ಸಂಭ್ರಮ ಡಬಲ್: ವರ್ಷದ ಕೊನೆಯ ದಿನ ಜಬರ್ದಸ್ತ್ ಗಿಫ್ಟ್ ಕೊಟ್ಟ ಜಿಯೋ!

Suvarna News   | Asianet News
Published : Dec 31, 2019, 06:43 PM IST
ಸಂಭ್ರಮ ಡಬಲ್: ವರ್ಷದ ಕೊನೆಯ ದಿನ ಜಬರ್ದಸ್ತ್ ಗಿಫ್ಟ್ ಕೊಟ್ಟ ಜಿಯೋ!

ಸಾರಾಂಶ

2019 ವರ್ಷದ ಕೊನೆಯ ದಿನ ಸಿಹಿ ಸುದ್ದು ನೀಡಿದ ರಿಲಯನ್ಸ್ ಜಿಯೋ| ಕೊನೆಯ ದಿನ ರಿಲಯನ್ಸ್ ಜಿಯೋದಿಂದ ಭಾರೀ ಗಿಫ್ಟ್| ಇ-ಜಿಯೋ ಮಾರ್ಟ್ ಉದ್ಘಾಟಿಸಿದ ರಿಲಯನ್ಸ್ ಜಿಯೋ ಕಂಪನಿ| ರಿಲಯನ್ಸ್ ರಿಟೇಲ್ ನಿಯಂತ್ರಣದಲ್ಲಿ ದೇಶಾದ್ಯಂತ ಇ-ಜಿಯೋ ಮಾರ್ಟ್| ಮುಂಬೈ, ಥಾಣೆ ಹಾಗೂ ಕಲ್ಯಾಣದಲ್ಲಿ ಮೊದಲ ಇ-ಜಿಯೋ ಮಾರ್ಟ್ ವ್ಯವಸ್ಥೆ| ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಿಯೋ ಮಾರ್ಟ್'ಗಳು| 50 ಸಾವಿರಕ್ಕೂ ಹೆಚ್ಚು ಗ್ರಹೋಪಯೋಗಿ ವಸ್ತುಗಳ ಮಾರಾಟದ ಉದ್ದೇಶ| ಮನೆಗೆ ಉಚಿತವಾಗಿ ಸಾಮಾನು ಸರಂಜಾಮುಗಳನ್ನು ತಲುಪಿಸುವ ವ್ಯವಸ್ಥೆ|

ಮುಂಬೈ(ಡಿ.31): 2019 ವರ್ಷದ ಕೊನೆಯ ದಿನವಾದ ಡಿ.31ರಂದು ರಿಲಯನ್ಸ್ ಜಿಯೋ ದೇಶದ ಜನತೆಗೆ ಭಾರೀ ಗಿಫ್ಟ್ ನೀಡಿದೆ. ಜಿಯೋ ಸಿಮ್ ಬಳಿಕ ಇದೀಗ ಇ-ಜಿಯೋ ಮಾರ್ಟ್'ಗಳನ್ನು ದೇಶಾದ್ಯಂತ ತೆರೆಯಲು ರಿಲಯನ್ಸ್ ಮುಂದಡಿ ಇಟ್ಟಿದೆ.

ರಿಲಯನ್ಸ್ ರಿಟೇಲ್ ನಿಯಂತ್ರಣದಲ್ಲಿ ದೇಶಾದ್ಯಂತ ಇ-ಜಿಯೋ ಮಾರ್ಟ್'ಗಳನ್ನು ಸ್ಥಾಪಿಸಲು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಜ್ಜಾಗಿದೆ.

ಸಿಮ್ ಆಯ್ತು, ಬರಲಿವೆ 5 ಸಾವಿರಕ್ಕೂ ಅಧಿಕ ಜಿಯೋ ಪೆಟ್ರೋಲ್‌ ಬಂಕ್‌!

ಇಂದು ಮುಂಬೈ, ಥಾಣೆ ಹಾಗೂ ಕಲ್ಯಾಣದಲ್ಲಿ ಮೊದಲ ಇ-ಜಿಯೋ ಮಾರ್ಟ್ ವ್ಯವಸ್ಥೆಯನ್ನು ಉದ್ಘಾಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಿಯೋ ಮಾರ್ಟ್'ಗಳನ್ನು ತೆರೆಯಲಾಗುವುದು ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇ- ಕಾಮರ್ಸ್‌ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯುತ್ತಿರುವ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ಪೈಪೋಟಿಯಾಗಿ ಇ- ಕಾಮರ್ಸ್‌ನ ದೈತ್ಯ ಸಂಸ್ಥೆಯನ್ನು ನಿರ್ಮಿಸುವುದಾಗಿ ಮುಖೇಶ್ ಅಂಬಾನಿ ಈ ಹಿಂದೆಯೇ ಘೋಷಿಸಿದ್ದರು. ಅದರಂತೆ ಇಂದು ಮೂರು ಮಳಿಗೆಗಳನ್ನು ತೆರೆಯಲಾಗಿದೆ.

ಮುಕೇಶ್‌ ಅಂಬಾನಿಯಿಂದ ಮತ್ತೊಂದು ದೈತ್ಯ ಇ-ಕಾಮರ್ಸ್ ಕಂಪನಿ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ತನ್ನ ಒಡೆತನದಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಮೊತ್ತದ ಇ-ಜಿಯೋ ಮಾರ್ಟ್ ಸ್ಥಾಪಿಸಿದೆ. ಈ ಸಂಸ್ಥೆ ರಿಲಯನ್ಸ್‌ ಜಿಯೊ ಇಸ್ಫೋಕಾಮ್‌ನಲ್ಲಿ ಹೂಡಿಕೆ ಮಾಡಿದೆ ಎಂದು ಸ್ಪಷ್ಟಪಡಿಸಲಾಗಿದೆ.

50 ಸಾವಿರಕ್ಕೂ ಹೆಚ್ಚು ಗ್ರಹೋಪಯೋಗಿ ವಸ್ತುಗಳ ಮಾರಾಟದ ಉದ್ದೇಶವಿದ್ದು, ಮನೆಗೆ ಉಚಿತವಾಗಿ ಸಾಮಾನು ಸರಂಜಾಮುಗಳನ್ನು ತಲುಪಿಸುವ ವ್ಯವಸ್ಥೆಯೂ ಇದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಮತ್ತೊಂದು ಕ್ಷೇತ್ರಕ್ಕೆ ರಿಲಯನ್ಸ್ ಲಗ್ಗೆ: ಅಂಬಾನಿ ಒಡೆತನಕ್ಕೆ 250 ವರ್ಷ ಹಳೆಯ ಕಂಪೆನಿ!

ಇನ್ನು ಜಿಯೋ ಮಾರ್ಟ್ ಉದ್ಘಾಟನೆಯಿಂದಾಗಿ ಭಾರತೀಯ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್'ಕಾರ್ಟ್ ಚಿಂತೆಗೀಡಾಗಿದ್ದು, ಭಾರತದ ಡಿಜಿಟಲ್ ಮಾರುಕಟ್ಟೆಯ ಚಹರೆಯೇ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..