಜಿಯೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ‘B’ ದರ್ಜೆ ಪಡೆದಿದ್ದ ಜಿಯೋ, ಒಂದೇ ವರ್ಷದಲ್ಲಿ ‘A’ ದರ್ಜೆಗೆ ಏರಿದೆ. ಭಾರ್ತಿ ಏರ್ಟೆಲ್(bharti airtel) ಕಳೆದ ವರ್ಷ ‘D’ ದರ್ಜೆಯಲ್ಲಿದ್ದು, ಈ ಸಾಲಿನಲ್ಲಿ ‘C’ ದರ್ಜೆಗೇರಿದೆ. ದೇಶದಲ್ಲಿ ಅತ್ಯಂತ ಕಡಮೆ ಅವಧಿಯಲ್ಲಿ ಮೊಬೈಲ್ ಕರೆ ಮತ್ತು ಡೇಟಾ ಸೇವೆ ಒದಗಿಸುವಲ್ಲಿ ಅಗ್ರಸ್ಥಾನಕ್ಕೆ ಏರಿರುವ ರಿಲಯನ್ಸ್ ಜಿಯೋ ಅಷ್ಟೇ ತ್ವರಿತಗತಿಯಲ್ಲಿ ಸಿಡಿಪಿಯ ‘A’ ದರ್ಜೆಗೆ ಏರಿರುವುದು ವಿಶೇಷ.