ಜೈಲು ಅಂತಿದ್ದಂತೇ RCom ಷೇರು ಪಾತಾಳಕ್ಕೆ: ಅನಿಲ್‌ಗೇನೂ ಆಗ್ತಿಲ್ಲ ಮಾಡಕ್ಕೆ!

By Web DeskFirst Published Feb 20, 2019, 1:54 PM IST
Highlights

ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಅನಿಲ್ ಅಂಬಾನಿಗೆ ಮತ್ತೊಂದು ಶಾಕ್| ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡ RCom ಷೇರು ಮೌಲ್ಯ| ಎರಿಕ್ಸನ್ ಕಂಒನಿಗೆ ನಾಲ್ಕು ವಾರಗಳಲ್ಲಿ 450 ಕೋಟಿ ರೂ. ಪಾವತಿಸಬೇಕು ಅನಿಲ್| ಅನಿಲ್ ಒಡೆತನದ ಎಲ್ಲಾ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತ|

ಮುಂಬೈ(ಫೆ.20): ಎರಿಕ್ಸನ್ ಕಂಪನಿಗೆ ನಾಲ್ಕು ವಾರಗಳಲ್ಲಿ 450 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ ಸುಪ್ರೀಂ ಆದೇಶ ಹೊರ ಬೀಳುತ್ತಿದ್ದಂತೇ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಸಂಸ್ಥೆಯ ಷೇರುಗಳು ಭಾರೀ ಕುಸಿತ ಕಂಡಿವೆ.

ಹೌದು, ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು RCom ಷೇರುಗಳು ಕುಸಿತ ಕಂಡಿದ್ದು, ಪ್ರತಿ ಷೇರು ಸುಮಾರು ಶೇ. 9.46ರಷ್ಟು ಕುಸಿದಿವೆ. ಅದರಂತೆ RCom ಪ್ರತಿ ಷೇರಿನ ಬೆಲೆ ಇದೀಗ 5.45 ರೂ. ಆಗಿದೆ.

ಇದೇ ವೇಳೆ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರು ಮೌಲ್ಯ ಶೇ. 8.75ರಷ್ಟು ಕುಸಿದಿದ್ದು, ಪ್ರತಿ ಷೇರಿನ ಬೆಲೆ ಇದೀಗ 111.50 ರೂ.ಆಗಿದೆ. ಇನ್ನು ರಿಲಯನ್ಸ್ ಕ್ಯಾಪಿಟಲ್ ಷೇರು ಮೌಲ್ಯ ಶೇ. 10.26 ರಷ್ಟು ಕುಸಿದಿದ್ದು, ಪ್ರತಿ ಷೇರಿನ ಬೆಲೆ ಇದೀಗ 135.95 ರೂ. ಆಗಿದೆ.

ಇನ್ನುಳಿದಂತೆ ರಿಲಯನ್ಸ್ ಪವರ್ ಷೇರು ಮೌಲ್ಯ ಶೇ.5.53ರಷ್ಟು ಕುಸಿತ ಕಂಡಿದ್ದು, ಪ್ರತಿ ಷೇರಿನ ಬೆಲೆ ಇದೀಗ 10.25 ರೂ. ಆಗಿದೆ. ಅಲ್ಲದೇ ರಿಲಯನ್ಸ್ ನೇವಲ್ ಆ್ಯಂಡ್ ಎಂಜಿನಿಯರಿಂಗ್ ಷೇರು ಮೌಲ್ಯ ಶೇ. 8.56ರಷ್ಟು ಕುಸಿದಿದ್ದು, ಪ್ರತಿ ಷೇರಿನ ಬೆಲೆ ಇದೀಗ 8.22 ರೂ. ಆಗಿದೆ.

ಅನಿಲ್ ಫಿನಿಷ್: ಸಾಲ ತೀರಿಸಿ ಇಲ್ಲ ಜೈಲಿಗೆ ಹೋಗಿ ಎಂದ ಸುಪ್ರೀಂ!

click me!